ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

4ನೇ ಟೆಸ್ಟ್: ಆಸೀಸ್ 137ಕ್ಕೆ ಆಲೌಟ್, ಭಾರತ ಗೆಲುವಿಗೆ 106 ರನ್

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮೂರನೇ ದಿನದಾಟದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 137ರನ್ ಗಳಿಸಿ ಭಾರತಕ್ಕೆ ಕೇವಲ 106 ರನ್ ಗಳ ಗೆಲುವಿನ ಗುರಿ ನೀಡಿದೆ.

ಧರ್ಮಶಾಲಾ, ಮಾರ್ಚ್. 27 : ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮೂರನೇ ದಿನದಾಟದಲ್ಲಿ ಪ್ರವಾಸಿ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 137ರನ್ ಗಳಿಸಿ ಭಾರತಕ್ಕೆ ಕೇವಲ 106 ರನ್ ಗಳ ಗೆಲುವಿನ ಗುರಿ ನೀಡಿದೆ.

ಮೂರನೇ ದಿನವಾದ ಸೋಮವಾರ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 332 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಭಾರತದ ಬೌಲಿಂಗ್ ದಾಳಿಗೆ ಕೇವಲ 137 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು.

ಆಸೀಸ್ ಪರ ಗ್ಲೇನ್ ಮ್ಯಾಕ್ಸ್ ವೆಲ್ 45 ರನ್ ಗಳಿಸಿದನ್ನು ಬಿಟ್ಟರೇ ಉಳಿದ ಬ್ಯಾಟ್ಸ್ ಮನ್ ಗಳು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ತುಳಿದರು.

ndia Vs Australia, Day 3: Australia restricted to 137; India need 106 to win

ಉಮೇಶ್ ಯಾದವ್ 3, ಜಡೇಜ 3 ಮತ್ತು ಅಶ್ವಿನ್ 3 ವಿಕೆಟ್ ಪಡೆದು ಆಸ್ಟ್ರೇಲಿಯಾಕ್ಕೆ ಕಂಟಕವಾದರು.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 332 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತ 32 ರನ್ ಗಳ ಅಲ್ಪ ಮುನ್ನಡೆ ಸಾಧಿಸಿತು.

ಆಸೀಸ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಆಲೌಟ್ ಆಗಿತ್ತು. 248 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಜಡೇಜ ಹಾಗೂ ವೃದ್ದಿಮಾನ್ ಸಹಾ ಜೋಡಿ 7ನೇ ವಿಕೆಟ್ ಗೆ ಅಮೋಘ 96 ರನ್ ಗಳ ಜೊತೆಯಾಟ ನೀಡಿ 300ರ ಗಡಿ ದಾಟಿಸಿತು.[ಪ್ರಶಸ್ತಿಗಾಗಿ ಇಂಡೋ-ಆಸೀಸ್ ಕಾದಾಟ]

ಎರಡನೇ ದಿನದಂದು ಭಾರತ 248 ರನ್ ಗಳಿಸಿ 6 ವಿಕೆಟ್ ಳನ್ನು ಕಳೆದುಕೊಂಡಿತ್ತು. ನಂತರ ಬ್ಯಾಟಿಂಗ್ ಗೆ ಬಂದ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜ 63, ಸಹಾ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತ ಪರ ನಾಯಕ ಅಜಿಂಕ್ಯಾ ರಹಾನೆ 46, ಚೇತೇಶ್ವರ ಪೂಜಾರ 57, ಕೆಎಲ್ ರಾಹುಲ್ 60 ರನ್ ಮಾಡಿದರು.

ಇನ್ನು ಆಸ್ಟ್ರೇಲಿಯಾದ ಪರ ನಥಾನ್ ಲಿಯಾನ್ 92 ರನ್ ಗಳನ್ನು ನೀಡಿ 5 ವಿಕೆಟ್ ಗಳನ್ನು ಪಡೆದು ಗಮನ ಸೆಳೆದರು.

ಸಂಕ್ಷಿಪ್ತ ಸ್ಕೋರ್:

ಪ್ರಥಮ ಇನ್ನಿಂಗ್ಸ್ ಆಸೀಸ್: 300, (ಸ್ಟೀವನ್ ಸ್ಮಿತ್ 111, ಮ್ಯಾಥ್ಯೂ ವೇಡ್ 57, ಡೇವಿಡ್ ವಾರ್ನರ್ 56; ಕುಲ್ದೀಪ್ ಯಾದವ್ 68ಕ್ಕೆ 4, ಉಮೇಶ್ ಯಾದವ್ 2).

ಭಾರತ ಮೊದಲ ಇನ್ನಿಂಗ್ಸ್: 332, ಅಜಿಂಕ್ಯಾ ರಹಾನೆ 46, ಚೇತೇಶ್ವರ ಪೂಜಾರ 57, ಕೆಎಲ್ ರಾಹುಲ್ 60, ರವೀಂದ್ರ ಜಡೇಜ 63, ಸಹಾ 31, ನಥಾನ್ ಲಿಯಾನ್ 92ಕ್ಕೆ 5.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X