ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಬಾಂಗ್ಲಾದೇಶ ಟಾಪ್ 10 ಖಾಸ್ ಬಾಸ್

By Mahesh

ಮಾ.19ರಂದು ಹಾಲಿ ಚಾಂಪಿಯನ್ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಐಸಿಸಿ ವಿಶ್ವಕಪ್ ಟೂರ್ನಿ 2015ರ ಎರಡನೇ ಕ್ವಾರ್ಟರ್ ಫೈನಲ್ ನಡೆಯಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೆಲ್ಲುವ ನೆಚ್ಚಿನ ಕುದುರೆಯಾಗಿದೆ.

ಬಿ ಗುಂಪಿನಿಂದ ಎಲ್ಲಾ 6 ಲೀಗ್ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಅರಬ್ ಎಮಿರೇಟ್ಸ್, ವೆಸ್ಟ್ ಇಂಡೀಸ್, ಐರ್ಲೆಂಡ್ ಹಾಗೂ ಜಿಂಬಾಬ್ವೆ ತಂಡಗಳನ್ನು ಆಲೌಟ್ ಮಾಡಿ ಹೊಸ ದಾಖಲೆ ಬರೆದಿದೆ.

ವಿಶ್ವಕಪ್ ಕ್ರಿಕೆಟ್ 2015</a>: </strong><a class=ವೇಳಾಪಟ್ಟಿ | ಫಲಿತಾಂಶ" title="ವಿಶ್ವಕಪ್ ಕ್ರಿಕೆಟ್ 2015: ವೇಳಾಪಟ್ಟಿ | ಫಲಿತಾಂಶ" />ವಿಶ್ವಕಪ್ ಕ್ರಿಕೆಟ್ 2015: ವೇಳಾಪಟ್ಟಿ | ಫಲಿತಾಂಶ

ಎ ಗುಂಪಿನಿಂದ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿರುವ ಬಾಂಗ್ಲಾದೇಶ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾರತ ಹಾಗೂ ಬಾಂಗ್ಲಾದೇಶ ಪಂದ್ಯ ಗೆದ್ದವರು ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದಾರೆ.

10 facts about India-Bangladesh World Cup quarter-final

1. ವಿಶ್ವಕಪ್ ಕ್ವಾರ್ಟರ್ ಫೈನಲ್ ಹಂತದಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗುತ್ತಿವೆ. ಈ ಮುಂಚೆ ಎರಡು ಬಾರಿ ಲೀಗ್ ಹಂತದಲ್ಲಿ ಕಾದಾಡಿವೆ.
2. ವಿಶ್ವಕಪ್ ನಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆದ್ದಿವೆ. ಬಾಂಗ್ಲಾದೇಶ ತಂಡ 2007ರಲ್ಲಿ ಭಾರತಕ್ಕೆ ಸೋಲುಣಿಸಿತ್ತು. ಮೊದಲ ಹಂತದಿಂದಲೇ ಟೀಂ ಇಂಡಿಯಾ ಹೊರ ಬಿದ್ದಿತ್ತು. ಎಂಎಸ್ ಧೋನಿ ತಂಡ ಈ ಸೇಡನ್ನು 2011ರಲ್ಲಿ ತೀರಿಸಿಕೊಂಡಿತು.
3. 2011ರಲ್ಲಿ ಢಾಕಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಎರಡು ಶತಕಗಳು ಬಂದಿತ್ತು. ವೀರೇಂದರ್ ಸೆಹ್ವಾಗ್ 175 ಹಾಗೂ ವಿರಾಟ್ ಕೊಹ್ಲಿ 100 ನಾಟೌಟ್.
4. 2007ರಲ್ಲಿ ಎಂಎಸ್ ಧೋನಿ ಅವರು ಮೂರು ಎಸೆತ ಎದುರಿಸಿ ಡಕ್ ಔಟ್ ಆದರು. 2011ರಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ.
5. ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಆಟಗಾರರು ಶತಕ ಇನ್ನೂ ದಾಖಲಿಸಿಲ್ಲ. 2011ರಲ್ಲಿ ತಮೀಮ್ ಇಕ್ಬಾಲ್ 70ರನ್ ಗಳಿಸಿದ್ದೇ ದೊಡ್ಡ ಮೊತ್ತ.
6. 2011ರಲ್ಲಿ ವಿಶ್ವಕಪ್ ಮೊದಲ ಪಂದ್ಯದಲ್ಲಿ ಕೊಹ್ಲಿ 83 ಎಸೆತಗಳಲ್ಲಿ 100ರನ್ ಚೆಚ್ಚಿದ್ದರು.

10 facts about India-Bangladesh World Cup quarter-final

7. ಹಾಲಿ ಬಾಂಗ್ಲಾದೇಶ ತಂಡದಲ್ಲಿರುವ ಆಟಗಾರರ ಪೈಕಿ 6 ಮಂದಿ 2011ರಲ್ಲಿ ಆಡಿದ್ದರು. ತಮೀಮ್, ಇಮ್ರುಲ್, ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಂ, ಮಮುದುಲ್ಲಾ, ರುಬೇಲ್ ಹೊಸೇನ್. ಭಾರತದ ತಂಡದಿಂದ ಧೋನಿ ಹಾಗೂ ಕೊಹ್ಲಿ ಮಾತ್ರ ಈ ಮುಂಚೆ ಬಾಂಗ್ಲಾ ಎದುರಿಸಿದ ಅನುಭ ಹೊಂದಿದ್ದಾರೆ.
8. ಒಟ್ಟಾರೆ ಏಕದಿನ ಕ್ರಿಕೆಟ್ ನಲ್ಲಿ 29 ಬಾರಿ ಉಭಯ ತಂಡಗಳು ಎದುರಿಸಿದ್ದು ಬಾಂಗ್ಲಾದೇಶ ಮೂರು ಬಾರಿ ಭಾರತದ ವಿರುದ್ಧ ಗೆಲುವು ಸಾಧಿಸಿದೆ. 2 ಪಂದ್ಯಗಳು ಫಲಿತಾಂಶ ಬಂದಿಲ್ಲ.
9. ಆಸ್ಟ್ರೇಲಿಯಾದಲ್ಲಿ ಅದರಲ್ಲೂ ಎಂಸಿಜಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಬಾಂಗ್ಲಾದೇಶ ಸೆಣೆಸುತ್ತಿದೆ.
10. 2012ರ ಮಾರ್ಚ್ ತಿಂಗಳಿನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರು 100ನೇ ಶತಕ(147 ಎಸೆತಗಳಲ್ಲಿ 114 ರನ್) ಅದರೆ, ಭಾರತವನ್ನು ಬಾಂಗ್ಲಾದೇಶ 5 ವಿಕೆಟ್ ಗಳಿಂದ ಸೋಲಿಸಿತು.

ನಾಯಕರು: ರಾಹುಲ್ ದ್ರಾವಿಡ್(2007), ಎಂಎಸ್ ಧೋನಿ(2011), ಹಬಿಬುಲ್ ಬಷರ್(2007), ಶಕೀಬ್ ಅಲ್ ಹಸನ್ (2011)
ಅತಿ ಹಿರಿಯ ಹಾಗೂ ಕಿರಿಯ ಆಟಗಾರರು: ಮೋರ್ತಜಾ(31ವರ್ಷ), ಸೌಮ್ಯ ಸರ್ಕಾರ್ (21), ಎಂಎಸ್ ಧೋನಿ(33), ಅಕ್ಷರ್ ಪಟೇಲ್ (21).

ಅತಿ ಹೆಚ್ಚು ಸ್ಕೋರ್
ಭಾರತ -370/4, 50 ಓವರ್ಸ್
ಬಾಂಗ್ಲಾದೇಶ -283/9, 50 ಓವರ್ಸ್
ಅತಿ ಕಡಿಮೆ ಸ್ಕೋರ್
ಭಾರತ-191 ಆಲೌಟ್, 49.3 ಓವರ್ಸ್

ಟೂರ್ನಿಯ ಹೆಚ್ಚು ರನ್
* ಸೆಹ್ವಾಗ್ 177 (2 ಇನ್ನಿಂಗ್ಸ್)- 175ರನ್ -2011
* ತಮೀಮ್ ಇಕ್ಬಾಲ್ 121 (2 ಇನ್ನಿಂಗ್ಸ್) 70ರನ್-2011

ಹೆಚ್ಚು ವಿಕೆಟ್
ಮುನಾಫ್ ಪಟೇಲ್ 6 (2 ಇನ್ನಿಂಗ್ಸ್) ಶ್ರೇಷ್ಠ 4/48-2011
ಮೋರ್ತಜಾ 4 ವಿಕೆಟ್ (1 ಇನ್ನಿಂಗ್ಸ್) ಶ್ರೇಷ್ಠ 4/38-2007

ಮಾ.19ರಂದು ಪಂದ್ಯ 9AM IST ಸ್ಟಾರ್ ಸ್ಪೋರ್ಟ್ಸ್ 1, ಡಿಡಿ, ಸುವರ್ಣ ಪ್ಲಸ್, ಆಕಾಶವಾಣಿ ಕಾಮೆಂಟರಿ ತಪ್ಪಿಸಬೇಡಿ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X