ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದೈತ್ಯ ಸಂಹಾರಿ ಐರ್ಲೆಂಡ್-ಭಾರತ ಕದನ ಕುತೂಹಲ

By Mahesh

ಹ್ಯಾಮಿಲ್ಟನ್, ಮಾ.9: ವಿಶ್ವಕಪ್ 2015 ಟೂರ್ನಿಯಲ್ಲಿ ದೈತ್ಯ ಸಂಹಾರಿಗಳೆನಿಸಿಕೊಂಡಿರುವ ಐರ್ಲೆಂಡ್ ತಂಡದ ಎದುರು ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮಂಗಳವಾರ ಸೆಣಸಾಟ ನಡೆಸಲಿದೆ. ಭಾರತೀಯ ಕಾಲ ಮಾನ ಪ್ರಕಾರ ಬೆಳಗ್ಗೆ 6 ಗಂಟೆಯಿಂದ ಕ್ರಿಕೆಟ್ ಹಬ್ಬದ ರಸದೌತಣ ಸವಿಯಬಹುದು. ಹಲವು ದಾಖಲೆಗಳು ಧೂಳಿಪಟವಾಗುವುದಂತೂ ನಿಶ್ಚಿತ.

ಆಸ್ಟ್ರೇಲಿಯಾದ ಮೈದಾನದಲ್ಲಿ ನಡೆದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಭಾರತ ಈಗ ನ್ಯೂಜಿಲೆಂಡ್ ನಲ್ಲಿ ಮೊದಲ ಹಾಗೂ ಲೀಗ್ ನ ಕೊನೆ ಪಂದ್ಯವನ್ನು ಹ್ಯಾಮಿಲ್ಟನ್ ನಲ್ಲಿ ಆಡಲಿದೆ. [ಐರ್ಲೆಂಡ್ vs ಭಾರತ ಪಂದ್ಯದ ವರದಿ]

ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಸುಲಭ ಹಾಗೂ ಅರ್ಹ ಜಯ ದಾಖಲಿಸಿದ ಧೋನಿ ಹುಡುಗರು ಈಗ ಕಿವೀಸ್ ನೆಲದಲ್ಲಿ ಐರ್ಲೆಂಡ್ ಹಾಗೂ ಜಿಂಬಾಬ್ವೆ(ಮಾ.14, 6.30AM IST) ಆಕ್ಲೆಂಡ್ ವಿರುದ್ಧ ಆಡಲಿದೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ಅಂಕ ಪಟ್ಟಿ | ವೇಳಾಪಟ್ಟಿ | ಫಲಿತಾಂಶ

2015ರ ವಿಶ್ವಕಪ್ ನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಜಯಸಿರುವ ಐರ್ಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧದ ಪಂದ್ಯದ ನಂತರ ಪಾಕಿಸ್ತಾನವನ್ನು ಮಾ.15ರಂದು ಅಡಿಲೇಡ್ ನಲ್ಲಿ ಎದುರಿಸಲಿದೆ. ಐರ್ಲೆಂಡ್ ತಂಡದ ಸೋಲು ಗೆಲುವಿನ ಲೆಕ್ಕಾಚಾರದ ಮೇಲೆ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳ ಮುಂದಿನ ಹಂತದ ಭವಿಷ್ಯ ಅಡಗಿದೆ.

10 facts India-Ireland match, World Cup match Hamilton

ಟೀಂ ಇಂಡಿಯಾ ಹಾಗೂ ಐರ್ಲೆಂಡ್ ನಡುವಿನ ಸೆಡಾನ್ ಪಾರ್ಕ್ ಪಂದ್ಯಕ್ಕೂ ಮುನ್ನ ಈ ಪ್ರಮುಖ 10 ಅಂಶಗಳತ್ತ ಗಮನ ಹರಿಸಿ:

1. ಭಾರತ ಹಾಗೂ ಐರ್ಲೆಂಡ್ ತಂಡ ವಿಶ್ವಕಪ್ ನಲ್ಲಿ ಎರಡನೇ ಬಾರಿಗೆ ಎದುರಾಗುತ್ತಿವೆ.

2. 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಟೀಂ ಇಂಡಿಯಾ 5 ವಿಕೆಟ್ ಗಳಿಂದ ಜಯ ದಾಖಲಿಸಿತ್ತು. []

3. ವಿಶ್ವಕಪ್ ಅಲ್ಲದೆ ಒಟ್ಟಾರೆ ಟೀಂ ಇಂಡಿಯಾ ಹಾಗೂ ಐರ್ಲೆಂಡ್ ಎರಡನೇ ಬಾರಿಗೆ ಸಂಧಿಸುತ್ತಿವೆ. ಎರಡು ಬಾರಿಯೂ ಭಾರತ ಗೆಲುವು ದಾಖಲಿಸಿದೆ. 2011ರ ವಿಶ್ವಕಪ್ ಪಂದ್ಯಕ್ಕೂ ಮೊದಲು 2007ರಲ್ಲಿ ಬೆಲ್ ಫಾಸ್ಟ್ ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ತಂಡ 9 ವಿಕೆಟ್ ಗಳಿಂದ ಜಯ ಪಡೆದಿತ್ತು.

4.ಕಪಿಲ್ ದೇವ್ ಅವರ ರೆಕಾರ್ಡ್ ಮುರಿಯುವ ಉತ್ಸಾಹದಲ್ಲಿ ಎಂಎಸ್ ಧೋನಿ ಇದ್ದಾರೆ. ಐರ್ಲೆಂಡ್ ವಿರುದ್ಧ ಧೋನಿ ನಾಯಕತ್ವದಲ್ಲಿ ಗೆಲುವು ಸಾಧಿಸಿದರೆ, ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಅತಿ ಹೆಚ್ಚು ಪಂದ್ಯ ಗೆಲ್ಲಿಸಿದ ದಾಖಲೆ ಬರೆಯಲಿದ್ದಾರೆ. ಸದ್ಯ ಕಪಿಲ್ ಹಾಗೂ ಧೋನಿ ತಲಾ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದಾರೆ.

5.ವಿಶ್ವಕಪ್ ನಲ್ಲಿ ಒಟ್ಟಾರೆ 8 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿರುವ ಭಾರತ ಇನ್ನೊಂದು ಪಂದ್ಯ ಗೆದ್ದರೆ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಬರೆಯಲಿದೆ.

6. ಗೌತಮ್ ಗಂಭೀರ್ 80 ಅಜೇಯ, 2007ರಲ್ಲಿ ಗಳಿಸಿದ್ದು ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. 2011ರಲ್ಲಿ ಯುವರಾಜ್ ಸಿಂಗ್ 50 ರನ್ ನಾಟೌಟ್ ಆಗಿದ್ದರು.

7. ಯುವರಾಜ್ ಸಿಂಗ್ ಅವರು ಉಭಯ ತಂಡಗಳ ಪೈಕಿ ಅತಿ ಹೆಚ್ಚು ವಿಕೆಟ್ ಗಳಿಸಿದ ಆಟಗಾರರಾಗಿದ್ದಾರೆ. 2011 ವಿಶ್ವಕಪ್ ನಲ್ಲಿ ಯುವರಾಜ್ 5/31 ಗಳಿಸಿದ್ದರು.

8. ಐರ್ಲೆಂಡ್ ವಿರುದ್ಧ ಈ ಹಿಂದೆ ಧೋನಿ, ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಆಡಿದ್ದರು. ಮಿಕ್ಕವರೆಲ್ಲರಿಗೂ ಇದು ಐರ್ಲೆಂಡ್ ವಿರುದ್ಧದ ಮೊದಲ ಮುಖಾಮುಖಿ.

9. 2011ರಲ್ಲಿ ಎದುರಾಗಿದ್ದ ನಾಯಕರೇ ಈ ಬಾರಿಯೂ ತಂಡವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ಹಾಗೂ ಪೋರ್ಟರ್ ಫೀಲ್ಡ್ ಮತ್ತೊಮ್ಮೆ ತಂಡದ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ.

10. ಐರ್ಲೆಂಡ್ ಪರ ನಾಯಕ ಪೋರ್ಟರ್ ಫೀಲ್ಡ್ ವೈಯಕ್ತಿಕ 72 ರನ್ ಗಳಿಕೆ, 2011ರಲ್ಲಿ ಅತಿ ಹೆಚ್ಚು ಸ್ಕೋರ್ ಆಗಿದೆ. ಟ್ರೆಂಟ್ ಜಾನ್ಸನ್ ಹಾಗೂ ಜಾರ್ಜ್ ಡಾಕ್ರೆಲ್ ತಲಾ 2 ವಿಕೆಟ್ ಗಳಿಸಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎನಿಸಿದ್ದಾರೆ.
ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X