ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಪ್ರಾಪ್ತೆಗೆ ಕಿರುಕುಳ, ಬಾಂಗ್ಲಾ ಕ್ರಿಕೆಟರ್ ನ್ಯಾಯಾಂಗ ಬಂಧನ

By Mahesh

ಢಾಕಾ, ಅ.06 : ಅಪ್ರಾಪ್ತ ಮನೆ ಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತು ತಲೆ ಮರೆಸಿಕೊಂಡಿದ್ದ ಬಾಂಗ್ಲಾದೇಶದ ಕ್ರಿಕೆಟರ್ ಶಹದಾತ್ ಹುಸೇನ್ ರನ್ನು ಸ್ಥಳೀಯ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ಪ್ರಕರಣದಲ್ಲಿ ಕ್ರಿಕೆಟರ್ ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಆರೋಪಿಯಾಗಿರುವ ಹುಸೇನ್ ಅವರ ಪತ್ನಿಯನ್ನು ಬಾಂಗ್ಲಾದೇಶ ಪೊಲೀಸರು ಭಾನುವಾರ ಬಂಧಿಸಿದ್ದರು. ಆದರೆ, ಹುಸೇನ್ ನಾಪತ್ತೆಯಾಗಿದ್ದರು. ತವರು ಮನೆಯಲ್ಲಿದ್ದ ಹುಸೇನ್ ಅವರ ಪತ್ನಿ ನೃತ್ತೋ ಶಹದಾತ್ ಅವರನ್ನು ಸೆರೆ ಹಿಡಿಯಲಾಗಿತ್ತು.[ಮನೆಕೆಲಸದಾಕೆ ಮೇಲೆ ಹಲ್ಲೆ, ಕ್ರಿಕೆಟರ್ ಪತ್ನಿ ಬಂಧನ]

ಹುಸೇನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ಯುಸೂಫ್ ಹುಸೇನ್ ಅವರು ತಿರಸ್ಕರಿಸಿ, ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹುಸೇನ್ ಪರ ವಾದಿಸಿದ ವಕೀಲರು, ನನ್ನ ಕಕ್ಷಿದಾರ ರಾಷ್ಟ್ರೀಯ ತಂಡದ ಪರ ಆಡುವ ಹೀರೋ ಎಂದು ಹೊಗಳಿದ್ದರು.

Bangladesh cricketer Shahadat Hossain remanded in jail over torturing maid

ಬಾಂಗ್ಲಾದೇಶದ ತಂಡದ ವೇಗಿ ಶಹದಾತ್ ಹಾಗೂ ಆತನ ಪತ್ನಿ ವಿರುದ್ಧ 11 ವರ್ಷ ವಯಸ್ಸಿನ ಮನೆಕೆಲಸದಾಕೆ ಮೇಲೆ ಹಲ್ಲೆ ಮಾಡಿದ ಆರೋಪವಿದೆ. ಕ್ರಿಕೆಟರ್ ಮನೆಯಲ್ಲಿ ಹಲ್ಲೆಗೊಳಗಾಗಿ ಅಸ್ವಸ್ಥಳಾಗಿದ್ದ ಹುಡುಗಿಯನ್ನು ರಕ್ಷಿಸಿದ ಪತ್ರಕರ್ತರೊಬ್ಬರು ಇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದರು.

ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನ್ವಯ ಇಬ್ಬರ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕೇಸು ದಾಖಲಾಗುತ್ತಿದ್ದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಶಹದಾತ್ ಅವರನ್ನು ಎಲ್ಲಾ ಬಗೆಯ ಕ್ರಿಕೆಟ್ ನಿಂದ ಅಮಾನತುಗೊಳಿಸಿದೆ.

29 ವರ್ಷ ವಯಸ್ಸಿನ ಬಾಂಗ್ಲಾದೇಶದ ಶಹದಾತ್ 38 ಟೆಸ್ಟ್ ಪಂದ್ಯ ಹಾಗೂ 51 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಪಾಕಿಸ್ತಾನ ವಿರುದ್ಧ ಕಳೆದ ಮೇ ತಿಂಗಳಿನಲ್ಲಿ ಆಡಿದ್ದ ಹುಸೇನ್ ನಂತರ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X