ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಯಶ್- ಫಾರ್ಮುಲಾ ಜ್ಯೂ. ಸೀರಿಸ್‍ ನಲ್ಲಿ ನಂ.2

ಕೊಯಮತ್ತೂರಿನಲ್ಲಿ ನಡೆದ ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್‍ನಲ್ಲಿ ಯಶ್ ಆರಾಧ್ಯ ಉಪ ಚಾಂಪಿಯನ್ ಕಿರೀಟ ಪಡೆದರು 2ನೇ ರೌಂಡ್ ಗೆಲುವಿನೊಂದಿಗೆ (ಅಂತಿಮ ಸುತ್ತು) 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ತಮ್ಮದಾಗಿಸಿಕೊಂಡಿದ್ದಾರೆ,

By ಕ್ರೀಡಾ ಡೆಸ್ಕ್

ಬೆಂಗಳೂರು, ಮೇ 31: ಕೊಯಮತ್ತೂರಿನಲ್ಲಿ ನಡೆದ ಎಂಎಂಎಸ್ ಫಾರ್ಮುಲಾ ಜ್ಯೂನಿಯರ್ ಸೀರಿಸ್‍ ಕಾರು ರೇಸಿನಲ್ಲಿ ಯಶ್ ಆರಾಧ್ಯ ಉಪ ಚಾಂಪಿಯನ್ ಕಿರೀಟ ಪಡೆದರು 2ನೇ ರೌಂಡ್ ಗೆಲುವಿನೊಂದಿಗೆ (ಅಂತಿಮ ಸುತ್ತು) 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರಿನ ಬಾಲಕ ಬಿಷಪ್ ಕಾಟನ್ ಬಾಯ್ಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಯಶ್ ಆರಾಧ್ಯ, ಮೇ 27 ಮತ್ತು 28 ರಂದು ಕಾರಿ ಮೋಟಾರ್ ಸ್ವೀಡ್ವೇ ಕೊಯಮತ್ತೂರಿನಲ್ಲಿ ನಡೆದ ಎಂಎಂಎಸ್ ಫಾರ್ಮುಲಾ ಜೂನಿಯರ್ ಸೀರಿಸ್‍ನ 2ನೇ ಸುತ್ತು ಮುಕ್ತಾಯ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿ 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಕಬಳಿಸಿದ್ದಾರೆ (5 ರೌಂಡ್ ಒಳಗೊಂಡ ಸೀರಿಸ್ ಆಗಿದೆ).

Bengaluru boy Yash Aradhya crowned Vice Champion at MMS Formula Junior Series held at Coimbatore

ಯೂರೋಪ್‍ನ ಸಿಐಕೆ ಎಫ್‍ಐಎ ಅಕಾಡೆಮಿ ನಡೆಸಿದ ಬಹು ರಾಷ್ಟ್ರೀಯ ಗೋ ಕಾರ್ಟಿಂಗ್‍ನಲ್ಲಿ ಭಾರತದಿಂದ ಪ್ರತಿನಿಧಿಸಿ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಕಳೆದ ತಿಂಗಳು ಗೊ ಕಾರ್ಟಿಂಗ್‍ನಿಂದ ಫಾರ್ಮುಲಾ 4 ಪದಾರ್ಪಣೆ ಮಾಡಿದ ಮೊದಲ ಬಾರಿಯೇ ಫಾಮುಲಾ ಎಲ್‍ಜಿಬಿ ಸ್ವಿಫ್ಟ್‍ನಲ್ಲಿ ಎಲ್ಲರ ಗಮನ ಸೆಳೆದಿದ್ದರು ಇಲ್ಲಿ ಸ್ಮರಿಸಬಹುದು.

ಈ ಗೆಲವಿನೊಂದಿಗೆ ಯಶ್ ಒಟ್ಟು 177 ಪಾಯಿಂಟ್ಸ್ ಗಳಿಸಿದ್ದಾರೆ, ರೌಂಡ್-1 ರಿಂದ 71 ಪಾಯಿಂಟ್ಸ್ ಮತ್ತು ರೌಂಡ್-2 ರಿಂದ 106 ಪಾಯಿಂಟ್ಸ್ ಪಡೆಯುವುದರ ಮೂಲಕ ಉಪ ಚಾಂಪಿಯನ್ ಕಿರೀಟ ಪಡೆದು ಚಿಕ್ಕ ವಯಸ್ಸಿನಲ್ಲಿಯೇ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೇಲಂನ 24 ವರ್ಷದ ರೂಪೇಶ್ ಶಿವಕುಮಾರ್ 199 ಪಾಯಿಂಟ್ಸ್‍ಗಳೊಂದಿಗೆ ಚಾಂಪಿಯನ್ ಮತ್ತು 145 ಪಾಯಿಂಟ್ಸ್ ಗಳಿಸಿದ ಶ್ರೀಲಂಕಾದ ಕೆವಿನ್ ಪೆರೇರಾ 2ನೇ ರನ್ನರ್ ಅಪ್ ಸ್ಥಾನ ಪಡೆದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X