ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನಲ್ಲಿ ವಿಶ್ವದಾಖಲೆ ಮೊತ್ತ ಚೆಚ್ಚಿದ ಇಂಗ್ಲೆಂಡ್

By Mahesh

ಟ್ರೆಂಟ್ ಬ್ರಿಜ್, ಆಗಸ್ಟ್ 30: ಪಾಕಿಸ್ತಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಶ್ವ ದಾಖಲೆ ಮೊತ್ತ ದಾಖಲಿಸಿದೆ. ಅಲೆಕ್ಸ್ ಹೇಲ್ಸ್ ಅವರ 171 ರನ್ ನೆರವಿನಿಂದ ಇಂಗ್ಲೆಂಡ್ ತಂಡ ಮಂಗಳವಾರ 444/3 ಸ್ಕೋರ್ ಮಾಡಿದೆ.


ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು ನ್ಯಾಟಿಂಗ್ ಹ್ಯಾಮ್ ಪಿಚ್ ನ ಲಾಭ ಪಡೆದು ವಿಶ್ವ ದಾಖಲೆ ಮೊತ್ತ ಪೇರಿಸಿದರು. ಇದಕ್ಕೂ ಮುನ್ನ 2006 ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ ತಂಡ 443/9 ಗಳಿಸಿದ್ದು ಏಕದಿಕ ಕ್ರಿಕೆಟ್ ನಲ್ಲಿ ಗರಿಷ್ಠ ಮೊತ್ತ ಎನಿಸಿತ್ತು. [ಇಂಗ್ಲೆಂಡಿನಿಂದ ಭಾರತ ಪ್ರವಾಸ, ಬೆಂಗ್ಳೂರಲ್ಲೂ ಪಂದ್ಯ]

England post record 444/3 against Pakistan

ಆರಂಭಿಕ ಆಟಗಾರ ಜಾಸನ್ ರಾಯ್ ಕಳೆದುಕೊಂಡ ಮೇಲೆ ಹೇಲ್ಸ್ ಹಾಗೂ ಜೋ ರೂಟ್ (85) ಇಬ್ಬರು 2ನೇ ವಿಕೆಟ್ ಗೆ 248 ರನ್ ಜೊತೆಯಾಟ ಕಂಡರು. ಇಬ್ಬರು 37ನೇ ಓವರ್ ಆಸುಪಾಸಿನಲ್ಲಿ ವಿಕೆಟ್ ಒಪ್ಪಿಸಿದರು. [ಇಂಗ್ಲೆಂಡಿನ ಮಾಜಿ ಓಪನರ್ ಗೆ ಕ್ಯಾನ್ಸರ್]

ನಂತರ ಇಯಾನ್ ಮಾರ್ಗನ್ ಅಜೇಯ 57 ಹಾಗೂ ಜೋಸ್ ಬಟ್ಲರ್ ಅಜೇಯ 90 ರನ್ ಗಳಿಸಿ 161 ರನ್ ಜೊತೆಯಾಟ ಕಂಡು ಇಂಗ್ಲೆಂಡ್ ಮೊತ್ತವನ್ನು 444 ಸ್ಕೋರಿಗೇರಿಸಿದರು.

ಹೇಲ್ಸ್ ಅವರು 4 ಸಿಕ್ಸರ್ ಹಾಗೂ 22 ಬೌಂಡರಿ ಬಾರಿಸಿ 140 ಸ್ಟ್ರೈಕ್ ರೇಟ್ ನಂತೆ 171 ರನ್ ಗಳಿಸಿದರು. ಪಾಕಿಸ್ತಾನ ಪರ ವಹಾಬ್ ರಿಯಾಜ್ ಅತ್ಯಂತ ಕಳಪೆ ಬೌಲಿಂಗ್ ಮಾಡಿ 10 ಓವರ್ ಗಳಲ್ಲಿ 110 ರನ್ ಚೆಚ್ಚಿಸಿಕೊಂಡರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X