ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯಾ ಬ್ಯಾಡ್ಮಿಂಟನ್: ಸಿಂಧು ಶುಭಾರಂಭ, ಸೈನಾ ಔಟ್

ವುಹಾನ್ (ಚೀನಾ), ಏಪ್ರಿಲ್ 26 : ಪ್ರಸಕ್ತ ಸಾಲಿನ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮಹಿಳೆಯ ಸಿಂಗಲ್ಸ್ ನಲ್ಲಿ ಪಿವಿ ಸಿಂಧು ಶುಭಾರಂಭ ಮಾಡಿದ್ದರೆ, ಸೈನಾ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಅಜಯ್ ಜಯರಾಮ್ 2ನೇ ಸುತ್ತು ಪ್ರವೇಶಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡದ ಮುಂದಾಳತ್ವ ವಹಿಸಿರುವ ರಿಯೋ ಒಲಿಂಪಿಕ್ ನ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ನಿರೀಕ್ಷೆಯಂತೆಯೇ ಮೊದಲ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

Badminton Asia Championships: PV Sindhu wins, Saina Nehwal ousted

21 ವರ್ಷದ ಸಿಂಧು 21-8, 21- 18 ನೇರ ಸೆಟ್‌ ಗಳಿಂದ ಇಂಡೋನೇಷ್ಯಾದ ದಿನಾರ್ ಡ್ಯಾಹ್ ಆಯುಸ್ಟೈನ್ ಅವರನ್ನು ಮಣಿಸಿ 2ನೇ ಸುತ್ತಿಗೆ ಲಗ್ಗೆಯಿಟ್ಟರು.

ಇನ್ನು ಗಾಯದ ಸಮಸ್ಯೆಯಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ ಪ್ರಬಲ ಪೈಪೋಟಿ ನೀಡಿದರೂ ಜಪಾನ್‌ ನ ಸಯಾಕಾ ಸಾಟೋ ವಿರುದ್ಧ 19-21, 21-16, 21-18 ಅಂತರದಿಂದ ಪರಾಭವಗೊಂಡರು.

ಇನ್ನು ಗಾಯದ ಸಮಸ್ಯೆಯಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಸೈನಾ ನೆಹ್ವಾಲ್ ಮತ್ತು ಜಪಾನ್‌ ನ ಸಯಾಕಾ ಸಾಟೋ ನಡುವೆ ನಡೆದ ಸುಮಾರು 1 ಗಂಟೆಗೂ ಹೆಚ್ಚು ಆಟದಲ್ಲಿ ಸೈನಾ 21- 19 ಅಂಕಗಳೊಂದಿಗೆ ಮೊದಲ ಸುತ್ತಿನಲ್ಲಿ ಗೆಲುವಿನ ನಗೆ ಬೀರಿದರು.

ಬಳಿಕ 16-21 ಹಾಗೂ 18- 21 ಅಂತರದಿಂದ ಸೆಟ್‌ ಗಳನ್ನು ಪಂದ್ಯವನ್ನು ಜಪಾನ್ ಆಟಗಾರ್ತಿಗೆ ಬಿಟ್ಟುಕೊಡುವ ಮೂಲಕ ಸೈನಾ ಸೋಲೊಪ್ಪಿಕೊಂಡರು.

ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಅಜಯ್ ಜಯರಾಮ್ 21-18, 18-21, 21-19ರಲ್ಲಿ ವಿಶ್ವದ 5ನೇ ಶ್ರೇಯಾಂಕಿತ ಚೀನಾದ ತಿಯಾನ್ ಹೌವಿಯನ್ನು ಮಣಿಸಿ, 2ನೇ ಸುತ್ತಿಗೆ ಲಗ್ಗೆಯಿಟ್ಟರು.

ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ 15-21, 21-14, 16-21 ಸೆಟ್‌ ಗಳಿಂದ ಚೀನಾದ ಅಗ್ರ ಶ್ರೇಯಾಂಕಿತ ಜೋಡಿ ಸಿವೆ ಝೆಂಗ್ ಮತ್ತು ಕ್ವಿಂಗ್ಚೆನ್ ಚೆನ್ ವಿರುದ್ಧ ಸೋಲನುಭವಿಸಿದರು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X