ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಮ್ಯಾಚಲ್ಲಿ 13 ಬ್ಯಾಟ್ಸ್ ಮನ್ 'ಡಕ್' ಆಗಿ ದಾಖಲೆ!

By Mahesh

ಬೆಂಗಳೂರು, ಜೂ.08: ಒಂದೇ ಓವರ್ ನಲ್ಲಿ 22 ರನ್ ಹೊಡೆದಿದ್ದರಂತೆ, ಒಂದೇ ಓವರ್ ನಲ್ಲಿ 6 ವಿಕೆಟ್ ಬಿತ್ತಂತೆ ಹಾಗಂತೆ, ಹೀಗಂತೆ ಕ್ರಿಕೆಟ್ ಪಂದ್ಯಗಳ ಬಗ್ಗೆ ಕಥೆಗಳನ್ನು ಕೇಳಿರುತ್ತೀರಿ. ಈಗ ಇದೇ ಸಾಲಿಗೆ ಸೇರಬಲ್ಲ ಪಂದ್ಯವೊಂದರ ಸ್ಕೋರ್ ಕಾರ್ಡ್ ಇಲ್ಲಿದೆ.

ಒಂದೇ ಪಂದ್ಯದಲ್ಲಿ 14 ಜನ ಬ್ಯಾಟ್ಸ್ ಮನ್ ವಿಶೇಷವಾಗಿ ಔಟ್ ಆಗಿ ದಾಖಲೆ ಪುಸ್ತಕ ಸೇರಿದ್ದಾರೆ. ಒಂದೇ ತಂಡದ ಬ್ಯಾಟ್ಸ್ ಮನ್ ಡಕ್ ಹೊಡೆದರೆ ಮತ್ತೊಂದು ತಂಡದ ಬ್ಯಾಟ್ಸ್ ಮನ್ ಒಬ್ಬ ಎರಡು ಬಾರಿ ಚೆಂಡು ಬಾರಿಸಿದ ತಪ್ಪಿಗೆ 'hit the ball twice' ಎಂದು ಔಟ್ ನೀಡಲಾಗಿದೆ.

13 ducks in 1 match; batsman out 'hit the ball twice'

ಒಂದೆಡೆ ಎಲ್ಲರೂ ಶೂನ್ಯ ಸುತ್ತಿ ಪೆವಿಲಿಯನ್ ಗೆ ಪೆರೇಡ್ ನಡೆಸುತ್ತಿದ್ದರೆ, ಮತ್ತೊಂದೆಡೆ ಆದಿತ್ಯಾ ಎಂಬ ಬ್ಯಾಟ್ಸ್ ಮನ್ 43 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದರು. ಇಂಥದ್ದೊಂದು ವಿಚಿತ್ರ ನಡೆದಿದ್ದು, ಚೆಕ್ ರಿಪಬ್ಲಿಕ್ ನ ಪ್ರಾಗ್ ನಲ್ಲಿರುವ ಕ್ರಿಕೆಟ್ ವಿನೋರ್ ಗ್ರೌಂಡ್ ನಲ್ಲಿ ಪಂದ್ಯದಲ್ಲಿ ಎಂಬುದು ಗಮನಾರ್ಹ.

ಫುಟ್ಬಾಲ್, ಟೆನಿಸ್ ಪ್ರಿಯ ರಾಷ್ಟ್ರ ಚೆಕ್ ರಿಪಬ್ಲಿಕ್ ನಲ್ಲಿ ಕ್ರಿಕೆಟ್ ಗಾಳಿ ಬೀಸಲು ಆರಂಭಿಸಿದ್ದು 2000ರ ನಂತರ ಎನ್ನಬಹುದು. ಅಂದಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಸದಸ್ಯತ್ವ ಪಡೆದುಕೊಂಡಿರುವ ಚೆಕ್ ಗಣರಾಜ್ಯದಲ್ಲಿ ಇತ್ತೀಚೆಗೆ 40 ಓವರ್ ಗಳ ಕ್ರಿಕೆಟ್ ಲೀಗ್ ನಡೆಸಲಾಯಿತು. 6 ತಂಡಗಳು ಇದರಲ್ಲಿ ಭಾಗವಹಿಸಿದ್ದವು.

ಐಸಿಸಿ ಯುರೋಪಿಯನ್ ಡಿವಿಷನ್ 5 ಚಾಂಪಿಯನ್ಸ್ ಪಂದ್ಯಾವಳಿಯಲ್ಲಿ ಪ್ರಾಗ್ ನ ಬೊಹೆಮಿಯಾನ್ ಕ್ರಿಕೆಟ್ ಕ್ಲಬ್ ಹಾಗೂ ಪ್ರಾಗ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ಇಂಥ ವಿಚಿತ್ರ ನಡೆದಿದೆ.

cricket

ಮೊದಲು ಬ್ಯಾಟ್ ಮಾಡಿದ ಬೊಹೆಮಿಯಾನ್ ಕ್ಲಬ್ 22.2 ಓವರ್ ಗಳಲ್ಲಿ 126/8 ಸ್ಕೋರ್ ಆಗಿದ್ದಾಗ ಇನ್ನಿಂಗ್ಸ್ ಗೆ ಅಂತ್ಯ ಹಾಡಿದೆ. ಇನ್ನೂ 2 ವಿಕೆಟ್ ಇದ್ದರೂ ಇನ್ನಿಂಗ್ಸ್ ಮುಂದುವರೆಸಿಲ್ಲವೇಕೆ ಎಂಬುದು ತಿಳಿದಿಲ್ಲ. ಬೊಹೆಮಿಯಾನ್ ಪರ ಮೂವರು ಡಕ್ ಔಟ್ ಆದರು. ಒಬ್ಬ ಬ್ಯಾಟ್ಸ್ ಮನ್ ಚೆಂಡು ಎರಡು ಬಾರಿ ಹೊಡೆದ ತಪ್ಪಿಗೆ ಪೆವಿಲಿಯನ್ ಸೇರಿದರು.

ನಂತರ ಬ್ಯಾಟಿಂಗ್ ಗೆ ಬಂದ ಪ್ರಾಗ್ ಸಿಸಿ ಇನ್ನಿಂಗ್ಸ್ ನಲ್ಲಿ 9 ಜನ ಡಕ್ ಹೊಡೆದರು. 14 ಓವರ್ ಗಳಲ್ಲಿ 54ರನ್ನಿಗೆ ತಂಡ ಆಲೌಟ್ ಆಯಿತು. ಆದಿತ್ಯಾ ಜೈಸ್ವಾಲ್ 43ರನ್ ಗಳಿಸಿ ಅಜೇಯರಾಗಿ ಉಳಿದರೆ, ಮತ್ತೊಬ್ಬ ಆಟಗಾರ ಅಭಿ ಸಮಂತ್ 1 ರನ್ ಗಳಿಸಿದ್ದೇ ಸಾಧನೆ.

ಏನಿದು ಹಿಟ್ ದ ಬಾಲ್ ಟ್ವೈಸ್ ನಿಯಮ?
ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಎರಡು ಬಾರಿ ಬ್ಯಾಟ್ ನಿಂದ ಅಥವಾ ದೇಹದ ಭಾಗಕ್ಕೆ ತಾಗಿ ಚೆಂಡನ್ನು ಬಾರಿಸಿದ್ದರೆ ಅದು ಔಟ್ ಎಂದು ಪರಿಗಣಿಸಲಾಗುತ್ತದೆ. ಗಿಲ್ಲಿ ದಾಂಡುವಾಗ ಗಿಲ್ಲಿಯನ್ನು ಎರಡು ಬಾರಿ ಟಾಸ್ ಮಾಡಿಕೊಂಡು ಹೊಡೆಯುವ ರೀತಿ ಕ್ರಿಕೆಟ್ ಚೆಂಡನ್ನು ಹೊಡೆಯುವಂತಿಲ್ಲ. ಅದರೆ, ಈ ರೀತಿ ಔಟಾದ ಬ್ಯಾಟ್ಸ್ ಮನ್ ವಿಕೆಟ್ ಬೌಲರ್ ಗೆ ಸೇರುವುದಿಲ್ಲ. ಇದು ಕ್ರಿಕೆಟ್ ನಲ್ಲಿ ಅಪರೂಪದ ವಿಕೆಟ್ ಎನಿಸಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X