ಬೆಂಗಳೂರು ಎಫ್ ಸಿ ತಂಡದಿಂದ ಬ್ರಾವೋ ಚಾಂಪಿಯನ್ ಡ್ಯಾನ್ಸ್!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 18: ಸೂಪರ್ ಸಂಡೇಯಲ್ಲಿ ಬೆಂಗಳೂರಿನ ಕ್ರೀಡಾಭಿಮಾನಿಗಳಿಗೆ ಸಿಹಿ ಕಹಿ ಸುದ್ದಿ ಸಿಕ್ಕಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು ಕಂಡಿತು. ಇನ್ನೊಂದೆಡೆ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್ ಸಿ ತಂದ ಐ ಲೀಗ್ ಗೆದ್ದು ವಿಜಯೋತ್ಸವ ಆಚರಿಸಿತು.

ಐ-ಲೀಗ್ ಟೂರ್ನಿಯ ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತು ಸಲ್ಗಾಂವ್ಕರ್ ತಂಡಗಳ ನಡುವಿನ ಪಂದ್ಯವನ್ನು ತವರು ಮೈದಾನದಲ್ಲೇ ಕಂಡ ಪ್ರೇಕ್ಷಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

Bengaluru FC crowned I-League champions in front of home fans

ಗೆಲುವಿನ ಸಂಭ್ರಮವನ್ನು ವಿಶಿಷ್ಟ ರೀತಿಯಲ್ಲಿ ಬೆಂಗಳೂರು ತಂಡ ಆಚರಿಸಿತು. ಬೆಂಗಳೂರು ತಂಡ 2-0 ಅಂತರದಿಂದ ಸಲ್ಗಾಂವರ್ ತಂಡವನ್ನು ಸೋಲಿಸಿತು.

ಬೆಂಗಳೂರು ಪರ ಯುಗೆನ್ಸನ್ ಲಿಂಗ್ಡೋ(8ನೇ ನಿಮಿಷ), ಸೆಮಿನ್ಲೆನ್ ಡೌನ್ಗೆಲ್(87ನೇ ನಿಮಿಷ) ಗೋಲು ಬಾರಿಸಿದರು. 2013-14ರಲ್ಲಿ ಕಪ್ ಗೆದ್ದಿದ್ದ ಬೆಂಗಳೂರು ತಂಡ 2014-15ರಲ್ಲಿ ಮೊಹನ್ ಬಾಗನ್ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.

-
-
-
ಬೆಂಗಳೂರು ಎಫ್ ಸಿ ತಂದ ಐ ಲೀಗ್ ಗೆದ್ದು ವಿಜಯೋತ್ಸವ

ಬೆಂಗಳೂರು ಎಫ್ ಸಿ ತಂದ ಐ ಲೀಗ್ ಗೆದ್ದು ವಿಜಯೋತ್ಸವ

15 ಪಂದ್ಯಗಳಿಂದ 32 ಅಂಕ ಗಳಿಸಿದ ಬೆಂಗಳೂರು ಎಫ್ ಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರೆ, ಮೋಹನ್ ಬಗಾನ್ ತಂಡ 27 ಅಂಕ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಮೂರನೇ ಬಾರಿಗೆ ಬಿಎಫ್​ಸಿ ಐ-ಲೀಗ್ ಚಾಂಪಿಯನ್ ಆದ ಬೆಂಗಳೂರು ಎಫ್ ಸಿ ಕ್ರಿಕೆಟರ್ ಡ್ವಾಯ್ನೆ ಬ್ರಾವೋ ಅವರ ಚಾಂಪಿಯನ್ ಡ್ಯಾನ್ಸ್ ಮಾಡಿ ನರ್ತಿಸಿದ್ದು ವಿಶೇಷವಾಗಿತ್ತು. ಬೆಂಗಳೂರು ತಂಡಕ್ಕೆ ಆಶ್ಲೆ ವೆಸ್ಟ್ ವುಡ್ ಕೋಚ್ ಆಗಿದ್ದರೆ, ಸುನಿಲ್ ಛೆಟ್ರಿ ನಾಯಕರಾಗಿದ್ದಾರೆ. (ಪಿಟಿಐ)

English summary
Bengaluru FC were today (April 17) crowned as I-League football champions for the second time in three years as they blanked Salgaocar 2-0 in their penultimate league match here
Please Wait while comments are loading...