ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 8 ವಿಕೆಟ್ ಗಳಿಂದ ಜಯ ಗಳಿಸಿದ ಟೀಮ್ ಇಂಡಿಯಾ, ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ.

By Mahesh

ಲಂಡನ್, ಜೂನ್ 11: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 8 ವಿಕೆಟ್ ಗಳಿಂದ ಜಯ ಗಳಿಸಿದ ಟೀಮ್ ಇಂಡಿಯಾ, ಉಪಾಂತ್ಯಕ್ಕೆ ಲಗ್ಗೆ ಇಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತಕ್ಕೆ 192 ರನ್ ಟಾರ್ಗೆಟ್ ನೀಡಲಾಗಿತ್ತು. 2ವಿಕೆಟ್ ಕಳೆದುಕೊಂಡು ಈ ಗುರಿಯನ್ನು 38 ಓವರ್ ಗಳಲ್ಲಿ ತಲುಪಿದ ಕೊಹ್ಲಿ ಪಡೆ ಜಯಭೇರಿ ಬಾರಿಸಿದೆ.

ಚಾಂಪಿಯನ್ಸ್ ಟ್ರೋಫಿ 2017 : ಗ್ಯಾಲರಿ | ವೇಳಾಪಟ್ಟಿ | 8 ತಂಡಗಳು

ಟೀಂ ಇಂಡಿಯಾ ಚೇಸ್:
* ಶಿಖರ್ ಧವನ್ 78ರನ್
(83 ಎಸೆತ, 12‍ ಬೌಂಡರಿ, 1 ಸಿಕ್ಸರ್), ವಿರಾಟ್ ಕೊಹ್ಲಿ ಅಜೇಯ 76ರನ್ (101 ಎಸೆತಗಳು, 7‍ ಬೌಂಡರಿ, 1 ಸಿಕ್ಸರ್) ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
* ಯುವರಾಜ್ ಸಿಂಗ್ ಅಜೇಯ 23ರನ್ ಗಳಿಸಿ ಉತ್ತಮ ಸಾಥ್ ನೀಡಿದರು

ಗ್ಯಾಲರಿ: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು, ಉಪಾಂತ್ಯಕ್ಕೆ ಲಗ್ಗೆ ಇಟ್ಟ ಭಾರತ

ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್:
* 44.3 ಓವರ್ ಗಳಲ್ಲಿ 191ಸ್ಕೋರಿಗೆ ಆಲೌಟ್.

* ಕೊನೆ 51ರನ್ ಗಳಿಗೆ 7ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ.
* ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಗಳಿಸಿದರು.
* ಮೂರು ರನ್ ಔಟ್ ಗಳು ದಕ್ಷಿಣ ಆಫ್ರಿಕಾಕ್ಕೆ ಮುಳುವಾಯಿತು.
* ಕ್ವಾಂಟನ್ ಡಿ ಕಾಕ್ 53, ಹಶೀಂ ಆಮ್ಲಾ 35, ಡುಫ್ಲೆಸಿಸ್ 36ರನ್ ಗಳಿಸಿದರು.

* ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡುತ್ತಿದ್ದಾರೆ.

Champions Trophy 2017 : Match 11: India win the toss and elect to field first against South Africa

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹಾಲಿ ಚಾಂಪಿಯನ್ಸ್ ಟೀಂ ಇಂಡಿಯಾಕ್ಕೆ ಶ್ರೀಲಂಕಾ ಸೋಲುಣಿಸುತ್ತಿದ್ದಂತೆ ಅಂಕಪಟ್ಟಿ, ರನ್ ರೇಟ್ ಲೆಕ್ಕಾಚಾರ ಶುರುವಾಗಿದೆ.ಜತೆಗೆ ಭಾನುವಾರ(ಜೂನ್ 12)ದ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.

ಬಿ ಗುಂಪಿನಲ್ಲಿ ಎಲ್ಲಾ ತಂಡಗಳಿಗೂ ಸೆಮಿಫೈನಲ್ ಗೇರುವ ಅವಕಾಶ ಲಭಿಸುವಂತಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಭಾರತ ಸೆಮಿಫೈನಲ್ ಗೇರಲಿದೆ. ಭಾರತ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ ತಂಡಗಳ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಆದರೆ, ಒಂದು ವೇಳೆ ಮಳೆ ಬಿದ್ದರೆ, ಭಾರತಕ್ಕೆ ಲಾಭ. ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ಪಂದ್ಯವೂ ಮಳೆಯಿಂದ ರದ್ದಾದರೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸೆಮೀಸ್ ಹಂತಕ್ಕೇರಲಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X