ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಶಮಿಗೆ ಮುಸ್ಲಿಂ ಎಂದು ಕರೆದ ಶೋಯೆಬ್ ಗೆ ಬೈಗುಳ

ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ಅವರನ್ನು ಹೊಗಳುವಾಗ ಅವರನ್ನು ಮುಸ್ಲಿಂ ಎಂದು ಸಂಬೋಧಿಸಿದ್ದಕ್ಕಾಗಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಟ್ವಿಟರ್ ನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದ್ದಾರೆ.

ಲಂಡನ್, ಮೇ 27: ಭಾರತದ ವೇಗಿ ಮೊಹಮ್ಮದ್ ಶಮಿ ಅವರನ್ನು ಹೊಗಳುವ ಭರದಲ್ಲಿ ಅವರ ಧರ್ಮದ ಬಗ್ಗೆ ಮಾತನಾಡಿದ ಪಾಕಿಸ್ತಾನ ಆಲ್ರೌಂಡರ್ ಶೋಯೆಬ್ ಮಲಿಕ್ ಅವರಿಗೆ ಟ್ವಿಟ್ಟರ್ ನಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದೆ.

ಶೀಘ್ರದಲ್ಲೇ ಆರಂಭಗೊಳ್ಳಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಜಾಹೀರಾತಿಗಾಗಿ #AskShoib ಎಂಬ ಪ್ರಶ್ನೋತ್ತರ ಮಾಲಿಕೆಯನ್ನು ಟ್ವಿಟರ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಆಯೋಜಿಸಿತ್ತು. ಇದರಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಶೋಯೆಬ್ ಉತ್ತರಿಸಬೇಕಿತ್ತು.[ಸಚಿನ್ ಚಿತ್ರದ ಪ್ರೀಮಿಯರ್ ಶೋಗೆ ಸೆಹ್ವಾಗ್ ಬಂದಿರಲಿಲ್ಲವೇಕೆ?]

Shoaib Malik

ಅಂತೆಯೇ ಆರಂಭಗೊಂಡ ಈ ಪ್ರಶ್ನೋತ್ತರ ಮಾಲಿಕೆಯಲ್ಲಿ ಶೋಯೆಬ್ ಮಲಿಕ್ ಗೆ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬ ''ಟೀಂ ಇಂಡಿಯಾದಲ್ಲಿ ಶ್ರೇಷ್ಠ ಬೌಲರ್ ಎನ್ನಿಸುವ ನಿಮ್ಮ ಆಯ್ಕೆಯ ಬೌಲರ್ ಯಾರು'' ಎಂದು ಕೇಳಿದ್ದ.

ಇದಕ್ಕೆ ಉತ್ತರಿಸಿದ್ದ ಶೋಯೆಬ್, ''ಮೊಹಮ್ಮದ್ ಶಮಿ ಶ್ರೇಷ್ಠ ಬೌಲರ್ ಎಂದೆನಿಸುತ್ತದೆ. ಅದಕ್ಕೆ ಕಾರಣ, ಆತ ಮುಸ್ಲಿಂ ಎಂಬುದುವುದು ಮಾತ್ರವಲ್ಲ, ಅವರ ಬೌಲಿಂಗ್ ತಂತ್ರಗಾರಿಕೆ, ಮೊನಚು ಎಲ್ಲರದಲ್ಲೂ ಅವರು ಉತ್ತಮ'' ಎಂದಿದ್ದರು.[ಭಾರತ vs ನ್ಯೂಜಿಲೆಂಡ್, ಸ್ಪಿನ್ ಬಲವಿದ್ದರೆ ಗೆಲುವು!]

ಈ ಉತ್ತರ ಸರಿಯಾಗಿದ್ದರೂ, ಶಮಿ ಅವರನ್ನು 'ಮುಸ್ಲಿಂ' ಆಟಗಾರ ಎಂದು ವಿಭಾಗೀಕರಿಸಿದ್ದಕ್ಕೆ ಟ್ವಿಟರ್ ನಲ್ಲಿ ಶೋಯೆಬ್ ವಿರುದ್ಧ ಟೀಕೆಗಳ ಸುರಿಮಳೆ ಸಂದವು.[ಕೌಂಟಿಯಲ್ಲಿ ಚೊಚ್ಚಲ ಶತಕ ಸಿಡಿಸಿದ ಚೇತೇಶ್ವರ್ ಪೂಜಾರಾ]

ಯಾವುದೇ ತಂಡದ ಆಟಗಾರನನ್ನು ಹೊಗಳುವಾಗ ಆತನ ಧರ್ಮವನ್ನು ಉಲ್ಲೇಖಿಸಿ ಹೊಗಳುವುದು ಸರಿಯಲ್ಲ ಎಂದು ಹಲವಾರು ಮಂದಿ ಮಲ್ಲಿಕ್ ಗೆ ಬುದ್ಧಿವಾದ ಹೇಳಿದ್ದರೆ, ಮತ್ತೆ ಕೆಲವರು, ಶೋಯೆಬ್ ಅವರೇ ಶಮಿ ಭಾರತದ ಹೆಮ್ಮೆಯ ಆಟಗಾರ. ದಯವಿಟ್ಟು ಅವರನ್ನು ಧರ್ಮದ ಹೆಸರಿನಲ್ಲಿ ಬೇರೆಯವರೆಂದು ತೋರುವ ಪ್ರಯತ್ನ ಮಾಡಬೇಡಿ ಎಂದಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X