ಶಾಸ್ತ್ರಿ ಇಚ್ಛೆಯಂತೆ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ಆಯ್ಕೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 18: ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಇಚ್ಛೆಯಂತೆ ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಹಾಗೂ ಆರ್ ಶ್ರೀಧರ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ(ಜುಲೈ 18) ದಂದು ಪ್ರಕಟಿಸಿದೆ.

ಜುಲೈ 21ರಂದು ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು,ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಗಳನ್ನಾಡಲಿದೆ.

ಭರತ್ ಅರುಣ್ ಪರ ರವಿಶಾಸ್ತ್ರಿ ಬ್ಯಾಟಿಂಗ್ ಏಕೆ?

Bharat Arun appointed India's bowling coach

ಭರತ್ ಅರುಣ್ ಹಾಗೂ ಆರ್ ಶ್ರೀಧರ್ ಅವರು ಮುಂದಿನ ಎರಡು ವರ್ಷಗಳ ಕಾಲ ಟೀಂ ಇಂಡಿಯಾ ಜತೆಗಿರಲಿದ್ದಾರೆ.ರಾಹುಲ್ ದ್ರಾವಿಡ್ ಹಾಗೂ ಜಹೀರ್ ಅವರ ನೇಮಕಾತಿ ಬಗ್ಗೆ ಯಾವುದೇ ವಿವರ ನೀಡಿಲ್ಲ. ಹೀಗಾಗಿ ವಿಶೇಷ ಸಲಹೆಗಾರರ ಹುದ್ದೆ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

2014ರಲ್ಲಿ ಅಸ್ಟ್ರೇಲಿಯಾದ ಜೋ ಡಾಸ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಸ್ಥಾನ ತೊರೆದ ಬಳಿಕ ಭರತ್ ಅರುಣ್ ಅವರು ಆ ಸ್ಥಾನವನ್ನು ತುಂಬಿದ್ದರು. 2016ರಲ್ಲಿ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ನೇಮಕವಾದ ಬಳಿಕ ಕೋಚಿಂಗ್ ತಂಡ ಬದಲಾಯಿತು.

ಭರತ್ ಅರುಣ್ ಅವರು ಕೋಚ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ.ಭರತ್ ಅರುಣ್ ಅವರ ತರಬೇತಿ ಪಡೆದ ಅಂಡರ್ 19 ಭಾರತ ತಂಡ 2012ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಇಲ್ಲಿ ಮರೆಯುವಂತಿಲ್ಲ. 54 ವರ್ಷ ವಯಸ್ಸಿನ ಭರತ್ ಅವರುಆರ್ ಸಿಬಿಯ ಮುಖ್ಯ ಬೌಲಿಂಗ್ ಕೋಚ್ ಆಗಿದ್ದವರು. ದಕ್ಷಿಣ ಆಫ್ರಿಕಾದ ಬೌಲಿಂಗ್ ದಿಗ್ಗಜ ಅಲಾನ್ ಡೋನಾಲ್ಡ್ ಜೊತೆ ಕೂಡಿ ಆರ್ ಸಿಬಿ ಬೌಲರ್ ಗಳಿಗೆ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.

GST 2017 Impact : A Baby In Rajasthan Born
English summary
Bharat on Tuesday was appointed India's bowling coach of the Indian team that will be coached by Ravi Shastri. Sanjay Bangar will be assistant coach and R Sridhar will continue as fielding coach.
Please Wait while comments are loading...