ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಟಗಾರರನ್ನು ಕುಂಬ್ಳೆ ಶಾಲಾ ಮಕ್ಕಳಂತೆ ನಡೆಸಿಕೊಳ್ತಾ ಇದ್ರಾ?

ಕುಂಬ್ಳೆ ಪರವಾಗಿ ಬರುತ್ತಿದ್ದ ಅನುಕಂಪದ ಅಲೆಗಳು ನಿಂತ ಮೇಲೆ ಈಗ ಕೊಹ್ಲಿ ಪರವಾಗಿನ ಅನುಕಂಪದ ಅಲೆಗಳು ಬರಲಾರಂಭಿಸಿವೆ. ಕುಂಬ್ಳೆಯವರು ಟೀಂ ಇಂಡಿಯಾ ಆಟಗಾರರನ್ನು ಮಕ್ಕಳಂತೆ ದಂಡಿಸುತ್ತಿದ್ದರೆಂದು ಹೇಳಲಾಗಿದೆ.

ನವದೆಹಲಿ, ಜೂನ್ 22: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಅನಿಲ್ ಕುಂಬ್ಳೆ ರಾಜಿನಾಮೆ ಸಲ್ಲಿಸಿದ್ದೇ ತಡ, ಕುಂಬ್ಳೆ ಪರವಾಗಿ ದೊಡ್ಡದೊಂದು ಅನುಕಂಪದ ಅಲೆ ಬಂದಿತ್ತು. ಅದಲ್ಲದೆ, ಕೊಹ್ಲಿ ವಿರುದ್ಧ ಟೀಕಾಸ್ತ್ರವೂ ಪ್ರಯೋಗಿಸಲ್ಪಟ್ಟಿತ್ತು.

ಇದಾಗಿ ಎರಡು ದಿನಗಳ ನಂತರ , ಕೊಹ್ಲಿ ಪರವಾದ ಗುಂಪೊಂದು ಕೊಹ್ಲಿ ಪರವಾದ ಅನುಕಂಪದ ಅಲೆಗಳನ್ನು ಎಬ್ಬಿಸಲು ಪ್ರಯತ್ನಿಸುತ್ತಿವೆ.

ಕುಂಬ್ಳೆ ಸ್ಥಾನ ತುಂಬುವುದಕ್ಕೆ ಆಗುವುದಿಲ್ಲ : ಸೆಹ್ವಾಗ್ಕುಂಬ್ಳೆ ಸ್ಥಾನ ತುಂಬುವುದಕ್ಕೆ ಆಗುವುದಿಲ್ಲ : ಸೆಹ್ವಾಗ್

'Anil Kumble Scolded Players Like Children,' Say Sources About Fallout With Virat Kohli

ಕೊಹ್ಲಿ ಪರವಾಗಿ ಬರುತ್ತಿರುವ ಕತೆಗಳ ಒಟ್ಟು ಸಾರ - 'ಟೀಂ ಇಂಡಿಯಾ ಆಟಗಾರರನ್ನು ಅನಿಲ್ ಕುಂಬ್ಳೆ ಶಾಲೆಯ ಮಕ್ಕಳಂತೆ ನಡೆಸಿಕೊಂಡರು. ಆಟಗಾರರಿಗೂ ಕೆಲವು ಆಲೋಚನೆಗಳಿರುತ್ತವೆ, ಅವುಗಳಿಗೂ ಬೆಲೆ ಕೊಡಬೇಕೆಂಬುದು ಕುಂಬ್ಳೆಯವರಿಗೆ ತಿಳಿದಿರಲಿಲ್ಲ' ಎಂಬುದು.

ಕುಂಬ್ಳೆ ಬಗೆಗಿನ ಹಳೆ ಟ್ವೀಟ್ ಡಿಲೀಟ್ ಮಾಡಿದ ಕೊಹ್ಲಿಕುಂಬ್ಳೆ ಬಗೆಗಿನ ಹಳೆ ಟ್ವೀಟ್ ಡಿಲೀಟ್ ಮಾಡಿದ ಕೊಹ್ಲಿ

ಈ ವಿಚಾರವಷ್ಟೇ ಅಲ್ಲ, ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ತದ್ವಿರುದ್ಧವಾದ ನಿಲುವುಗಳಿದ್ದುದ್ದೇ ಅವರಿಬ್ಬರ ವಿರಸಕ್ಕೆ ಕಾರಣವೆಂದೂ ಹೇಳಲಾಗುತ್ತಿದೆ.

ಆರಂಭಿಕ ಯಶಸ್ಸಗಳಿಂದ ಮೈ ಮರೆತ್ರಾ ಕೊಹ್ಲಿ?

ಆರಂಭಿಕ ಯಶಸ್ಸಗಳಿಂದ ಮೈ ಮರೆತ್ರಾ ಕೊಹ್ಲಿ?

ಪ್ರತಿಯೊಂದು ಪಂದ್ಯದಲ್ಲಿ ಟಾಸ್ ಗೆದ್ದರೆ ಭಾರತ ತಂಡ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುಂಬ್ಳೆ ಸಲಹೆ ನೀಡುತ್ತಿದ್ದರು. ಆದರೆ, ಕೊಹ್ಲಿಯವರ ಅನಿಸಿಕೆ ಇದಕ್ಕೆ ಯಾವಾಗಲೂ ವಿರುದ್ಧವಾಗಿರುತ್ತಿತ್ತು. ಹಲವಾರು ಬಾರಿ ಕೊಹ್ಲಿ ಈ ವಿಚಾರದಲ್ಲಿ ಯಶಸ್ಸು ಗಳಿಸಿದ್ದರಿಂದ ತಮ್ಮ ನಿಲುವಿಗೆ ಅವರು ಬದ್ಧರಾಗಿದ್ದರು. ಇದು ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಇರುಸು ಮುರುಸಿಗೆ ಕಾರಣವಾಗಿತ್ತು.

ಕುಂಬ್ಳೆ ಗೆ ಅಸಾಧ್ಯ ನೋವು

ಕುಂಬ್ಳೆ ಗೆ ಅಸಾಧ್ಯ ನೋವು

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡಬೇಕೆಂಬುದು ಅನಿಲ್ ಕುಂಬ್ಳೆಯವರ ಅಭಿಲಾಷೆಯಾಗಿತ್ತು. ಆದರೆ, ಕೊಹ್ಲಿ ಮಾತ್ರ ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಎಡವಿದರು. ಇದರು ಕುಂಬ್ಳೆಗೆ ಸಹಿಸಲಾಧ್ಯವಾದ ನೋವು ತಂದಿತು.

ಕುಂಬ್ಳೆ ಸಲಹೆಗೆ ವಿರುದ್ಧವಾಗಿದ್ದ ಕೊಹ್ಲಿ

ಕುಂಬ್ಳೆ ಸಲಹೆಗೆ ವಿರುದ್ಧವಾಗಿದ್ದ ಕೊಹ್ಲಿ

ಡ್ರೆಸ್ಸಿಂಗ್ ರೂಂ ನಲ್ಲಿ ಎಲ್ಲಾ ಆಟಗಾರರೂ ಶಿಸ್ತಿನಿಂದ ಇರಬೇಕೆಂಬುದು ಅನಿಲ್ ಕುಂಬ್ಳೆ ಅನಿಸಿಕೆ. ಅಂದರೆ, ಡ್ರೆಸ್ಸಿಂಗ್ ರೂಮಿನಲ್ಲಿ ಮನಸ್ಸನ್ನು ಚಂಚಲಗೊಳಿಸದೇ ಗೇಮ್ ಪ್ಲಾನ್ ಬಗ್ಗೆ ಜಾಗೃತರಾಗಿರಬೇಕೆಂಬುದು ಕುಂಬ್ಳೆ ಸಲಹೆ. ಆದರೆ ಇದನ್ನು ಆರಂಭದಲ್ಲೇ ತಿರಸ್ಕರಿದ್ದ ಕೊಹ್ಲಿ, ನಮ್ಮ ಹುಡುಗರು ಮಲ್ಟಿ ಟಾಸ್ಕ್ ಮಾಡುವ ತಾಕತ್ತುಳ್ಳವರು ಎಂದು ವಿವಿಧ ಚಟುವಟಿಕೆಗಳು ಡ್ರೆಸ್ಸಿಂಗ್ ರೂಮಿನಲ್ಲಿ ನಡೆಯುವುದನ್ನು ಅನುವು ಮಾಡಿದ್ದರು.

ಕುಂಬ್ಳೆ ಮಾಡಿದ ಆ ಬದಲಾವಣೆ ತಂದಿತು ದೊಡ್ಡ ಮುನಿಸು

ಕುಂಬ್ಳೆ ಮಾಡಿದ ಆ ಬದಲಾವಣೆ ತಂದಿತು ದೊಡ್ಡ ಮುನಿಸು

ಅಸಲಿಗೆ ಇಬ್ಬರ ನಡುವೆ ಮುನಿಸು ದೊಡ್ಡದಾಗಿ ಬೆಳೆದಿದ್ದು ಇದೇ ವರ್ಷ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ. ಆ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಕೊಹ್ಲಿ ಬದಲಿಗೆ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ನಿರ್ಧಾರವನ್ನು ಕುಂಬ್ಳೆ ಸ್ವತಂತ್ರವಾಗಿ ತೆಗೆದುಕೊಂಡಿದ್ದರು. ಈ ಬಗ್ಗೆ ತಮ್ಮನ್ನು ಕೇಳಲಿಲ್ಲ ಎಂದು ಕೊಹ್ಲಿ ಬೇಸರ ಮಾಡಿಕೊಂಡರು.

ಕುಂಬ್ಳೆ ಬೈಗುಳ ಅರಗಿಸಿಕೊಳ್ಳದ ಟೀಂ ಇಂಡಿಯಾ!

ಕುಂಬ್ಳೆ ಬೈಗುಳ ಅರಗಿಸಿಕೊಳ್ಳದ ಟೀಂ ಇಂಡಿಯಾ!

ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಅನಿಲ್ ಕುಂಬ್ಳೆ ಅವರು ಆಟಗಾರರಿಗೆ ಯದ್ವಾ ತದ್ವಾ ಬೈದು ಹಾಕಿದರಂತೆ. ಶಾಲೆಗಳಲ್ಲಿ ಮೇಷ್ಟುಗಳು ಬೈಯ್ಯೋ ಹಾಗೆ ಬಯ್ದಿದ್ದಾರೆ ಕುಂಬ್ಳೆ. ನಾವೇನು ವಿದ್ಯಾರ್ಥಿಗಳಾ? ಎಂದು ಕೊಹ್ಲಿ ಅವರು ಆನಂತರ ಅಸಮಾಧಾನ ಹೊರಹಾಕಿದರಂತೆ.

ಈ ಬಗ್ಗೆ ಮತ್ತಷ್ಟು ತಾಜಾ ವಿಚಾರಗಳು ಇಲ್ಲಿ, ನಿಮಗಾಗಿ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X