ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೌರವ್ ಗಂಗೂಲಿ ದಾಖಲೆ ಮುರಿದ ಎಬಿ ಡಿ ವಿಲಿಯರ್ಸ್

ದಕ್ಷಿಣ ಆಫ್ರಿಕಾದ ತಂಡದ ನಾಯಕ, ಎಬಿ ಡಿ ವಿಲಿಯರ್ಸ್‌ ಅವರು ಭಾರತ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಏಕದಿನ ಕ್ರಿಕೆಟ್ ದಾಖಲೆಯೊಂದನ್ನು ಮುರಿದಿದ್ದಾರೆ.

By Mahesh

ಜೋಹಾನ್ಸ್ ಬರ್ಗ್, ಫೆಬ್ರವರಿ 26: ದಕ್ಷಿಣ ಆಫ್ರಿಕಾದ ತಂಡದ ನಾಯಕ, ಎಬಿ ಡಿ ವಿಲಿಯರ್ಸ್‌ ಅವರು ಭಾರತ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ಏಕದಿನ ಕ್ರಿಕೆಟ್ ದಾಖಲೆಯೊಂದನ್ನು ಮುರಿದಿದ್ದಾರೆ.

ನ್ಯೂಜೆಲೆಂಡಿನ ವೆಲ್ಲಿಂಗ್ ಟನ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅವರು ತಮ್ಮ ಏಕದಿನ ಕ್ರಿಕೆಟ್ ನ ವೃತ್ತಿ ಬದುಕಿನಲ್ಲಿ 9 ಸಾವಿರ ರನ್‌ ಮೈಲಿಗಲ್ಲು ದಾಟಿದರು.

AB de Villiers breaks Sourav Ganguly's record, completes 9000 ODI runs


ಕೇವಲ 205 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೈಲಿಗಲ್ಲು ದಾಟಿದ ವಿಶ್ವದ 18ನೇ ಆಟಗಾರ ಹಾಗೂ ಜಾಕ್ ಕಾಲಿಸ್ ನಂತರ ದಕ್ಷಿಣ ಆಫ್ರಿಕಾದ ಎರಡನೇ ಆಟಗಾರರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ, ಎಡಗೈ ಬ್ಯಾಟ್ಸ್ ಮನ್ ಗಂಗೂಲಿ 228 ಇನ್ನಿಂಗ್ಸ್‌ಗಳಲ್ಲಿ 9 ಸಾವಿರ ಪೂರೈಸಿದ್ದರು.

ಈ ಪಟ್ಟಿಯಲ್ಲಿರುವ ಆಟಗಾರರ ಪೈಕಿ 33 ವರ್ಷ ವಯಸ್ಸಿನ ಎಬಿ ಡಿ ವಿಲಿಯರ್ಸ್ ಅವರು ಹೆಚ್ಚು ರನ್ ಸರಾಸರಿ (53.86) ಹಾಗೂ ಸ್ಟೈಕ್ ರೇಟ್ (99.94) ಹೊಂದಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 271/8 ಸ್ಕೋರ್ ಮಾಡಿತ್ತು. ನ್ಯೂಜಿಲೆಂಡ್ ತಂಡ 112 ಸ್ಕೋರಿಗೆ ಸರ್ವಪತನ ಕಂಡು ಭಾರಿ ಸೋಲು ಕಂಡಿತು.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು 171 ಇನ್ನಿಂಗ್ಸ್ ನಲ್ಲಿ 7,755 ಸ್ಕೋರ್ ಮಾಡಿದ್ದಾರೆ. ಅಗ್ರಸ್ಥಾದಲ್ಲಿರುವ ಸಚಿನ್ ತೆಂಡೂಲ್ಕರ್ ಅವರು 44.83 ರನ್ ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X