ಬೆಂಗಳೂರು, ಮೇ 29 : ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಟೀಂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಲಾಗಿದೆ. ಟೀಂ ಇಂಡಿಯಾದ ಆಟಗಾರರು ಬಿಸಿಸಿಐನ ಆಡಳಿತ ಸಮಿತಿ(ಸಿಒಎ)ಗೆ ದೂರು ನೀಡಿದ್ದಾರೆ ಎಂದು ಇಂಡಿಯಾ ಟುಡೇ ಟಿವಿ ಸೋಮವಾರ(ಮೇ 29) ವರದಿ ಮಾಡಿದೆ.
ಡ್ರೆಸಿಂಗ್ ರೂಮಿನಲ್ಲಿ ಸ್ವಾತಂತ್ರ್ಯ ಇಲ್ಲ, ಶಿಸ್ತು ಪಾಲನೆ ಎಲ್ಲಾ ಕಡೆಯಲ್ಲಿ ಒಳ್ಳೆಯದಲ್ಲ, ಮುಖ್ಯಕೋಚ್ ನಿಯಮಗಳು ಕಿರಿಕಿರಿ ಉಂಟು ಮಾಡಿವೆ ಎಂದು ದೂರಲಾಗಿದೆ.[ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ: ಕುಂಬ್ಳೆಗೆ ಮುಜುಗರ]
ಟೀಂ ಇಂಡಿಯಾದ ಸದಸ್ಯರಿಗೆ ಕಳೆದ ಒಂದು ವರ್ಷದಲ್ಲಿ ಇಲ್ಲದ ಸಮಸ್ಯೆ ಈಗ ಹೇಗೆ ಉದ್ಭವಿಸಿತು ಎಂಬ ಪ್ರಶ್ನೆ ಎದ್ದಿದೆ. ಹೊಸ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐಗೆ ಅನಿಲ್ ಕುಂಬ್ಳೆ ಅವರನ್ನು ಮುಂದುವರೆಸುವ ಮನಸ್ಸಿಲ್ಲ ಎಂಬುದು ಜಗಜ್ಜಾಹೀರಾಗಿದೆ.