ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವದಾಖಲೆ ಜೊತೆಗೆ ದ್ರಾವಿಡ್ ದಾಖಲೆ ಕೆಡವಿದ ಕೊಹ್ಲಿ

By Mahesh

ಸಿಡ್ನಿ, ಜ.8: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಗುರುವಾರ ಹೊಸ ದಾಖಲೆ ಬರೆದಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶತಕ ಬಾರಿಸುವ ಮೂಲಕ ಕೊಹ್ಲಿ ಹೊಸ ವಿಕ್ರಮ ಸಾಧಿಸಿದ್ದಾರೆ.ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ರಾಹುಲ್ ದ್ರಾವಿಡ್ ಸಾಧಿಸಿದ್ದ ದಾಖಲೆಯನ್ನೂ ಕೊಹ್ಲಿ ಮುರಿದಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾ ವಿದೇಶದಲ್ಲಿ ಅತಿಹೆಚ್ಚು ರನ್ ಸ್ಕೋರ್ ಮಾಡಿದ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಮುರಿದಿದ್ದು ಗೊತ್ತೇ ಇದೆ. ಈಗ ಸತತ ಮೂರು ಇನ್ನಿಂಗ್ಸ್ ನಲ್ಲಿ ಮೂರು ಶತಕ ಬಾರಿಸಿ ಹೊಸ ಸಾಧನೆ ಮಾಡಿದ್ದಾರೆ.

ದೆಹಲಿಯ 26ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಅವರು ಅಡಿಲೇಡ್ ನ ಮೊದಲ ಟೆಸ್ಟ್ ಪಂದ್ಯದಲ್ಲೇ ಎರಡು ಇನ್ನಿಂಗ್ಸ್ ನಲ್ಲೂ ಶತಕ ಬಾರಿಸಿದ್ದರು. ಗುರುವಾರ(ಜ.8)ದಂದು ಶತಕ ಗಳಿಸುವ ಮೂಲಕ ಸರಣಿಯೊಂದರಲ್ಲಿ ನಾಯಕನಾಗಿ ಸತತ ಮೂರು ಶತಕ ದಾಖಲಿಸಿದ ಮೊಟ್ಟಮೊದಲ ಆಟಗಾರ ಎನಿಸಿದರು. [ವಿರಾಟ್ ಕೊಹ್ಲಿ 'ಕಿಂಗ್ ಆಫ್ ಕ್ರಿಕೆಟ್': ಆಸೀಸ್ ಕ್ರಿಕೆಟರ್]

Captain Virat Kohli sets world record in Sydney Test

33ನೇ ಟೆಸ್ಟ್ ಪಂದ್ಯದಲ್ಲಿ 10ನೇ ಶತಕ ದಾಖಲಿಸಿದ ವಿರಾಟ್ ಕೊಹ್ಲಿ ಅವರು ಸರಣಿಯಲ್ಲಿ ನಾಲ್ಕು ಶತಕಗಳನ್ನು ದಾಖಲಿಸುವ ಮೂಲಕ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ದಾಖಲೆ ಸಮಗಟ್ಟಿದರು. ಗವಾಸ್ಕರ್ ಅವರು ವೆಸ್ಟ್ ಇಂಡೀಸ್ ವಿರುದ್ಧ ಎರಡು ಬಾರಿ ಸರಣಿಯೊಂದರಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದಾರೆ. [ಸಚಿನ್ ದಾಖಲೆ ಮುರಿದ ಕೊಹ್ಲಿ]

ಎಂಎಸ್ ಧೋನಿ ಅವರು ಗಾಯಾಳುವಾಗಿದ್ದಾಗ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನೇತೃತ್ವ ವಹಿಸಿದ್ದ ವಿರಾಟ್ ಕೊಹ್ಲಿ 115 ಹಾಗೂ 141 ರನ್ ಚೆಚ್ಚಿದ್ದರು. ಆದರೆ, ಭಾರತ ಪಂದ್ಯವನ್ನು ಸೋತಿತ್ತು.

ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ಧೋನಿ ಮರಳಿದರೂ ಮೆಲ್ಬೋರ್ನ್ ಟೆಸ್ಟ್ ನಂತರ ಟೆಸ್ಟ್ ಬದುಕಿಗೆ ನಿವೃತ್ತಿ ಹಾಡಿದ್ದರು. ಹೀಗಾಗಿ ಸಿಡ್ನಿ ಟೆಸ್ಟ್ ನಲ್ಲಿ ಮತ್ತೊಮ್ಮೆ ಕೊಹ್ಲಿ ನಾಯಕರಾಗಬೇಕಾಯಿತು. [ಗವಾಸ್ಕರ್ ಸಾಲಿಗೆ ಸೇರಿದ ವಿರಾಟ್ ಕೊಹ್ಲಿ]

1877ರಿಂದ ಇಲ್ಲಿ ತನಕ ಸುಮಾರು 2000ಕ್ಕೂ ಅಧಿಕ ಟೆಸ್ಟ್ ಪಂದ್ಯಗಳಲ್ಲಿ ಯಾವ ಟೆಸ್ಟ್ ನಾಯಕರು ಸಾಧಿಸದ ದಾಖಲೆಯನ್ನು ಕೊಹ್ಲಿ ಸಾಧಿಸಿದ್ದಾರೆ.

ದ್ರಾವಿಡ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ರಾಹುಲ್ ದ್ರಾವಿಡ್ ನಂತರ 500 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿರುವ ಕೊಹ್ಲಿ ಈಗ ದ್ರಾವಿಡ್ ದಾಖಲೆಯನ್ನು ಮೀರಿ ಮುಂದುವರೆದಿದ್ದಾರೆ.

ಆಸ್ಟ್ರೇಲಿಯಾ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಕೆ
* ವಿರಾಟ್ ಕೊಹ್ಲಿ - 639* ರನ್ 7 ಇನ್ನಿಂಗ್ಸ್ (ಸಿಡ್ನಿ ಟೆಸ್ಟ್ ಮೂರನೇ ದಿನದ ಅಂತ್ಯಕ್ಕೆ)
* ರಾಹುಲ್ ದ್ರಾವಿಡ್ (2003-2004)-619 ರನ್, 8 ಇನ್ನಿಂಗ್ಸ್
* ವಿವಿಎಸ್ ಲಕ್ಷ್ಮಣ್ (2003-2004)-494 ರನ್, 7 ಇನ್ನಿಂಗ್ಸ್
* ಸಚಿನ್ ತೆಂಡೂಲ್ಕರ್ (2007-08)-493 ರನ್, 8 ಇನ್ನಿಂಗ್ಸ್
* ಗುಂಡಪ್ಪ ವಿಶ್ವನಾಥ್ (1977)-473 ರನ್, 9 ಇನ್ನಿಂಗ್ಸ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X