ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಹಡ್ಡೀನ್ ನಿವೃತ್ತಿ

By Mahesh

ಸಿಡ್ನಿ, ಮೇ.17: ವಿಶ್ವಕಪ್ ಕ್ರಿಕೆಟ್ 2015 ವಿಜೇತ ತಂಡದ ವಿಕೆಟ್ ಕೀಪರ್ ಬ್ರಾಡ್ ಹಡ್ಡೀನ್ ಅವರು ಏಕದಿನ ಕ್ರಿಕೆಟ್ ವೃತ್ತಿ ಬದುಕಿಗೆ ಭಾನುವಾರ ಗುಡ್ ಬೈ ಹೇಳಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.

ಮುಂಬರುವ ವೆಸ್ಟ್ ಇಂಡೀಸ್ ಹಾಗೂ ಯುನೈಟೆಡ್ ಕಿಂಗ್ ಡಮ್ ಟೆಸ್ಟ್ ಸರಣಿಗೂ ಮುನ್ನ ಬ್ರಾಡ್ ಹಡ್ಡೀನ್ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷ ವಯಸ್ಸಿನ ಬ್ರಾಡ್ ಹಡ್ಡೀನ್ ಅವರು 126 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ.

170 ಕ್ಯಾಚ್ ಗಳು ಹಾಗೂ 11 ಸ್ಟಂಪಿಂಗ್ಸ್ ಪಡೆದು ಆಸ್ಟ್ರೇಲಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಆಡಂ ಗಿಲ್ ಕ್ರಿಸ್ಟ್ ಹಾಗೂ ಇಯಾನ್ ಹೀಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. [ತವರು ನೆಲದಲ್ಲಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ]

Australia's wicketkeeper Brad Haddin retires from ODIs

ಜಿಂಬಾಬ್ವೆ ವಿರುದ್ಧ ಹೋಬಾರ್ಟ್ ನಲ್ಲಿ 2001ರಲ್ಲಿ ಮೊದಲ ಪಂದ್ಯವಾಡಿದ್ದರು. ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಅವರ ಟೂರ್ನಿ ಅವರ ಕೊನೆ ಟೂರ್ನಿಯಾಗಿದೆ. ಹಡ್ಡೀನ್ 31.53 ರನ್ ಸರಾಸರಿಯಂತೆ 3,122 ರನ್ ಗಳಿಸಿದ್ದರು. 110 ಅತ್ಯಧಿಕ ಸ್ಕೋರ್ ಮಾಡಿದ್ದರು. [ಕಪ್ ಗೆದ್ದ ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?]

ಸ್ವಂತ ನೆಲದಲ್ಲಿ ವಿಶ್ವಕಪ್ ಕ್ರಿಕೆಟ್ ಗೆಲ್ಲುವ ಆಸೆ ಈಡೇರಿದೆ. ಕ್ರಿಕೆಟ್ ಆಸ್ಟ್ರೇಲಿಯಾ ನೀಡಿದ ಅವಕಾಶಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಬ್ರಾಡ್ ಹಡ್ಡೀನ್ ಹೇಳಿದ್ದಾರೆ. [2015 ಶ್ರೇಷ್ಠ ತಂಡದಲ್ಲಿ ಭಾರತೀಯರೇ ಇಲ್ಲ!]

ಟೆಸ್ಟ್ ಕ್ರಿಕೆಟ್ ನಲ್ಲಿ ಹಡ್ಡೀನ್ ಸೇವೆ ಅಗತ್ಯವಿದೆ. ಫ್ರಾಂಕ್ ವೊರೆಲ್ ಟ್ರೋಫಿ ಹಾಗೂ ಆಷ್ಯಸ್ ಗಳಿಸಬೇಕಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯ ಕಾರ್ಯಕಾರಿ ಸದಸ್ಯ ಜೇಮ್ಸ್ ಸದರ್ ಲ್ಯಾಂಡ್ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2015 ಟೂರ್ನಿ ನಂತರ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆಟಗಾರ ಪಟ್ಟಿಗೆ ಹಡ್ಡೀನ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಶಹೀದ್ ಅಫ್ರಿದಿ, ಮೈಕಲ್ ಕ್ಲಾರ್ಕ್, ಮಹೇಲ ಜಯವರ್ದನೆ, ಖುರಂ ಖಾನ್, ಮಿಸ್ಬಾ ಉಲ್ ಹಕ್, ಕೈಲಿ ಮಿಲ್ಸ್, ಕುಮಾರ್ ಸಂಗಕ್ಕಾರ, ಬ್ರೆಂಡನ್ ಟೇಲರ್ ಹಾಗೂ ಡೇನಿಯಲ್ ವೆಟ್ಟೋರಿ ಅವರು ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ.
(ಎಎಫ್ ಪಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X