ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಗೆಲುವಿನ ನಗೆ

By:
Subscribe to Oneindia Kannada

ಬೆಂಗಳೂರು, ಜುಲೈ 25 : ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಐತಿಹಾಸಿಕ ಜಯ ದಾಖಲಿಸಿದೆ.

ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 92 ರನ್ ಗಳ ಅತಿದೊಡ್ಡ ಜಯ ಸಾಧಿಸಿದೆ. ಇದು ಏಷ್ಯಾದ ಹೊರಗೆ ಟೀಂ ಇಂಡಿಯಾ ಸಾಧಿಸಿರುವ ಬೃಹತ್ ಅಂತರದ ಜಯವಾಗಿದೆ. [ವಿಂಡೀಸ್ ವಿರುದ್ಧ ಭರ್ಜರಿ ವಿಜಯ]

ವಿರಾಟ್ ಕೊಹ್ಲಿ ದ್ವಿಶತಕ, ಮೊಹಮ್ಮದ್ ಶಮಿ ಬೌಲಿಂಗ್, ಆರ್ ಅಶ್ವಿನ್ ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಅಲ್ಲದೆ ಟೀಂ ಇಂಡಿಯಾದ ಸಂಘಟಿತ ಹೋರಾಟದ ಫಲವಾಗಿ ಭರ್ಜರಿ ಜಯ ದಾಖಲಾಗಿದೆ. ಈ ಗೆಲುವಿನ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಪಡೆದುಕೊಂಡು ಸಂಭ್ರಮಿಸಿದೆ.[ಕೊಹ್ಲಿ ದ್ವಿಶತಕ, 84 ವರ್ಷಗಳ ಕಾಯುವಿಕೆ ಅಂತ್ಯ!]

ನಾರ್ತ್​ಸೌಂಡ್​ನ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕನೇ ದಿನವೇ ಜಯ ತನ್ನದಾಗಿಸಿಕೊಂಡಿದೆ. ಭಾರತ ಪ್ರಥಮ ಇನಿಂಗ್ಸ್: 8 ವಿಕೆಟ್​ಗೆ 566 ಡಿಕ್ಲೇರ್, ವೆಸ್ಟ್ ಇಂಡೀಸ್ ಪ್ರಥಮ ಇನಿಂಗ್ಸ್: 90.2 ಓವರ್​ಗಳಲ್ಲಿ 243, 231 ಆಲೌಟ್, 78 ಓವರ್ಸ್.  ಟೀಂ ಇಂಡಿಯಾದ ಸಂಭ್ರಮಾಚರಣೆಯ ಚಿತ್ರಗಳು ಇಲ್ಲಿವೆ...

ಕುಂಬ್ಳೆ ಹಾಗೂ ಕೊಹ್ಲಿ ಹಸ್ತಲಾಘವ

ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ ಕೋಚ್ ಕುಂಬ್ಳೆ ಹಾಗೂ ಕ್ಯಾಪ್ಟನ್ ಕೊಹ್ಲಿ

ವಿರಾಟ್ ಕೊಹ್ಲಿ ದ್ವಿಶತಕ

ನಾಯಕನಾಗಿ ವಿರಾಟ್ ಕೊಹ್ಲಿ ಚೊಚ್ಚಲ ದ್ವಿಶತಕ ಸಾಧಿಸಿದ ಕ್ಷಣ

ಆರ್ ಅಶ್ವಿನ್ ಅವರಿಂದ ಶತಕ

ಆರ್ ಅಶ್ವಿನ್ ಅವರಿಂದ ಮೂರನೇ ಶತಕ

ಬೌಲಿಂಗ್ ನಲ್ಲಿ ಮಿಂಚಿದ ಅಶ್ವಿನ್

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿದ ಅಶ್ವಿನ್

ಭಾರತೀಯರ ಕರಾರುವಾಕ್ ಬೌಲಿಂಗ್

ಭಾರತೀಯ ವೇಗಿಗಳ ಕರಾರುವಾಕ್ ಬೌಲಿಂಗ್ ಸ್ಪಿನ್ನರ್ ಗಳಿಗೆ ಸಹಕಾರಿಯಾಯಿತು.

ಗೆಲುವಿನ ಸಂಭ್ರಮದಲ್ಲಿ ಕೊಹ್ಲಿ ಪಡೆ

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯ ಗೆಲುವಿನ ಸಂಭ್ರಮದಲ್ಲಿ ಕೊಹ್ಲಿ ಪಡೆ

ನಾಲ್ಕನೇ ದಿನದ ಆಟದ ಕೊನೆ ದೃಶ್ಯ

ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಆಟದ ಕೊನೆ ದೃಶ್ಯ

ಮೊದಲ ಇನ್ನಿಂಗ್ಸ್ ನಲ್ಲಿ ಮಿಶ್ರಾ, ಶಮಿ ಮಿಂಚಿಂಗ್

ಮೊದಲ ಇನ್ನಿಂಗ್ಸ್ ನಲ್ಲಿ ಮಿಶ್ರಾ, ಶಮಿ ಮಿಂಚಿಂಗ್

ವಿರಾಟ್ ಕೊಹ್ಲಿ ಸಂಭ್ರಮಾಚರಣೆ

ವಿರಾಟ್ ಕೊಹ್ಲಿ ಸಂಭ್ರಮಾಚರಣೆ

English summary
Team India registered their biggest ever overseas win in Tests after defeating West Indies by an innings and 92 runs on the fourth day of the first Test here at Sir Vivian Richards Stadium on Sunday (July 24).
Please Wait while comments are loading...