ಭಾರತ vs ಇಂಗ್ಲೆಂಡ್ ಫೈನಲ್, ಇದು ಜನರ ಬಯಕೆ: ಕೊಹ್ಲಿ

By:
Subscribe to Oneindia Kannada

ಲಂಡನ್, ಜೂನ್ 14: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ 11ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 8 ವಿಕೆಟ್ ಗಳಿಂದ ಜಯ ಗಳಿಸಿದ ಟೀಮ್ ಇಂಡಿಯಾ, ಸೆಮಿಫೈನಲ್ ನಲ್ಲಿ ಬಾಂಗ್ಲಾ ವಿರುದ್ಧ ಸೆಣೆಸಲಿದೆ.

ಎಲ್ಲರೂ ಭಾರತ -ಪಾಕಿಸ್ತಾನ ಫೈನಲ್ ಎದುರು ನೋಡುತ್ತಿದ್ದರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇಂಡೋ- ಆಂಗ್ಲ ಕದನದ ಬಗ್ಗೆ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಹೋಲುವ ಅಣ್ತಮ್ಮ ಕರಾಚಿಯಲ್ಲಿ ಪತ್ತೆ!

ಫೈನಲ್‌ ಪಂದ್ಯದಲ್ಲಿ ಭಾರತ- ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗುವುದು ಸಾರ್ವಜನಿಕರ ಅಶಯವಾಗಿದೆ' ಎಂದು ಕೊಹ್ಲಿ ಅಭಿಪ್ರಾಯ ಪಟ್ಟಿದ್ದಾರೆ.

Champions Trophy 2017: Everyone wants to see an India-England final, says Virat Kohli

ಕಾರ್ಡಿಫ್‌ನಲ್ಲಿ ಬುಧವಾರ (ಜೂನ್ 14) ದಂದು ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ -ಪಾಕಿಸ್ತಾನ ತಂಡಗಳು ಸೆಣಸಲಿವೆ. ಗುರುವಾರ (ಜೂನ್ 15)ದಂದು ಎಜ್ ಬಾಸ್ಟನ್‌ನಲ್ಲಿ ಭಾರತ- ಬಾಂಗ್ಲಾದೇಶ ತಂಡಗಳು ಹೋರಾಟ ನಡೆಸಲಿವೆ.

ಏಕದಿನ ಶ್ರೇಯಾಂಕ: ಎಬಿಡಿ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕೊಹ್ಲಿ

ಭಾರತ- ಇಂಗ್ಲೆಂಡ್‌ ನಡುವಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾರತೀಯ ಹೈಕಮಿಷನ್ ವಿಶೇಷ ಔತಣ ಕೂಟದಲ್ಲಿ ಪಾಲ್ಗೊಂಡ ಬಳಿಕ ವಿರಾಟ್ ಕೊಹ್ಲಿ ಮಾತನಾಡಿ, ಇಂಗ್ಲೆಂಡ್ ವಿರುದ್ಧ ಫೈನಲ್ ಆಡುವುದು ಉತ್ತಮ ಎಂದಿದ್ದಾರೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಲೀಗ್‌ ಪಂದ್ಯಗಳು ಕಠಿಣವಾಗಿತ್ತು. ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾ ಎದುರು ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸುವುದು ನಮ್ಮ ಮೊದಲ ಗುರಿಯಾಗಿದೆ ಎಂದರು.

'ಮ್ಯಾಥ್ಯೂಸ್ ಜತೆ ಝನೈಬ್ ಸೆಲ್ಫಿ, ಪಾಕಿಸ್ತಾನಕ್ಕೆ ಗೆಲುವು'

ಫೈನಲ್‌ ಪಂದ್ಯದಲ್ಲಿ ಭಾರತ- ಇಂಗ್ಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ, ಆದರಂತೆ ಉತ್ತಮ ಪ್ರದರ್ಶನ ತೋರುವ ತಂಡ ಜಯಶಾಲಿಯಾಗಲಿದೆ' ಎಂದು ಭಾರತದ ಹೈಕಮೀಷನರ್‌ ಯಶ್‌ವರ್ಧನ್‌ ಸಿಂಗ್‌ ತಿಳಿಸಿದ್ದಾರೆ.

English summary
Done with the tough part of making it through the league phase, Indian captain Virat Kohli says opposition hardly matters in the Champions Trophy semi-final and final even though an India-England final is what everybody seems to want.
Please Wait while comments are loading...