ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧರ್ಮಶಾಲಾ ಟೆಸ್ಟ್: ಆಸೀಸ್ ಮೊದಲ ಇನಿಂಗ್ಸ್ ನಲ್ಲಿ 300ಕ್ಕೆ ಆಲೌಟ್

ಕುಲ್ದೀಪ್ ಸ್ಪಿನ್ ಮೋಡಿಗೆ ಕಂಗಾಲಾದ ಆಸ್ಟ್ರೇಲಿಯಾ; ಆದರೂ, ಸ್ಮಿತ್ ಅವರ ಆಕರ್ಷಕ ಶತಕ ಹಾಗೂ ಆರಂಭಿಕ ಡೇವಿಡ್ ವಾರ್ನರ್ ಹಾಗೂ ಮಧ್ಯಮ ಕ್ರಮಾಂಕದ ಮ್ಯಾಥ್ಯೂ ಹೇಡನ್ ಅವರ ಅರ್ಧಶತಕಗಳಿಂದ ಚೇತರಿಕೆ ಕಂಡ ಕಾಂಗರೂ ಪಡೆ.

ಧರ್ಮಶಾಲಾ, ಮಾರ್ಚ್ 25: ಧರ್ಮಶಾಲಾದಲ್ಲಿ ಶನಿವಾರ ಆರಂಭವಾದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತನ್ನ ಮೊದಲ ಇನಿಂಗ್ಸ್ ನಲ್ಲಿ 300 ರನ್ ಗಳಿಗೆ ಸರ್ವಪತನ ಕಂಡಿದೆ.

ಆನಂತರ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ದಿನದ ಕಾಲಾವಕಾಶದಲ್ಲಿ ಕೇವಲ ಒಂದೇ ಓವರ್ ಆಡಲು ಅವಕಾಶ ಸಿಕ್ಕಿತು. ರಾಜ್ಯದ ಆಟಗಾರ ಕೆ.ಎಲ್. ರಾಹುಲ್ ಹಾಗೂ ಮುರಳಿ ವಿಜಯ್ ಇನಿಂಗ್ಸ್ ಆರಂಭಿಸಿದರಾದರೂ ಯಾವುದೇ ರನ್ ಗಳಿಸಲಿಲ್ಲ.

ಆಸೀಸ್ ಗೆ ಕಂಟಕವಾದ ಕುಲ್ದೀಪ್: ಭಾರತದ ಸ್ಪಿನ್ನರ್ ಕುಲ್ದೀಪ್ ಅವರ ಕೈಚಳಕದ ಮೋಡಿಗೆ ದಂಗಾದ ಆಸೀಸ್, ಆರಂಭದಿಂದಲೇ ಕುಂಟುತ್ತಾ ಸಾಗಿ ಅಂತಿಮವಾಗಿ 300 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು. ಕುಲ್ದೀಪ್ ನಾಯರ್ ಅವರು 4 ವಿಕೆಟ್ ಉರುಳಿಸಿ ಆಸೀಸ್ ಶೀಘ್ರ ಪತನಕ್ಕೆ ನೆರವಾದರು. ಉಮೇಶ್ ಯಾದವ್ 2 ಹಾಗೂ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಉರುಳಿಸಿದರು.

Australia Collapses for 300 runs as Kuldeep Yadav takes 4 wickets

ಇಲ್ಲಿನ ಹಿಮಾಚಲ ಕ್ರಿಕೆಟ್ ಮೈದಾನದಲ್ಲಿ ಬೆಳಗ್ಗೆ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ತನ್ನ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಉಮೇಶ್ ಯಾದವ್ ಮೊದಲ ಪೆಟ್ಟು ನೀಡಿದರು. ಆಸೀಸ್ ನ ಮೊತ್ತ ಕೇವಲ 10 ರನ್ ಆಗಿದ್ದಾಗ ಆರಂಭಿಕ ಆಟಗಾರ ರೆನ್ಶಾ ಅವರ ವಿಕೆಟ್ ಕಬಳಿಸುವ ಮೂಲಕ ಅವರು ಭಾರತಕ್ಕೆ ಮೊದಲ ಯಶಸ್ಸು ತಂದರು.

ಆದರೆ, ಈ ಆರಂಭಿಕ ಆಘಾತದ ಹೊರತಾಗಿಯೂ ಮತ್ತೊಬ್ಬ ಆರಂಭಿಕ ಡೇವಿಡ್ ವಾರ್ನರ್, ನಾಯಕ ಸ್ಟೀವನ್ ಸ್ಮಿತ್ ಅವರು, 2ನೇ ವಿಕೆಟ್ ಗೆ 134 ರನ್ ಪೇರಿಸಿ ಇನಿಂಗ್ಸ್ ಮೇಲೆತ್ತಲು ನೆರವಾದರು.

ಆದರೆ, ಇನಿಂಗ್ಸ್ ನ ಮೊತ್ತ 144 ರನ್ ಆಗಿದ್ದಾಗ, ಅರ್ಧಶತಕ ಗಳಿಸಿದ್ದ ವಾರ್ನರ್ ವಿಕೆಟ್ ಉರುಳಿತು. ಈ ಯಶಸ್ಸು ತಂದಿದ್ದು ಕುಲ್ದೀಪ್ ಯಾದವ್.

ಇಲ್ಲಿಂದ ಆಸೀಸ್ ಅಧಃಪತನ ಶುರುವಾಯಿತು. ಆನಂತರ ಶೇನ್ ಮಾರ್ಷ್ (4) ಅವರು, ಉಮೇಶ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರೆ, ಮತ್ತೆ ದಾಳಿ ನಡೆಸಿದ ಕುಲ್ದೀಪ್ , ಹ್ಯಾಂಡ್ಸ್ ಕಾಂಬ್ (8), ಗ್ಲೆನ್ ಮ್ಯಾಕ್ಸ್ ವೆಲ್ (8) ಹಾಗೂ ಪ್ಯಾಟ್ ಕುಮಿನ್ಸ್ (21) ವಿಕೆಟ್ ಉರುಳಿಸುವ ಮೂಲಕ ಆಸೀಸ್ ಮಧ್ಯಮ ಕ್ರಮಾಂಕ ಬೇಗನೇ ಪತನಗೊಳ್ಳುವಂತೆ ಮಾಡಿದರು.

ಇನ್ನು, ಸ್ಪಿನ್ನರ್ ಅಶ್ವಿನ್, ಅವರು ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ಭರ್ಜರಿ ಶತಕ ಸಿಡಿಸಿದ ನಾಯಕ ಸ್ವೀವನ್ ಸ್ಮಿತ್ (111) ಅರ ವಿಕೆಟ್ ಉರುಳಿಸಿದರು. ಇನ್ನು, ಕೆಳ ಕ್ರಮಾಂಕದಲ್ಲಿನ ಸ್ಟೀವ್ ಒಕೆಫೆ ರನೌಟ್ ಆದರು. ಭುವನೇಶ್ವರ್ ಕುಮಾರ್ ಅವರು, ಕೆಳ ಕ್ರಮಾಂಕದ ನಥಾನ್ ಲಿಯಾನ್ (13) ವಿಕೆಟ್ ಉರುಳಿಸುವ ಮೂಲಕ ಆಸೀಸ್ ಇನಿಂಗ್ಸ್ ಗೆ ತೆರೆಬಿತ್ತು.

ಭಾರತೀಯ ಬೌಲರ್ ಗಳ ಕೈಚಳಕಕ್ಕೆ ಆಸ್ಟ್ರೇಲಿಯಾ ಕಂಗಾಲಾದರೂ ನಾಯಕ ಸ್ವೀವ್ ಸ್ಮಿತ್ ಅವರ ಅಮೋಘ ಶತಕ ಹಾಗೂ ಅಪಾಯಕಾರಿ ಆರಂಭಿಕ ಡೇವಿಡ್ ವಾರ್ನರ್ (56) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಹೇಡ್ (57) ಅವರ ಆಕರ್ಷಕ ಅರ್ಧಶತಕಗಳು ಆಸೀಸ್ ತಂಡಕ್ಕೆ ನೆರವಾದವು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 300 (ಸ್ಟೀವನ್ ಸ್ಮಿತ್ 111, ಮ್ಯಾಥ್ಯೂ ವೇಡ್ 57, ಡೇವಿಡ್ ವಾರ್ನರ್ 56; ಕುಲ್ದೀಪ್ ಯಾದವ್ 68ಕ್ಕೆ 4, ಉಮೇಶ್ ಯಾದವ್ 2).

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X