ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಇಂಜಿನಿಯರ್

ನವದೆಹಲಿ, ಜೂನ್ 28 : ತೀವ್ರ ಕುತೂಹಲ ಕೆರಳಿಸಿರುವ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರ ಇನ್ನೇನು ಅರ್ಜಿ ಸಲ್ಲಿಸುವರು ಮುಗಿದರೂ ಎನ್ನುತ್ತಿದ್ದಂತೆಯೇ ಇದೀಗ ಎಂಜಿನಿಯರ್‌ ಒಬ್ಬರು ಅರ್ಜಿ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಬಂಗಾಳದ ಎಂಜಿನಿಯರ್‌ ಆಗಿರುವ 30 ವರ್ಷದ ಉಪೇಂದ್ರ ನಾಥ್ ಬ್ರಹ್ಮಚಾರಿ ಎನ್ನುವವರು ಬಿಸಿಸಿಐಗೆ ಈ-ಮೇಲ್‌ ಮೂಲಕ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ವಿಚಾರ ಇದೀಗ ಭಾರೀ ಅಚ್ಚರಿಗೆ ಕಾರಣವಾಗಿದೆ.

ಒಳ ರಾಜಕೀಯದ ದಳ್ಳುರಿಗೆ ಬಲಿಯಾದ ಅನಿಲ್ ಕುಂಬ್ಳೆಒಳ ರಾಜಕೀಯದ ದಳ್ಳುರಿಗೆ ಬಲಿಯಾದ ಅನಿಲ್ ಕುಂಬ್ಳೆ

ಎಂಜಿನಿಯರ್ ಉಪೇಂದ್ರನಾಥ್ ಬ್ರಹ್ಮಚಾರಿ ತಮ್ಮ ಅರ್ಜಿಯಲ್ಲಿ "ನಾನೊಬ್ಬ ಎಂಜಿನಿಯರ್‌, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕೋಚ್ ಹುದ್ದೆಗಾಗಿ ಬಿಸಿಸಿಐ ಕೇಳಿರುವ ಯಾವ ಅನುಭವವೂ ನನಗಿಲ್ಲ.

ಆದರೆ, ಈ ಹುದ್ದೆಗೆ ನಾನೇ ಸರಿಯಾದ ವ್ಯಕ್ತಿ ಎಂದುಕೊಳ್ಳುತ್ತೇನೆ. ದಿಗ್ಗಜ ಅನಿಲ್‌ ಕುಂಬ್ಳೆ ರಾಜೀನಾಮೆ ಬಳಿಕ ಅವರ ಸ್ಥಾನವನ್ನು ನಾನು ತುಂಬಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.ಇನ್ನು ಕೋಚ್ ಹುದ್ದೆಗೆ ಹಲವರು ಅರ್ಜೀ ಹಾಕಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಮುಂಚೂಣಿಯಲ್ಲಿ ವಿರೇಂದ್ರ ಸೆಹ್ವಾಗ್

ಮುಂಚೂಣಿಯಲ್ಲಿ ವಿರೇಂದ್ರ ಸೆಹ್ವಾಗ್

ಟೀಂ ಇಂಡಿಯಾ ಹುದ್ದೆಗೆ ಮೊದಲ ಬಾರಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಸಮಯದಲ್ಲಿ ಈಗಾಗಲೇ ಅರ್ಜಿ ಹಾಕಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಂಚೂಣಿಯಲ್ಲಿದ್ದಾರೆ.

ರವಿಶಾಸ್ತ್ರಿಯಿಂದ ಅರ್ಜಿ ಸಲ್ಲಿಕೆ

ರವಿಶಾಸ್ತ್ರಿಯಿಂದ ಅರ್ಜಿ ಸಲ್ಲಿಕೆ

ಟೀಂ ಇಂಡಿಯಾ ಕೋಚ್ ಹುದ್ದೆಗೆ ಎರಡನೇ ಬಾರಿಗೆ ಅರ್ಜಿ ಆಹ್ವಾನಿಸಿದ ವೇಳೆ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಕೂಡ ಅರ್ಜಿ ಹಾಕಿದ್ದು, ಸೆಹ್ವಾಗ್ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಕೋಚ್ ಹುದ್ದೆಗೆ ಪ್ರಬಲರ ಪೈಪೋಟಿ

ಕೋಚ್ ಹುದ್ದೆಗೆ ಪ್ರಬಲರ ಪೈಪೋಟಿ

(ಜೂನ್ 1) ದಿನಾಂತ್ಯಕ್ಕೆ ಕೋಚ್ ಹುದ್ದೆಯ ರೇಸ್ ನಲ್ಲಿ ಕುಂಬ್ಳೆ ಸೇರಿದಂತೆ ಸೆಹ್ವಾಗ್, ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ಕೋಚ್ ಹುದ್ದೆಗೆ ಪ್ರಬಲರ ರೇಸ್ ಇದೆ ಎಂದೇ ಹೇಳಲಾಗಿತ್ತು.

ಕೋಚ್ ಹುದ್ದೆ ದಿನಾಂಕ ವಿಸ್ತರಿಸಿದ್ದ ಬಿಸಿಸಿಐ

ಕೋಚ್ ಹುದ್ದೆ ದಿನಾಂಕ ವಿಸ್ತರಿಸಿದ್ದ ಬಿಸಿಸಿಐ

ಕುಂಬ್ಳೆ ಅವರ ಅವಧಿ ಮುಕ್ತಾಯದ ಕೊಹ್ಲಿ ಮತ್ತು ಕಂಬ್ಳೆ ನಡುವಿನ ಮುಸುಕಿನ ಗುದ್ದಾಟ ಕಂಡು ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆದರೆ, ಕುಂಬ್ಳೆ ಅವರನ್ನು ವೆಸ್ಟ್ ಇಂಡೀಸ್ ಸರಣಿ ವರೆಗೂ ಮುನ್ನಡೆಸಬೇಕೆಂಬ ತೀರ್ಮಾನವೂ ಆಗಿತ್ತು. ಆದರೆ, ಕುಂಬ್ಳೆ ಅದಕ್ಕೂ ಮೊದಲು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಬಿಸಿಸಿಐ ಕೋಚ್ ಹುದ್ದೆಯ ದಿನಾಂಕವನ್ನು ವಿಸ್ತರಿಸಿತ್ತು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X