ಅಜರುದ್ದೀನ್ ದಾಖಲೆ ಸಮಕ್ಕೆ ನಿಂತ ವಿರಾಟ್ ಕೊಹ್ಲಿ

ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆ ಸಮಕ್ಕೆ ಕೊಹ್ಲಿ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ 0-4 ಅಂತರದಲ್ಲಿ ಗೆದ್ದುಕೊಂಡಿದೆ.

By:
Subscribe to Oneindia Kannada

ಚೆನ್ನೈ, ಡಿಸೆಂಬರ್ 20: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆ ಸಮಕ್ಕೆ ನಿಂತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ 0-4 ಅಂತರದಲ್ಲಿ ಗೆದ್ದುಕೊಂಡಿದೆ.

ಕಿವೀಸ್ ವಿರುದ್ಧದ ಸರಣಿ ವಿಜಯದ ಬಳಿಕ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿತ್ತು.27 ವರ್ಷ ವಯಸ್ಸಿನ ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರು ನಾಯಕರಾಗಿ 17 ಟೆಸ್ಟ್ ಪಂದ್ಯಗಳಲ್ಲಿ 10 ಪಂದ್ಯ ಗೆದ್ದು, 2 ಸೋತು, 5 ಡ್ರಾ ಸಾಧಿಸಿದ್ದರು. ಈಗ ಅಲೆಸ್ಟರ್ ಕುಕ್ ಅವರ ಇಂಗ್ಲೆಂಡ್ ವಿರುದ್ಧ 0-5 ಕ್ಲೀನ್ ಸ್ವೀಪ್ ಸಾಧಿಸುವ ಹುಮ್ಮಸ್ಸಿನಲ್ಲಿದ್ದರು. ಆದರೆ, 4-0 ಅಂತರದಲ್ಲಿ ಗೆಲುವು ಸಾಧ್ಯವಾಗಿದೆ. [ಇಂಗ್ಲೆಂಡ್ ವಿರುದ್ಧ 4-0ರಲ್ಲಿ ಸರಣಿ ಜಯಿಸಿದ ಭಾರತ]

ನಾಯಕರಾಗಿ ಹೆಚ್ಚು ಗೆಲುವು ಸಾಧಿಸಿದ ಪಟ್ಟಿಯಲ್ಲಿ ಅಜರುದ್ದೀನ್ ಮೂರನೇ ಸ್ಥಾನದಲ್ಲಿದ್ದು 47 ಪಂದ್ಯಗಳಿಂದ 14 ಜಯ ದಾಖಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 4 ಪಂದ್ಯ ಗೆಲ್ಲುವ ಮೂಲಕ 22 ಪಂದ್ಯಗಳಲ್ಲೇ ಕೊಹ್ಲಿ ಕೂಡಾ ಅಜರುದ್ದೀನ್ ಸಮಕ್ಕೆ ನಿಂತಿದ್ದಾರೆ.

ಎಂಎಸ್ ಧೋನಿ ಅವರು 60 ಪಂದ್ಯಗಳಿಂದ 27 ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದ್ದರೆ, ಸೌರವ್ ಗಂಗೂಲಿ ಅವರು 49 ಪಂದ್ಯಗಳಿಂದ 21 ಜಯ ದಾಖಲಿಸಿದ್ದಾರೆ.

ಕೊಹ್ಲಿ ಅವರು 2014 ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಿದರು. ಭಾರತದ 32ನೇ ನಾಯಕ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಹಾಗೂ ಬಾಂಗ್ಲಾದೇಶ ವಿರುದ್ಧ ಒಂದು ಟೆಸ್ಟ್ ಪಂದ್ಯಗಳು ನಿಗದಿಯಾಗಿವೆ.

5 ಟೆಸ್ಟ್ ಸರಣಿ ಗೆಲುವು:

1992-93ರಲ್ಲಿ 3-0 ಅಂತರದಲ್ಲಿ ಜಯಿಸಿದ ನಂತರ ಇಂಗ್ಲೆಂಡ್ ವಿರುದ್ಧ 4-0 ಅಂತರದ ಬಹುದೊಡ್ಡ ಗೆಲುವು ಸಾಧಿಸಲಾಗಿದೆ. ಇದಕ್ಕೂ ಮುನ್ನ ನಾಯಕರಾಗಿ ಕೊಹ್ಲಿ ಶ್ರೀಲಂಕಾ (2-1), ದಕ್ಷಿಣ ಆಫ್ರಿಕಾ(3-0), ವೆಸ್ಟ್ ಇಂಡೀಸ್ (2-0) ಹಾಗೂ ನ್ಯೂಜಿಲೆಂಡ್ ವಿರುದ್ಧ (3-0) ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಎಂಎಸ್ ಧೋನಿ

ಎಂಎಸ್ ಧೋನಿ ಅವರು 60 ಪಂದ್ಯಗಳಿಂದ 27 ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದ್ದಾರೆ

ಸೌರವ್ ಗಂಗೂಲಿ

ಸೌರವ್ ಗಂಗೂಲಿ ಅವರು 49 ಪಂದ್ಯಗಳಿಂದ 21 ಜಯ ದಾಖಲಿಸಿದ್ದಾರೆ

ಅಜರುದ್ದೀನ್ ಹಾಗೂ ಕೊಹ್ಲಿ

14 ಜಯ, ಕೊಹ್ಲಿ (22 ಪಂದ್ಯ), ಅಜರುದ್ದೀನ್ (47)

9 ಜಯ ಸಾಧಿಸಿದ ನಾಯಕರು

9 ಜಯ ಸಾಧಿಸಿದ ನಾಯಕರುಗಳ ಪೈಕಿ ಸುನಿಲ್ ಗವಾಸ್ಕರ್ (47), ಮನ್ಸೂರ್ ಅಲಿ ಖಾನ್ ಪಟೌಡಿ (40)

8 ಜಯ ಸಾಧಿಸಿದ ಕ್ಯಾಪ್ಟನ್ಸ್

ರಾಹುಲ್ ದ್ರಾವಿಡ್ 25 ಪಂದ್ಯಗಳಲ್ಲಿ 8 ಜಯ ದಾಖಲಿಸಿ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

English summary
India produced yet another top-class effort to complete a 4-0 Test series victory over England today (December 20) and helped captain Virat Kohli equal another record.
Please Wait while comments are loading...