ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟೇಲಿಯಾದ ಕುಡುಕ ಕ್ರಿಕೆಟರ್ ಗೆ ನಿಷೇಧ

By Mahesh

ಲಂಡನ್, ಜುಲೈ 15: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಆಷ್ಯಸ್ ಸರಣಿ ನಡೆಯುತ್ತಿರುವ ಸಂದರ್ಭದಲ್ಲೇ ಕೌಂಟಿ ಕ್ರಿಕೆಟ್ ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ಆಲ್ ರೌಂಡರ್ ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದ ಮೇಲೆ ನಿಷೇಧಕ್ಕೆ ಒಳಗಾಗಿದ್ದಾರೆ.

ಆಸ್ಟ್ರೇಲಿಯಾದ ಎಡಗೈ ಬೌಲರ್ ಜೇಮ್ಸ್ ಫೌಲ್ಕನರ್​ಗೆ ನಿಗದಿತ ಓವರ್​ಗಳ 4 ಪಂದ್ಯಗಳಿಗೆ ನಿಷೇಧ ಹೇರಲಾಗಿದೆ. ಲಾಂಕ್​ಶೈರ್ ತಂಡದ ಪರ ಆಡುತ್ತಿರುವ ಫೌಲ್ಕ್​ನರ್ ಅವರು ಕೌಂಟಿ ಕ್ಲಬ್ ಕ್ರಿಕೆಟ್ ಪಂದ್ಯಗಳಲ್ಲಿ ಆಡುವಂತಿಲ್ಲ. [ಕುಡಿದು ವಾಹನ ಚಲಾವಣೆ, ಆಸೀಸ್ ಕ್ರಿಕೆಟರ್ ಜೇಮ್ಸ್ ಗೆ ಶಿಕ್ಷೆ]

ಕಳೆದ ವಾರ ಟಾಸ್ಮೇನಿಯಾ ಆಟಗಾರ ಟಿಮ್​ ಪೈನ್ ಜತೆ ಮ್ಯಾಂಚೆಸ್ಟರ್ ನಗರದಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸಿದ್ದರು. ಇದಲ್ಲದೆ ಫೌಲ್ಕನರ್ ಅವರು ಕುಡಿದ ಮತ್ತಿನಲ್ಲಿ ಮುಂದಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು.

Australia's James Faulkner suspended for drink-driving in UK

ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿದ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ, ಶಿಸ್ತು ಪಾಲನೆ ಮಾಡದೇ ನಿಯಮ ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ 4 ಪಂದ್ಯಗಳಿಂದ ಅಮಾನತುಗೊಳಿಸಿದೆ. ಸೆಪ್ಟೆಂಬರ್ 5, 2015ರ ತನಕ ಯಾವುದೇ ಪಂದ್ಯವನ್ನಾಡುವಂತಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಜುಲೈ 21ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಫೌಲ್ಕ್​ನರ್ ಕೋರ್ಟ್ ಸೂಚಿಸಿದೆ.

ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಫೌಲ್ಕನರ್ ಕಳೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯಕಾರಿ ಪ್ರಧಾನ ಮ್ಯಾನೇಜರ್ ಪ್ಯಾಟ್ ಹೋವರ್ಡ್ ಅವರು ಹೇಳಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X