ಸಿಂಧು ಮುಡಿಗೆ ಚೀನಾ ಓಪನ್ ಸೂಪರ್ ಸೀರೀಸ್ ಕಿರೀಟ!

Posted By:
Subscribe to Oneindia Kannada

ಫುಜಾವೊ, ನವೆಂಬರ್ 20: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಪಿವಿ ಸಿಂಧು ಅವರು ಚೀನಾ ಓಪನ್ ಸೂಪರ್ ಸೀರೀಸ್ ಗೆದ್ದು ಸಂಭ್ರಮಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಚೀನಾದ ಸನ್ ಯು ಅವರನ್ನು 2-1 ಸೆಟ್ ಗಳಲ್ಲಿ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇದು ಸಿಂಧು ಅವರ ಚೊಚ್ಚಲ ಸೂಪರ್ ಸೀರಿಸ್ ಪ್ರಶಸ್ತಿಯಾಗಿದೆ.[ಬೆಳ್ಳಿ ಪದಕ ಗೆದ್ದ ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

ಸನ್ ಯು ಅವರನ್ನು 21-11, 17-21 ಹಾಗೂ 21-11 ಸೆಟ್ ಗಳ ಅಂತರದಲ್ಲಿ ಪಿವಿ ಸಿಂಧು ಸೋಲಿಸಿ 52,500 ಡಾಲರ್ ಮೊತ್ತದ ನಗದು ಬಹುಮಾನ ಕೂಡಾ ಗೆದ್ದರು. ಸನ್ ಯು ಅವರಿಗೆ 26 600 ಡಾಲರ್ ಲಭಿಸಿತು.[ಬಿರಿಯಾನಿ ಪ್ರಿಯೆ ಸಿಂಧು ಬಾಯಿಗೆ ಕರ್ನಾಟಕದ ಸಿಹಿ ತಿಂಡಿ]

Badminton: P.V Sindhu Clinches China Open Superseries

ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಂಗ್ ಜೀ ಹ್ಯೂನ್ ಅವರನ್ನು 11-21, 23-21, 21-19 ಅಂತರದಲ್ಲಿ ಪರಾಭವಗೊಳಿಸಿ ಸಿಂಧು ಅವರು ಫೈನಲ್ ತಲುಪಿದ್ದರು. ಸನ್ ಯು ಅವರು ಚೈನೀಸ್ ತೈಪೆಯ ತೈ ತ್ಸು ಯಿಂಗ್ ರನ್ನು 21-8, 23-21ರಲ್ಲಿ ಸೋಲಿಸಿ ಅಂತಿಮ ಹಂತಕ್ಕೇರಿದ್ದರು.

English summary
Olympic silver medallist P.V Sindhu edged past Sung ji Hyun of China to clinch China Open Superseries Premier badminton tournament
Please Wait while comments are loading...