ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪುಣೆ ಟೆಸ್ಟ್: ಕೊಹ್ಲಿ ಪಡೆಗೆ 333 ರನ್ ಗಳ ಹೀನಾಯ ಸೋಲು

ಮೊದಲ ಇನಿಂಗ್ಸ್ ನಲ್ಲಿ ರಾಜ್ಯದ ಆಟಗಾರ ಕೆ.ಎಲ್. ರಾಹುಲ್ ಅರ್ಧಶತಕ ಗಳಿಸಿದ್ದು, ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಕಪಿಲ್ ದೇವ್ ದಾಖಲೆ ಮುರಿದಿದ್ದು ಮಾತ್ರ ಭಾರತಕ್ಕೆ ಖುಷಿ ಕೊಟ್ಟ ಸಂಗತಿಗಳು.

ಪುಣೆ, ಫೆಬ್ರವರಿ 25: ಸ್ಪಿನ್ನರ್ ಗಳಾದ ಸ್ಟೀವ್ ಓಕೀಫ್ (35 ರನ್ ಗಳಿಗೆ 6 ವಿಕೆಟ್) ಹಾಗೂ ನಥಾನ್ ಲಿಯಾನ್ (53 ರನ್ ಗಳಿಗೆ 4 ವಿಕೆಟ್) ಅವರ ಕೈಚಳಕಕ್ಕೆ ಶರಣಾದ ಭಾರತೀಯ ಕ್ರಿಕೆಟ್ ತಂಡ, ಪುಣೆಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 333 ರನ್ ಗಳ ಹೀನಾಯ ಸೋಲು ಅನುಭವಿಸಿದೆ.

ಈ ಸೋಲಿನಿಂದಾಗಿ, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ತಂಡವು ಭಾರತದ ವಿರುದ್ಧ 1-0 ಮುನ್ನಡೆ ಸಾಧಿಸಿದಂತಾಗಿದೆ. ಸರಣಿಯ ಮುಂದಿನ ಪಂದ್ಯವು ಮಾರ್ಚ್ 4ರಿಂದ 8ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುಣೆಯ ಪಂದ್ಯದಲ್ಲಿ, ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿದ್ದ ಪಿಚ್ ನಲ್ಲಿ ಉತ್ತಮ ಬೌಲಿಂಗ್ ಮಾಡಲಾಗದ ಭಾರತ, ಬ್ಯಾಟಿಂಗ್ ನಲ್ಲೂ ಸಂಪೂರ್ಣ ವೈಫಲ್ಯ ಅನುಭವಿಸಿತು. ಭಾರತದ ಈ ಹೀನಾಯ ಪತನದಿಂದಾಗಿ, ಐದು ದಿನಗಳಲ್ಲಿ ಮುಗಿಯಬೇಕಾಗಿದ್ದ ಪಂದ್ಯ ಮೂರೇ ದಿನಗಳಲ್ಲಿ ಮುಕ್ತಾಯವಾಗಿದೆ.[ಕಪಿಲ್ ದೇವ್ ದಾಖಲೆ ಮುರಿದ ಆರ್ ಅಶ್ವಿನ್]

333 runs defeat for India in 1st test against Australia

ಪಂದ್ಯದ ಎರಡನೇ ದಿನವಾದ ಶುಕ್ರವಾರ ಆಸ್ಟ್ರೇಲಿಯಾ ತಂಡ, ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತ್ತು. 59 ರನ್ ಗಳಿಸಿದ್ದ ನಾಯಕ ಸ್ಟೀವನ್ ಸ್ಮಿತ್ ಹಾಗೂ 21 ರನ್ ಗಳಿಸಿದ್ದ ಮಿಚೆಲ್ ಮಾರ್ಷ್, ಶನಿವಾರ ತಮ್ಮ ತಂಡದ ಇನಿಂಗ್ಸ್ ಮುಂದುವರಿಸಿದರು.

ಇಬ್ಬರದಲ್ಲಿ ಮಾರ್ಷ್ ತಮ್ಮ ಮೊತ್ತಕ್ಕೆ 10 ರನ್ ಸೇರ್ಪಡೆಗೊಳಿಸಿಕೊಂಡು ಕ್ರೀಸ್ ತೊರೆದರೆ, ನಾಯಕ ಸ್ಮಿತ್ ಮಾತ್ರ ಕ್ರೀಸ್ ನಲ್ಲಿ ಗಟ್ಟಿಯಾಗಿ ತಳವೂರಿ ಶತಕ (109 ರನ್, 202 ಎಸೆತ, 11 ಬೌಂಡರಿ) ಸಿಡಿಸಿದರು. ಅವರ ಈ ಆಟದಲ್ಲಿ ಆಸೀಸ್ ನ ಇತರೆ ಬ್ಯಾಟ್ಸ್ ಮನ್ ಗಳಿಂದ ಯಾವುದೇ ಬೆಂಬಲ ಸಿಗದಿದ್ದರೂ, ಮಿಚೆಲ್ ಸ್ಟಾರ್ಕ್ ಅವರ 30 ರನ್ ಗಳ ನೆರವಿನಿಂದಾಗಿ ತಂಡವು 285 ರನ್ ಸಂಪಾದಿಸಿತು.

ಹಾಗಾಗಿ, ಭಾರತ ತಂಡಕ್ಕೆ ಪಂದ್ಯ ಗೆಲ್ಲಲು 441 ರನ್ ಗಳ ಬೃಹತ್ ಗುರಿ ಸಿಕ್ಕಿತು. ಆದರೆ, ಈ ಗುರಿಯನ್ನು ಮುಟ್ಟಲು ಆಸೀಸ್ ನ ಸ್ಪಿನ್ನರ್ ಗಳಾದ ನಥಾನ್ ಲಿಯಾನ್ ಹಾಗೂ ಸ್ಟೀವ್ ಓಕೀಫ್ ಬಿಡಲಿಲ್ಲ.

ಭಾರತದ ಇನಿಂಗ್ಸ್ ನ ಆರಂಭದಲ್ಲೇ ಮುರಳಿ ವಿಜಯ್ ವಿಕೆಟ್ ಉರುಳಿಸುವ ಮೂಲಕ ಭಾರತದ ಪತನಕ್ಕೆ ಶ್ರೀಕಾರ ಹಾಕಿದ ಓಕೀಫ್, ಆನಂತರ ಚೇತೇಶ್ವರ ಪೂಜಾರ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ವೃದ್ಧಿಮಾನ್ ಸಾಹಾ ಅವರ ವಿಕೆಟ್ ಕಿತ್ತು ಮಧ್ಯಮ ಕ್ರಮಾಂಕವು ಸಂಪೂರ್ಣವಾಗಿ ನೆಲಕಚ್ಚುವಂತೆ ನೋಡಿಕೊಂಡರು.

ಅತ್ತ, ಮತ್ತೊಬ್ಬ ಸ್ಪಿನ್ನರ್ ಲಿಯಾನ್, ಆರಂಭಿಕ ಹಾಗೂ ಕರ್ನಾಟಕದ ಆಟಗಾರ ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಇಶಾಂತ್ ಶರ್ಮಾ ವಿಕೆಟ್ ಪಡೆದು ಭಾರತದ ಇನಿಂಗ್ಸ್ ಗೆ ಬೇಗ ಇತಿಶ್ರೀ ಹಾಡಲು ನೆರವಾದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 260; ಭಾರತ ಮೊದಲ ಇನಿಂಗ್ಸ್ 105; ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್ 285 (ಸ್ಟೀವನ್ ಸ್ಮಿತ್ 109, ರೆನ್ ಶಾ 31; ಅಶ್ವಿನ್ 119ಕ್ಕೆ 4, ರವೀಂದ್ರ ಜಡೇಜಾ 65ಕ್ಕೆ 3); ಭಾರತ ದ್ವಿತೀಯ ಇನಿಂಗ್ಸ್ 107 (ಚೇತೇಶ್ವರ ಪೂಜಾರ 31, ಅಜಿಂಕ್ಯ ರಹಾನೆ 18; ಸ್ಟೀವ್ ಓಕೀಫ್ 35ಕ್ಕೆ 6, ಲಿಯಾನ್ 53ಕ್ಕೆ 4).

ಪಂದ್ಯಶ್ರೇಷ್ಠ: ಸ್ಟೀವ್ ಓಕೀಫ್ (ಆಸ್ಟ್ರೇಲಿಯಾ)

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X