ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ : 9 ಬಾಂಬೆ 'ಡಕ್' 4 ರನ್ನಿಗೆ ತಂಡ ಆಲೌಟ್!

By Mahesh

ಮುಂಬೈ, ಡಿ.26: ಇಲ್ಲಿನ ಶಾಲಾ ತಂಡವೊಂದು ಯಾರಿಗೂ ಬೇಡದ ದಾಖಲೆಯೊಂದನ್ನು ಸ್ಥಾಪಿಸಿದೆ. ಇಡೀ ತಂಡ 4 ರನ್ನಿಗೆ ಆಲೌಟ್ ಆಗಿದ್ದು, 9 ಬ್ಯಾಟ್ಸ್ ಮನ್ ಗಳು ಡಕ್ ಹೊಡೆದಿದ್ದು ವಿಶೇಷ. ಬಹುಶಃ 'ಬಾಂಬೆ ಡಕ್' ಎಂದೇ ಕುಖ್ಯಾತಿ ಗಳಿಸಿದ್ದ ಮಾಜಿ ಕ್ರಿಕೆಟರ್ ಅಜಿತ್ ಅಗರ್ಕರ್ ಈ ಶಾಲಾ ತಂಡಕ್ಕೆ ಶುಭ ಹಾರೈಸಿದ್ದರೋ ಏನೋ, ತಲೆ ತಗ್ಗಿಸುವಂಥ ರೆಕಾರ್ಡ್ ಪಡೆದುಕೊಂಡಿದೆ.

ಡಿಎನ್ ಎ ಪತ್ರಿಕೆ ವರದಿಯಂತೆ ಹ್ಯಾರೀಸ್ ಶೀಲ್ಡ್ ಅಂತರ ಶಾಲಾ ಕ್ರಿಕೆಟ್ ಟೂರ್ನಿಯ ಪ್ಲೇಟ್ ಗ್ರೂಪ್ ಫೈನಲ್ (ಅಂಡರ್ 16) ರಾಜಹಾನ್ಸ್ ವಿದ್ಯಾಲಯ(ಅಂಧೇರಿ) ಕೇವಲ 4 ರನ್ ಮೊತ್ತಕ್ಕೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದೆ. ಯಶೋಧಾಮ್ ಹೈಸ್ಕೂಲ್ ಭರ್ಜರಿ ವಿಜಯೋತ್ಸವ ಆಚರಿಸಿದೆ. [ಸಚಿನ್ ದಾಖಲೆ ಮುರಿದ ಮುಂಬೈ ಯುವಕ ಪೃಥ್ವಿ]

ಶಿವಾಜಿ ಪಾರ್ಕ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಯಶೋಧಾಮ್ ಹೈಸ್ಕೂಲ್ ತಂಡ ಬೌಲರ್ ಗಳಾದ ಗೌರಂಗ್ ಸಾಚಾರ್ ಹಾಗೂ ರಿಯಾನ್ ಥಾಮಸ್ ಅವರು ಕ್ರಮವಾಗಿ 6 ಹಾಗೂ 4 ವಿಕೆಟ್ ಕಿತ್ತಿದ್ದಾರೆ. ಸಾಚಾರ್ 6/0 ವಿಕೆಟ್ ಪಡೆದರೆ, ಥಾಮಸ್ 4/2 ಗಳಿಸಿ ದಾಖಲೆ ಬರೆದಿದ್ದಾರೆ. ಯಶೋಧಾಮ್ ಹೈಸ್ಕೂಲ್ ತಂಡ ಇನ್ನಿಂಗ್ಸ್ ಹಾಗೂ 187 ರನ್ನಿನಿಂದ ಪಂದ್ಯವನ್ನು ಗೆದ್ದು ಬೀಗಿದೆ.

Unwanted record: 9 ducks and Mumbai team all out for just 4 runs!

ರಾಜ್ ಹನ್ಸ್ ತಂಡದ 9 ಜನ ಆಟಗಾರರು ಶೂನ್ಯ ಸುತ್ತಿ ಪೆವಿಲಿಯನ್ ತೆರಳಿದರೆ ಒಬ್ಬ ಆಟಗಾರ 2 ರನ್ ಗಳಿಸಿದ ಉಳಿದ ರನ್ ಲೆಗ್ ಬೈ ಮುಖಾಂತರ ಬಂದಿತು.

ಪಂದ್ಯದ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಕೋಚ್ ನಿಯಾಜ್ ವಾರ್ಸಿ ನಿಜಕ್ಕೂ ಆಘಾತಕಾರಿಯಾಗಿದೆ. ಏನಾಯ್ತು ಎಂಬುದು ತಿಳಿಯುತ್ತಿಲ್ಲ. ನಮ್ಮ ತಂಡ ಇಂಥ ಕಳಪೆ ಪ್ರದರ್ಶನ ಎಂದೂ ನೀಡಿರಲಿಲ್ಲ ಎಂದಿದ್ದಾರೆ.


ಸಂಕ್ಷಿಪ್ತ ಸ್ಕೋರ್:

ರಾಜಹನ್ಸ್ ವಿದ್ಯಾಲಯ(ಅಂಧೇರಿ)
ಮೊದಲ ಇನ್ನಿಂಗ್ಸ್ 56 ಆಲೌಟ್ (ಸಚಿನ್ ಸಿಂಗ್ 3/5, ಥಾಮಸ್ 3/6)
ಎರಡನೇ ಇನ್ನಿಂಗ್ಸ್ 4 ರನ್ನಿಗೆ ಆಲೌಟ್ (ಸಾಚಾರ್ 6/0, ಥಾಮಸ್ 4/2)
ಯಶೋಧಾಮ್ ಹೈಸ್ಕೂಲ್(ಗೊರೆಗಾಂವ್)
247 ಆಲೌಟ್( ವಿನಯ್ ಕನ್ವರ್ 53, ಗೌರಂಗ್ ಸಾಚಾರ್ 85)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X