ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

1975-2011: ವಿಶ್ವಕಪ್ ಫೈನಲ್ ಪಂದ್ಯಗಳ ಮೆಲುಕು

By Mahesh

ಬೆಂಗಳೂರು, ಫೆ.3: 1975 ರಿಂದ 2011 ರ ತನಕದ ವಿಶ್ವಕಪ್ ಪಂದ್ಯಾವಳಿಗಳಲ್ಲಿ 10 ಪಂದ್ಯ ಶ್ರೇಷ್ಠ ಪ್ರದರ್ಶನಗಳನ್ನು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿ ಓದಿರುತ್ತೀರಿ. ಅಂತಿಮ ಹಣಾಹಣಿಯ ಒತ್ತಡದ ಪಂದ್ಯದಲ್ಲಿ ಸಮಯೋಚಿತ ಆಟ ಪ್ರದರ್ಶಿಸಿ ತಂಡಕ್ಕೆ ಜಯ ತರುವುದು ಸುಲಭದ ಮಾತಲ್ಲ.

ಕಳೆದ ಹತ್ತು ಫೈನಲ್ ಪಂದ್ಯಗಳಲ್ಲಿ 3 ಬಾರಿ ರನ್ ಚೇಸ್ ಮಾಡಿದ ತಂಡಗಳು ಕಪ್ ಎತ್ತಿವೆ. 2011ರಲ್ಲಿ ಭಾರತ ಫೈನಲ್ ಪಂದ್ಯದಲ್ಲೇ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು. ಈ ಮೂಲಕ ಎರಡನೇ ಬಾರಿ ವಿಶ್ವಕಪ್ ತನ್ನದಾಗಿಸಿಕೊಂಡಿತು. [ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ವೀರರ ಪಟ್ಟಿ]

11ನೇ ಆವೃತ್ತಿಯ ವಿಶ್ವಕಪ್ ಪಂದ್ಯಾವಳಿಗಳು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಫೆ.14ರಿಂದ ಆರಂಭಗೊಂಡು ಮಾರ್ಚ್ 29ರಂದು ಮೆಲ್ಬೋರ್ನ್ ನಲ್ಲಿ ಕೊನೆಗೊಳ್ಳಲಿದೆ. [ಸಚಿನ್, ರಿಕಿ ದಾಖಲೆ ಧೂಳಿಪಟ ಸಾಧ್ಯವೇ?]

1975ರ ಜೂನ್ 21ರಂದು ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪಂದ್ಯವಾಳಿಗೆ ಇಂಗ್ಲೆಂಡಿನ ಲಾರ್ಡ್ಸ್ ಮೈದಾನ ಸಾಕ್ಷಿಯಾಯಿತು. ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವಿನ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಂಡಿತು.

2011ರಲ್ಲಿ ಮುಂಬೈನಲ್ಲಿ ನಡೆದ ಫೈನಲ್ ನಲ್ಲಿ 275 ರನ್ ಚೇಸ್ ಮಾಡಿದ ಧೋನಿ ನೇತೃತ್ವದ ಟೀಂ ಇಂಡಿಯಾ ಹಾಲಿ ವಿಶ್ವ ಚಾಂಪಿಯನ್ ತಂಡವಾಗಿದೆ. 1975ರಿಂದ 2011ರ ತನಕದ ಫೈನಲ್ ಪಂದ್ಯಗಳತ್ತ ಒಂದು ಝಲಕ್ ಇಲ್ಲಿದೆ...

1975: ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ

1975: ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ

ಅತಿಥೇಯ ತಂಡ: ಇಂಗ್ಲೆಂಡ್
*ಮೈದಾನ: ಲಾರ್ಡ್ಸ್(ಲಂಡನ್),
* ದಿನಾಂಕ: 1975ರ ಜೂನ್ 21
* ಸ್ಕೋರ್: ವೆಸ್ಟ್ ಇಂಡೀಸ್ 291/8, 60 ಓವರ್
* (ಕ್ಲೈವ್ ಲಾಯ್ಡ್ 102,ರೋಹನ್ ಕನ್ಹಾಯ್ 55, ಗ್ಯಾರಿ ಗಿಲ್ಮೋರ್ 5/48)
* ಆಸ್ಟ್ರೇಲಿಯಾ 274, 58.4 ಓವರ್ಸ್
* (ಅಲಾನ್ ಟರ್ನರ್ 40, ಇಯಾನ್ ಚಾಪೆಲ್ 62, ಕೀರ್ ಬೊಯ್ಸ್ 4/50)
* ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 17 ರನ್ ಗಳ ಗೆಲುವು
* ಪಂದ್ಯ ಶ್ರೇಷ್ಠ : ಕ್ಲೈವ್ ಲಾಯ್ಡ್

1979: ವೆಸ್ಟ್ ಇಂಡೀಸ್ vs ಇಂಗ್ಲೆಂಡ್

1979: ವೆಸ್ಟ್ ಇಂಡೀಸ್ vs ಇಂಗ್ಲೆಂಡ್

* ಅತಿಥೇಯ ತಂಡ: ಇಂಗ್ಲೆಂಡ್
* ಮೈದಾನ: ಲಾರ್ಡ್ಸ್(ಲಂಡನ್),
* ದಿನಾಂಕ: 1979 ರ ಜೂನ್ 23
* ಸ್ಕೋರ್: ವೆಸ್ಟ್ ಇಂಡೀಸ್ 286/9, 60 ಓವರ್
* (ವಿವಿಯನ್ ರಿಚರ್ಡ್ಸ್ 138*, ಕೊಲಿಸ್ ಕಿಂಗ್ 86)
* ಇಂಗ್ಲೆಂಡ್ 194, 51 ಓವರ್ಸ್
* (ಮೈಕ್ ಬ್ರಿಯಾರ್ಲಿ 64, ಜೆಫ್ ಬಾಯ್ಕಾಟ್ 57, ಕಾಲಿನ್ ಕ್ರಾಫ್ಟ್ 3/42, ಜಿಯೋಲ್ ಗಾರ್ನರ್ 5/38)
* ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 92 ರನ್ ಗಳ ಗೆಲುವು
* ಪಂದ್ಯ ಶ್ರೇಷ್ಠ : ವಿವಿಯನ್ ರಿಚರ್ಡ್ಸ್

1983: ಭಾರತ vs ಇಂಗ್ಲೆಂಡ್

1983: ಭಾರತ vs ಇಂಗ್ಲೆಂಡ್

* ಅತಿಥೇಯ ತಂಡ: ಇಂಗ್ಲೆಂಡ್

* ಫೈನಲ್ ನಡೆದ ಮೈದಾನ: ಲಾರ್ಡ್ಸ್(ಲಂಡನ್),

* ದಿನಾಂಕ: 1983 ರ ಜೂನ್ 25

* ಸ್ಕೋರ್: ಭಾರತ 183, 54.4 ಓವರ್ಸ್ (ಆಂಡಿ ರಾಬರ್ಟ್ಸ್ 3/32)ವೆಸ್ಟ್ ಇಂಡೀಸ್ 140, 52 ಓವರ್ಸ್

* ಮದನ್ ಲಾಲ್ 3/31, ಮೊಹಿಂದರ್ ಅಮರನಾಥ್ 3/12)

ಫಲಿತಾಂಶ: ಭಾರತ ತಂಡಕ್ಕೆ 43 ರನ್ ಗಳ ಗೆಲುವು

* ಪಂದ್ಯ ಶ್ರೇಷ್ಠ : ಮೊಹಿಂದರ್ ಅಮರನಾಥ್

1987: ಆಸ್ಟ್ರೇಲಿಯಾ vs ಇಂಗ್ಲೆಂಡ್

1987: ಆಸ್ಟ್ರೇಲಿಯಾ vs ಇಂಗ್ಲೆಂಡ್

ಅತಿಥೇಯ: ಭಾರತ
ಮೈದಾನ: ಕೋಲ್ಕತ್ತಾ (ಈಡೆನ್ ಗಾರ್ಡನ್ಸ್)
ದಿನಾಂಕ: 1987ರ ನವೆಂಬರ್ 8
ಆಸ್ಟ್ರೇಲಿಯಾ 253/5, 50 ಓವರ್ಸ್ (ಡೇವಿಡ್ ಬೂನ್ 75, ಮೈಕ್ ವೆಲೆಟ್ಟಾ 45*)
ಇಂಗ್ಲೆಂಡ್ 246/8, 50 ಓವರ್ಸ್ (ಬಿಲ್ ಅಥ್ಲೆ 58, ಮೈಕ್ ಗ್ಯಾಟಿಂಗ್ 41, ಅಲಾನ್ ಲ್ಯಾಂಬ್ 45)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 7 ರನ್ ಗಳ ಜಯ
* ಪಂದ್ಯಶ್ರೇಷ್ಠ: ಡೇವಿಡ್ ಬೂನ್

1992: ಪಾಕಿಸ್ತಾನ vs ಇಂಗ್ಲೆಂಡ್

1992: ಪಾಕಿಸ್ತಾನ vs ಇಂಗ್ಲೆಂಡ್

ಅತಿಥೇಯ: ಆಸ್ಟ್ರೇಲಿಯಾ

ಚಾಂಪಿಯನ್ : ಪಾಕಿಸ್ತಾನ
ಫೈನಲ್: ಮೆಲ್ಬೋರ್ನ್ (ಎಂಸಿಜಿ)
ದಿನಾಂಕ: 1992ರ ಮಾರ್ಚ್ 25
* ಪಾಕಿಸ್ತಾನ 249/6, 50 ಓವರ್ಸ್ (ಇಮ್ರಾನ್ ಖಾನ್ 72, ಜಾವೇದ್ ಮಿಯಾಂದಾದ್ 58, ಇಂಜಾಮಾಮ್ ಉಲ್ ಹಕ್ 42, ಡೆರೆಕ್ ಪ್ರಿಂಗ್ಲ್ 3/22)
* ಇಂಗ್ಲೆಂಡ್ 227, 49.2 ಓವರ್ಸ್ (ನೀಲ್ ಫೇರ್ ಬ್ರದರ್ 62, ವಾಸೀಂ ಅಕ್ರಂ 3/49,ಮುಷ್ತಾಕ್ ಅಹ್ಮದ್ 3/41)
ಫಲಿತಾಂಶ: ಪಾಕಿಸ್ತಾನಕ್ಕೆ 22 ರನ್ ಗಳ ಜಯ
ಪಂದ್ಯ ಶ್ರೇಷ್ಠ: ವಾಸೀಂ ಅಕ್ರಂ
ಪಂದ್ಯ ಸರಣಿ: ಮಾರ್ಟಿನ್ ಕ್ರೋವ್

1996: ಶ್ರೀಲಂಕಾ vs ಆಸ್ಟ್ರೇಲಿಯಾ

1996: ಶ್ರೀಲಂಕಾ vs ಆಸ್ಟ್ರೇಲಿಯಾ

ಅತಿಥೇಯ: ಭಾರತ, ಪಾಕಿಸ್ತಾನ, ಶ್ರೀಲಂಕಾ
ಚಾಂಪಿಯನ್: ಶ್ರೀಲಂಕಾ
ಫೈನಲ್: ಲಾಹೋರ್(ಗಡ್ಡಾಫಿ ಸ್ಟೇಡಿಯಂ)
ದಿನಾಂಕ: 17 ಮಾರ್ಚ್ 1996
ಆಸ್ಟ್ರೇಲಿಯಾ 241/7 in 50 ಓವರ್ಸ್ (ಮಾರ್ಕ್ ಟೇಲರ್ 74, ರಿಕಿ ಪಾಂಟಿಂಗ್ 45; ಅರವಿಂದ್ ಡಿಸಿಲ್ವಾ 3/42)
ಶ್ರೀಲಂಕಾ245/3 in 46.2 overs (ಗುರುಸಿನ್ಹಾ 65, ಅರವಿಂದ್ ಡಿಸಿಲ್ವಾ 107*, ಅರ್ಜುನ ರಣತುಂಗ 47*)
ಫಲಿತಾಂಶ: ಶ್ರೀಲಂಕಾಕ್ಕೆ 7 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ : ಅರವಿಂದ ಡಿಸಿಲ್ವಾ
ಸರಣಿ ಶ್ರೇಷ್ಠ: ಸನತ್ ಜಯಸೂರ್ಯ

1999: ಪಾಕಿಸ್ತಾನ vs ಆಸ್ಟ್ರೇಲಿಯಾ

1999: ಪಾಕಿಸ್ತಾನ vs ಆಸ್ಟ್ರೇಲಿಯಾ

ಚಾಂಪಿಯನ್ : ಆಸ್ಟ್ರೇಲಿಯಾ
ಫೈನಲ್ : ಲಾರ್ಡ್ಸ್, ಇಂಗ್ಲೆಂಡ್
ದಿನಾಂಕ : 20 ಜೂನ್ 1999
ಪಾಕಿಸ್ತಾನ 132 in 39 ಓವರ್ಸ್(ಶೇನ್ ವಾರ್ನ್ 4/33)
ಆಸ್ಟ್ರೇಲಿಯಾ 133/2 in 20.1 ಓವರ್ಸ್ (ಆಡಂ ಗಿಲ್ ಕ್ರಿಸ್ಟ್ 54)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 8 ವಿಕೆಟ್ ಗೆಲುವು
ಪಂದ್ಯಶ್ರೇಷ್ಠ : ಶೇನ್ ವಾರ್ನ್
ಸರಣಿ ಶ್ರೇಷ್ಠ: ಲ್ಯಾನ್ಸ್ ಕ್ಲುಸೆನರ್

2003: ಆಸ್ಟ್ರೇಲಿಯಾ vs ಭಾರತ

2003: ಆಸ್ಟ್ರೇಲಿಯಾ vs ಭಾರತ

ಅತಿಥೇಯ: ದಕ್ಷಿಣ ಆಫ್ರಿಕಾ, ಕೀನ್ಯಾ, ಜಿಂಬಾಬ್ವೆ'
ಚಾಂಪಿಯನ್: ಆಸ್ಟ್ರೇಲಿಯಾ
ಫೈನಲ್: ಜೋಹಾನ್ಸ್ ಬರ್ಗ್(ವಾಂಡೆರರ್ಸ್ ಸ್ಟೇಡಿಯಂ)
ದಿನಾಂಕ: 23 ಮಾರ್ಚ್ 2003
ಆಸ್ಟ್ರೇಲಿಯಾ 359/2 in 50 overs (ಆಡಂ ಗಿಲ್ ಕ್ರಿಸ್ಟ್ 57, ರಿಕಿ ಪಾಂಟಿಂಗ್ 140*, ಡೇಮಿಯನ್ ಮಾರ್ಟಿನ್ 88*)
ಭಾರತ 234 in 39.2 overs (ವಿರೇಂದರ್ ಸೆಹ್ವಾಗ್82, ರಾಹುಲ್ ದ್ರಾವಿಡ್ 47; ಗ್ಲೆನ್ ಮೆಗ್ರಾಥ್ 3/52)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 125ರನ್ ಗಳ ಗೆಲುವು
ಪಂದ್ಯಶ್ರೇಷ್ಠ : ರಿಕಿ ಪಾಂಟಿಂಗ್
ಸರಣಿ ಶ್ರೇಷ್ಠ: ಸಚಿನ್ ತೆಂಡೂಲ್ಕರ್

2007: ಆಸ್ಟ್ರೇಲಿಯಾ vs ಶ್ರೀಲಂಕಾ

2007: ಆಸ್ಟ್ರೇಲಿಯಾ vs ಶ್ರೀಲಂಕಾ

ಅತಿಥೇಯ: ವೆಸ್ಟ್ ಇಂಡೀಸ್
ಚಾಂಪಿಯನ್ : ಆಸ್ಟ್ರೇಲಿಯಾ
ಫೈನಲ್: ಬ್ರಿಡ್ಜ್ ಟೌನ್(ಕಿಂಗ್ಸ್ ಟನ್ ಒವಲ್)
ದಿನಾಂಕ : 28 ಏಪ್ರಿಲ್ 2007
ಆಸ್ಟ್ರೇಲಿಯಾ 281/4 in 38 overs (ಆಡಂ ಗಿಲ್ ಕ್ರಿಸ್ಟ್ 149)
ಶ್ರೀಲಂಕಾ 215/8 in 36 overs (ಸನತ್ ಜಯಸೂರ್ಯ 63, ಕುಮಾರ್ ಸಂಗಕ್ಕಾರ 54)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 53 ರನ್ ಗೆಲುವು(D/L ಲೆಕ್ಕಾಚಾರದಂತೆ)
ಪಂದ್ಯಶ್ರೇಷ್ಠ : ಆಡಂ ಗಿಲ್ ಕ್ರಿಸ್ಟ್
ಸರಣಿ ಶ್ರೇಷ್ಠ: ಗ್ಲೆನ್ ಮೆಗ್ರಾಥ್

2011 ಭಾರತ vs ಶ್ರೀಲಂಕಾ

2011 ಭಾರತ vs ಶ್ರೀಲಂಕಾ

ಚಾಂಪಿಯನ್ : ಭಾರತ
ಮೈದಾನ: ಮುಂಬೈ, ವಾಂಖೇಡೆ ಸ್ಟೇಡಿಯಂ
ದಿನಾಂಕ: 2011ರ ಏಪ್ರಿಲ್ 2
* ಶ್ರೀಲಂಕಾ 274/6, 50 ಓವರ್ಸ್
9ಸಂಗಕ್ಕಾರ 48, ಜಯವರ್ದನೆ 103*)
* ಭಾರತ 277/4, 48.2 ಓವರ್ಸ್
(ಗೌತಮ್ ಗಂಭೀರ್ 97, ಎಂಎಸ್ ಧೋನಿ 91*)
ಫಲಿತಾಂಶ: ಭಾರತಕ್ಕೆ 6 ವಿಕೆಟ್ ಜಯ
ಪಂದ್ಯ ಶ್ರೇಷ್ಠ: ಎಂಎಸ್ ಧೋನಿ
ಸರಣಿ ಶ್ರೇಷ್ಠ: ಯುವರಾಜ್ ಸಿಂಗ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X