ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೇಗಿ ಬ್ರಾಡ್ ಹೊಡೆತಕ್ಕೆ ಆಸೀಸ್ ತತ್ತರ 60ಕ್ಕೆ ಆಲೌಟ್

By Mahesh

ನ್ಯಾಟಿಂಗ್ ಹ್ಯಾಮ್ (ಇಂಗ್ಲೆಂಡ್) , ಆಗಸ್ಟ್ 06: ಇಂಗ್ಲೆಂಡಿನ ವೇಗಿ ಸ್ಟುವರ್ಟ್ ಬ್ರಾಡ್ ಬಿರುಗಾಳಿ ಬೌಲಿಂಗ್ ಗೆ ಹೆದರಿ ತತ್ತರಿಸಿದ ಆಸ್ಟ್ರೇಲಿಯಾ ತಂಡ 18.3 ಓವರ್ಸ್ (111 ಎಸೆತಗಳು) ಗಳಲ್ಲಿ 60 ರನ್ನಿಗೆ ಆಲೌಟ್ ಆಗಿದೆ. 4ನೇ ಆಷ್ಯಸ್ ಟೆಸ್ಟ್ ನ ಮೊದಲ ದಿನದ ಮೊದಲ ಇನ್ನಿಂಗ್ಸ್ ನಲ್ಲೇ ಆಸ್ಟ್ರೇಲಿಯಾಕ್ಕೆ ಇಂಗ್ಲೆಂಡ್ ಭಾರಿ ಪೆಟ್ಟುಕೊಟ್ಟಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಕುಕ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. 29 ವರ್ಷ ವಯಸ್ಸಿನ ಸ್ಟುವರ್ಟ್ ಬ್ರಾಡ್ ಅವರು ತಮ್ಮ 83ನೇ ಟೆಸ್ಟ್ ಪಂದ್ಯದ ಮೊದಲ ಸ್ಪೆಲ್ ನಲ್ಲೇ ಆಸೀಸ್ ಆರಂಭಿಕ ಆಟಗಾರರಾದ ಕ್ರಿಸ್ ರೋಜರ್ಸ್ ಹಾಗೂ ಮೂರನೇ ಕ್ರಮಾಂಕದ ಸ್ಟೀವ್ ಸ್ಮಿತ್ ವಿಕೆಟ್ ಉದುರಿಸಿದರು.

ಟ್ರೆಂಟ್ ಬ್ರಿಜ್ ನಲ್ಲಿ ಮೊದಲ ಓವರ್ ನಲ್ಲೇ 10/2 ಸ್ಕೋರ್ ಮಾಡಿ ಆಘಾತಕ್ಕೊಳಗಾದ ಆಸ್ಟ್ರೇಲಿಯಾ ನಂತರ ಚೇತರಿಸಿಕೊಳ್ಳಲೇ ಇಲ್ಲ. ಬ್ರಾಡ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ 9.3 ಓವರ್ ಗಳಲ್ಲಿ 15 ರನ್ನಿತ್ತು 8 ವಿಕೆಟ್ (9.3-5-15-8) ಕಬಳಿಸಿದರು. ಆಷ್ಯಸ್ ನ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ಪೈಕಿ ಮೂರನೇ ಉತ್ತಮ ಬೌಲಿಂಗ್ ಪ್ರದರ್ಶನ ಇದಾಗಿದೆ.

Ashes: Stuart Broad takes 8 as Australia blown away for just 60 in 111 balls

ಇದರ ಜೊತೆಗೆ ವೃತ್ತಿ ಬದುಕಿನಲ್ಲಿ 300ನೇ ವಿಕೆಟ್ ಪಡೆದ ಬ್ರಾಡ್ ಅವರು ಈಗ ಜೇಮ್ಸ್ ಆಂಡರ್ಸನ್ (413), ಇಯಾನ್ ಬೋಥಮ್ (383), ಬಾಬ್ ವಿಲಿಸ್ (325), ಫ್ರೆಡ್ ಟ್ರೂಮನ್ (307) ಅವರ ಸಾಲಿಗೆ ಸೇರಿದರು. ಸದ್ಯಕ್ಕೆ ಬ್ರಾಡ್ ಅವರು ಟ್ರೂಮನ್ ಸಮಕ್ಕೆ ನಿಂತಿದ್ದಾರೆ. ಗಾಯದ ಸಮಸ್ಯೆಯಿಂದ ಆಂಡರ್ಸನ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ.

1960ರ ನಂತರ 60 ರನ್ನಿಗೆ ಆಲೌಟ್ ಆಗಿರುವುದು ಆಸ್ಟ್ರೇಲಿಯಾದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ತ್ವರಿತ ಅವಧಿಯಲ್ಲಿ ಆಲೌಟ್ ಆದ ಅಪಕೀರ್ತಿಗೆ ಆಸ್ಟ್ರೇಲಿಯಾ ಒಳಗಾಗಿದೆ.

ಆಸ್ಟ್ರೇಲಿಯಾದ ಇನ್ನಿಂಗ್ಸ್ ನಲ್ಲಿ ಇತರೆ ರನ್ ಗಳ ಮೊತ್ತವೇ ಅಧಿಕವಾಗಿತ್ತು(14ರನ್), ಅದು ಬಿಟ್ಟರೆ ವೇಗಿ ಮಿಚೆಲ್ ಜಾನ್ಸನ್ 13 ರನ್ ಗಳಿಸಿದರು. ರೋಜರ್ಸ್, ಡೇವಿಡ್ ವಾರ್ನರ್, ಶಾನ್ ಮಾರ್ಷ್ ಡಕ್ ಔಟ್ ಆದರು. 5 ಟೆಸ್ಟ್ ಗಳ ಸರಣಿಯಲ್ಲಿ ಅತಿಥೇಯ ಇಂಗ್ಲೆಂಡ್ ತಂಡ 2-1 ರ ಮುನ್ನಡೆ ಪಡೆದುಕೊಂಡಿದೆ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X