ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20: ಸ್ಪಿನ್ನರ್ ಸುನಿಲ್ 'ಸೂಪರ್' ವಿಶ್ವದಾಖಲೆ

By Mahesh

ಗಯಾನ, ಜು.18: ಕೆರಿಬಿಯನ್ ನಾಡಿನ ಅದ್ಭುತ ಸ್ಪಿನ್ನರ್ ಸುನೀಲ್ ನರೈನ್ ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸೂಪರ್ ಓವರ್ ನಲ್ಲಿ ಯಾರೊಬ್ಬ ಬೌಲರ್ ಸಾಧಿಸಿದ ದಾಖಲೆ ಬರೆದು ತಂಡಕ್ಕೆ ಜಯ ತಂದಿದ್ದಾರೆ. ಸೂಪರ್ ಓವರ್ ನಲ್ಲಿ ಮೇಡನ್ ಹಾಗೂ ವಿಕೆಟ್ ಪಡೆದ ಸುನೀಲ್ ಅವರ ದಾಖಲೆ ವಿಡಿಯೋ ಇಲ್ಲಿದೆ.

ಕೆರಿಬಿಯನ್ ಕ್ರಿಕೆಟ್ ಲೀಗ್(ಸಿಪಿಎಲ್) ಟೂರ್ನಿಯ ರೆಡ್ ಸ್ಟೀಲ್ ಮತ್ತು ಗಯಾನ ಅಮೇಜಾನ್ ವಾರಿಯರ್ಸ್ ನಡುವಿನ ಪಂದ್ಯದ ವೇಳೆ ಸುನೀಲ್ ನರೈನ್ ಅವರ ಬೌಲಿಂಗ್ ನಿಂದಾಗಿ ಗಯಾನ ಜಯಭೇರಿ ಬಾರಿಸಿದೆ.

ಟ್ರಿನಿಡಾಡ್ ನ ರೆಡ್ ಸ್ಟೀಲ್ ಮತ್ತು ಗಯಾನ ವಾರಿಯರ್ಸ್ ನ ಪಂದ್ಯ ರೋಚಕ ಟೈ ನಲ್ಲಿ ಅಂತ್ಯ ಕಂಡಿತ್ತು. ನಂತರದ ಸೂಪರ್ ಓವರ್ ನಲ್ಲಿ ಗಯಾನ ವಾರಿಯರ್ಸ್ 6 ಎಸೆತಗಳಲ್ಲಿ 11 ರನ್ ಗಳಿಸಿದರು. ಗೆಲ್ಲಲು 12 ರನ್ ಗಳಿಸಬೇಕಿದ್ದ ರೆಡ್ ಸ್ಟೀಲ್ ಒಂದೇ ಒಂದು ರನ್ ಕೂಡ ಗಳಿಸಲಾಗಲಿಲ್ಲ. ಸ್ಪಿನ್ನರ್ ಸುನೀಲ್ ನರೈನ್ ತಮ್ಮ ಆರು ಎಸೆತಗಳಲ್ಲಿ ಒಂದು ವಿಕೆಟ್ ಕಿತ್ತಿದ್ದಲ್ಲದೆ ಒಂದೂ ರನ್ ಕೊಡದೆ ಕಟ್ಟಿ ಹಾಕಿಬಿಟ್ಟರು.

World First: Sunil Narine bowls maiden in Super Over at CPL

ಐದು ಚೆಂಡು ತಿಂದ ನಿಕೊಲಾಸ್ ಪೂರನ್ ಅವರು ಮಾರ್ಟಿನ್ ಗಪ್ಟಿಲ್ ಗೆ ಕ್ಯಾಚಿತ್ತ್ತು ನಿರ್ಗಮಿಸಿದರು. ಕ್ರೀಸ್ ನಲ್ಲಿ ಔಟಾಗದೆ ಉಳಿದ ನ್ಯೂಜಿಲೆಂಡ್ ನ ರಾಸ್ ಟೇಲರ್ ಗೆ ಸುನಿಲ್ ಅವರ ಕೊನೆ ಎಸೆತದ ಮರ್ಮ ಅರಿವಾಗಲೇ ಇಲ್ಲ. ಈ ರೋಚಕ ಕ್ಷಣ ಕಂಡು ಕ್ರಿಕೆಟ್ ಜಗತ್ತು ಬೆರಗಾಗಿದೆ.

ಇದಕ್ಕೂ ಮುನ್ನ ಗೆಲ್ಲಲು 119ರನ್ ಮಾಡಬೇಕಿದ್ದ ವಾರಿಯರ್ಸ್ ತಂಡ ರೆಡ್ ಸ್ಟೀಲ್ ಗಳಿಸಿದ್ದ 118/8 ಸ್ಕೋರ್ ಸಮ ಮಾಡೀಕೊಂಡಿತ್ತು. ವಾರಿಯರ್ಸ್ ಗೆ ದಿನೇಶ್ ರಾಮದೀನ್ ನಾಯಕರಾದರೆ, ರೆಡ್ ಸ್ಟೀಲ್ ಗೆ ಡ್ವಾಯ್ನೆ ಬ್ರಾವೋ ಕ್ಯಾಪ್ಟನ್ ಆಗಿದ್ದರು. ಒಟ್ಟಾರೆ ಪಂದ್ಯದಲ್ಲಿ 4 ಓವರ್ ಗಳಲ್ಲಿ 23 ರನ್ನಿತ್ತು 2 ವಿಕೆಟ್ ಕಿತ್ತಿದ್ದಲ್ಲದೆ 9 ಎಸೆತಗಳಲ್ಲಿ 16 ರನ್ ಚೆಚ್ಚಿದ ಸಾಧನೆ ಸುನಿಲ್ ಹೆಸರಿನಲ್ಲಿ ದಾಖಲಾಗಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X