ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಾಂಪಿಯನ್ಸ್ ಟ್ರೋಫಿ ಉಪಾಂತ್ಯಕ್ಕೇರಬಲ್ಲ ತಂಡಗಳಿವು

ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಅಲ್ಲದೆ, ಸೆಮಿಫೈನಲ್ ಹಂತಕ್ಕೇರಬಲ್ಲ ಸಾಮರ್ಥ್ಯವುಳ್ಳ ತಂಡಗಳ ಬಗ್ಗೆ ಮಾಜಿ ಕ್ರಿಕೆಟರ್ ಇಯಾನ್ ಚಾಪೆಲ್ ಏನು ಹೇಳಿದ್ದಾರೆ.

By Mahesh

ಬೆಂಗಳೂರು, ಮೇ 30: ಐಸಿಸಿ ಚಾಂಪಿಯನ್ಸ್ ಟ್ರೋಫಿ ಜೂನ್ 1ರಿಂದ ವಿದ್ಯುಕ್ತವಾಗಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಅಲ್ಲದೆ, ಸೆಮಿಫೈನಲ್ ಹಂತಕ್ಕೇರಬಲ್ಲ ಸಾಮರ್ಥ್ಯವುಳ್ಳ ತಂಡಗಳ ಬಗ್ಗೆ ಮಾಜಿ ಕ್ರಿಕೆಟರ್ ಇಯಾನ್ ಚಾಪೆಲ್ ಏನು ಹೇಳಿದ್ದಾರೆ.

ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಪಂದ್ಯಗಳು ನಡೆಯಲಿವೆ.[#CT17 #INDvPAK ಫುಲ್ ವೇಳಾಪಟ್ಟಿ ನೋಟ್ ಮಾಡ್ಕೊಳಿ!]

ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು/ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ. ಜೂನ್ 04ರಂದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಿಗದಿಯಾಗಿದೆ.

Champions Trophy: Ian Chappell picks likely semi-finalists

ಎರಡು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳಿವೆ. ಎ ಗುಂಪಿನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಬಿ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ. ಚಾಂಪಿಯನ್ಸ್ ಟ್ರೋಫಿ ಜೂನ್ 1 (ಗುರುವಾರ) ದಿ ಓವಲ್ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ಸೆಣಸಲಿದೆ.[ಚಾಂಪಿಯನ್ಸ್ ಟ್ರೋಫಿ : ಸ್ಪರ್ಧಾ ಕಣದಲ್ಲಿರುವ 8 ತಂಡಗಳಿವು]

ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾ, ಆಸ್ಟ್ರೇಲಿಯಾ, ಅತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಉಪಾಂತ್ಯ ಹಂತಕ್ಕೇರುವ ಸಾಮರ್ಥ್ಯ ಹೊಂದಿವೆ ಎಂದು ಮಾಜಿ ಕ್ರಿಕೆಟರ್ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X