ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತವರಿನಲ್ಲೇ ಮುಂಬೈಗೆ ಮಣ್ಣು ಮುಕ್ಕಿಸಿದ ಪುಣೆ ಜೈಂಟ್ಸ್

ಮುಂಬೈ, ಏಪ್ರಿಲ್, 10: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಹೊಸ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ಆಘಾತ ನೀಡಿದೆ.

ಕೋರ್ಟ್ ಅನುಮತಿ ಪಡೆದುಕೊಂಡು ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಪುಣೆ 9 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.

ಐಪಿಎಲ್ 2016: ವೇಳಾಪಟ್ಟಿ | ಯಾವ ತಂಡದಲ್ಲಿ ಯಾವ ಆಟಗಾರರು | ಗ್ಯಾಲರಿ

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಮುಂಬೈ 8 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. 122 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ರೈಸಿಂಗ್ ಪುಣೆ 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 126 ರನ್ ಗಳಿಸಿ ಗೆಲುವಿನ ಖಾತೆ ತೆರೆದಿದೆ.[ರಾಯಲ್ ಚಾಲೆಂಜರ್ಸ್ ಬೆಂಗಳೂರು #PlayBold ಜರ್ಸಿ ಅನಾವರಣ]

ಮುಂಬೈ ಪರ ಕೊನೆಯಲ್ಲಿ ಬ್ಯಾಟಿಂಗ್ ಗೆ ಇಳಿದ ಹರ್ಭಜನ್ ಸಿಂಗ್ ಆರ್ಭಟಿಸಿದರು. ಪುಣೆ ಬೌಲರ್ ಗಳು ಮುಂಬೈನ ಬಲಿಷ್ಠ ಬ್ಯಾಟಿಂಗ್ ಕ್ರಮಾಂಕದ ಬೆನ್ನು ಮುರಿದು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು.(ಪಿಟಿಐ ಚಿತ್ರಗಳು)

ರಹಾನೆ ಭರ್ಜರಿ ಬ್ಯಾಟಿಂಗ್

ರಹಾನೆ ಭರ್ಜರಿ ಬ್ಯಾಟಿಂಗ್

ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಆರಂಭಿಕ ಅಜಿಂಕ್ಯ ರಹಾನೆ ಭರ್ಜರಿ ಬ್ಯಾಟಿಂಗ್ ನಡೆಸಿದರು. 42 ಎಸೆತಗಳಲ್ಲಿ 66 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಮೊದಲು ನಿಧಾನವಾಗಿ ಆಟ ಆರಂಭಿಸಿದ ರಹಾನೆ ಕೊನೆಯಲ್ಲಿ ಆರ್ಭಟಿಸಿದರು.

 ಡುಪ್ಲೆಸಿಸ್ ಸಾಥ್

ಡುಪ್ಲೆಸಿಸ್ ಸಾಥ್

ಆರಂಭಿಕ ರಹಾನೆ ಮತ್ತು ಡುಪ್ಲೆಸಿಸ್ ಜೋಡಿ ಪುಣೆಗೆ ಗೆಲುವನ್ನು ಪಕ್ಕಾ ಮಾಡಿತ್ತು. ರಹಾನೆಗೆ ಸಾಥ್ ನೀಡಿದ ಡುಪ್ಲೆಸಿಸ್ 34 ರನ್ ಗಳಿಸಿ ಓಟಾದರು. ಬಳಿಕ ಬಂದ ಕೆವಿನ್ ಪೀಟರ್ಸೆನ್ ಹಾಗೂ ರಹಾನೆ ಜತೆಗೂಡಿ ಪುಣೆಯನ್ನು ಗೆಲುವಿನ ಗುರಿ ಮುಟ್ಟಿಸಿದರು.

 ಮುಂಬೈ ಸ್ಕೋರ್ ಕಾರ್ಡ್

ಮುಂಬೈ ಸ್ಕೋರ್ ಕಾರ್ಡ್

ಮುಂಬೈನ ಪ್ರಮುಖ ಬ್ಯಾಟ್ಸ ಮನ್ ಗಳು ರನ್ ಗಳಿಸಲು ಪರದಾಡಿದರು. ಲೆಂಡ್ಲ್ ಸಿಮ್ಮನ್ಸ್ 8, ರೋಹಿತ್ ಶರ್ಮಾ 7, ಹಾರ್ದಿಕ್ ಪಾಂಡ್ಯಾ 9, ಜೋಸ್ ಬಟ್ಲರ್ 0, ರಾಯುಡು 22, ಪೊಲ್ಲಾರ್ಡ್ 1 ರನ್ ಗಳಿಸಿ ಫೆವಿಲಿಯನ್ ಸೇರಿಕೊಂಡರು.

ಹರ್ಭಜನ್ ಸಿಂಗ್ ಅಬ್ಬರ

ಹರ್ಭಜನ್ ಸಿಂಗ್ ಅಬ್ಬರ

ಪುಣೆ ಬೌಲರ್ ಗಳನ್ನು ಅಂತ್ಯದಲ್ಲಿ ಕಾಡಿದ್ದು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್. 19 ಮತ್ತು 20ನೇ ಓವರ್ ಗಳಲ್ಲಿ ಭರ್ಜರಿ ಬ್ಯಾಟ್ ಬೀಸಿದ ಭಜ್ಜಿ ಮುಂಬೈ ಮೊತ್ತವನ್ನು 120 ರ ಗಡಿಗೆ ತಲುಪಿಸಿದರು.

 ಇಶಾಂತ್ ಶರ್ಮಾ ಕಂ ಬ್ಯಾಕ್

ಇಶಾಂತ್ ಶರ್ಮಾ ಕಂ ಬ್ಯಾಕ್

ಪುಣೆ ಪರ ಇಶಾಂತ್ ಶರ್ಮಾ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರೆ, ರಜತ್ ಭಾಟಿಯಾ, ಎಂ. ಅಶ್ವಿನ್ ಹಾಗೂ ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದರು. ಇಶಾಂತ್ ಶರ್ಮಾ ಸಹ ಚಾಂಪಿಯನ್ ಡ್ಯಾನ್ಸ್ ಮಾಡಿದ್ದು ವಿಶೇಷ.

Story first published: Wednesday, January 3, 2018, 10:03 [IST]
Other articles published on Jan 3, 2018
Read in English: Pune outclass Mumbai in IPL
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X