ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ಬಗ್ಗುಬಡಿದ ಟೀಂ ಇಂಡಿಯಾಕ್ಕೆ ನಗದು ಬಹುಮಾನ

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾಕ್ಕೆ ಅಭಿನಂದನೆ ಜತೆಗೆ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.

By Mahesh

ಧರ್ಮಶಾಲಾ, ಮಾರ್ಚ್ 28: ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು, ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿ ಹಿಡಿದ ಟೀಂ ಇಂಡಿಯಾಕ್ಕೆ ಅಭಿನಂದನೆ ಜತೆಗೆ ನಗದು ಬಹುಮಾನವನ್ನು ಮಂಗಳವಾರದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ.

| ಗ್ಯಾಲರಿ | ಟ್ವೀಟ್ ಅಭಿನಂದನೆ

ನಾಲ್ಕನೇ ಟೆಸ್ಟ್ ಪಂದ್ಯವನ್ನು 8 ವಿಕೆಟ್ ಗಳಿಂದ ಗೆಲ್ಲುವ ಮೂಲಕದ ಒಂದು ಸೀಮಿತ ಅವಧಿಯಲ್ಲಿ ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ಧದ ಸರಣಿ ಗೆಲುವು ಸಾಧಿಸಿದ ದಾಖಲೆಯನ್ನು ಭಾರತ ಪಡೆದುಕೊಂಡಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಮಾತ್ರ ಈ ಸಾಧನೆ ಮಾಡಿದೆ.[ಎಲ್ಲಾ ಟೆಸ್ಟ್ ತಂಡಗಳ ವಿರುದ್ಧ ಟೀಂ ಇಂಡಿಯಾಕ್ಕೆ ಸರಣಿ ಗೆಲುವು]

Cash awards for Virat Kohli-led India for winning Border-Gavaskar Trophy


* ಈ ಸಾಧನೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತಕ್ಕೆ 'ಗದೆ'(mace) ಜತೆಗೆ 1 ಮಿಲಿಯನ್ ಡಾಲರ್ ಬೋನಸ್ ಸಿಗಲಿದೆ. [ಡಿಆರ್ ಎಸ್ ವಿವಾದಕ್ಕೆ ಕ್ಷಮೆ ಕೋರಿದ ಸ್ಟೀವನ್ ಸ್ಮಿತ್ ]

* ಬಾರ್ಡರ್ -ಗವಾಸ್ಕರ್ ಟ್ರೋಫಿ ಹಾಗೂ ಪ್ರತಿ ಆಟಗಾರರಿಗೆ ಚೆಕ್ ಗಳನ್ನು ಮಾಜಿ ನಾಯಕ ಸುನಿಲ್ ಗವಾಸ್ಕರ್ ವಿತರಿಸಲಿದ್ದಾರೆ.

* ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ ತಂಡದ ಪ್ರತಿ ಸದಸ್ಯರಿಗೆ 50 ಲಕ್ಷ ರು ಗಳನ್ನು ಬಿಸಿಸಿಐ ಘೋಷಿಸಿದೆ.[ಟೆಸ್ಟ್ ಸರಣಿಯ ದಾಖಲೆಗಳು, ಮುಖ್ಯಾಂಶಗಳ ಸಂಪೂರ್ಣ ವಿವರ]

* ಟೀಂ ಇಂಡಿಯಾದ ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ 25 ಲಕ್ಷ ರು ಹಾಗೂ ಸಹಾಯಕ ಸಿಬ್ಬಂದಿಗಳಿಗೆ 15 ಲಕ್ಷ ರು ನೀಡಲಾಗುತ್ತಿದೆ.

* 2016-17ರಲ್ಲಿ ತವರಿನಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಂದು ಕೂಡಾ ಸೋತಿಲ್ಲ. ನ್ಯೂಜೆಲೆಂಡ್ (3-0), ಇಂಗ್ಲೆಂಡ್ (4-0), ಬಾಂಗ್ಲಾದೇಶ (1-0), ಆಸ್ಟ್ರೇಲಿಯಾ (2-1). 10ರಲ್ಲಿ ಗೆಲುವು, 1 ಸೋಲು ಹಾಗೂ 2 ಡ್ರಾ. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Read in English: Cash awards for Team India
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X