ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

'ಪಬ್ಲಿಕ್' ಆಗಿ ಮೂತ್ರ ಮಾಡಿದ 'ಕ್ಯಾಪ್ಟನ್' ಅಮಾನತು

By Mahesh

ಗೋಲ್ಡ್ ಕೋಸ್ಟ್(ಆಸ್ಟ್ರೇಲಿಯಾ), ಡಿ.12: 'ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಅಪರಾಧ' ಎಂಬ ಕಟ್ಟುನಿಟ್ಟಿನ ಕಾನೂನಿಗೆ ಆಸ್ಟ್ರೇಲಿಯಾ ತಂಡದ ರಗ್ಬಿ ಸ್ಟಾರ್ ತಲೆಬಾಗಬೇಕಾಗಿದೆ. ಪಬ್ಲಿಕ್ ಆಗಿ ಮೂತ್ರ ಮಾಡಿದ ಅಪರಾಧಿ ಎನಿಸಿಕೊಂಡಿದ್ದಾರೆ.

ಆಸ್ಟೇಲಿಯಾ ರಗ್ಬಿ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ ನಾಯಕ ಗ್ರೇಗ್ ಬರ್ಡ್ ಹಾಗೂ ಸ್ಥಳೀಯ ಕ್ಲಬ್ ಗೋಲ್ಡ್ ಕೋಸ್ಟ್ ಟೈಟನ್ಸ್ ಸಹ ನಾಯಕನಿಗೆ 15,000 ಆಸ್ಟ್ರೇಲಿಯನ್ ಡಾಲರ್ಸ್ ದಂಡ ಹಾಗೂ ಕಾನೂನು ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಈ ಘಟನೆ ಬಳಿಕ ಆತನನ್ನು ತಂಡದಿಂದ ಅಮಾನತುಗೊಳಿಸಲಾಗಿದೆ ಎಂದು ಕ್ಲಬ್ ಟೈಟನ್ ವೆಬ್ ಸೈಟ್ ಹೇಳಿದೆ.

Australian rugby star loses captaincy for urinating in public

ಹೋಟೆಲ್ ಕಾರ್ ಪಾರ್ಕಿಂಗ್ ನಲ್ಲಿದ್ದ ಪೊಲೀಸ್ ಕಾರಿನ ಮೇಲೆ ಬರ್ಡ್ ಮೂತ್ರ ಮಾಡಿದ್ದರು ಎಂಬ ಆರೋಪವಿದೆ. ಅದರೆ, ಆರೋಪವನ್ನು ತಳ್ಳಿ ಹಾಕಿರುವ ಬರ್ಡ್, ನಾನು ಮಾಡಿದ್ದು ಮೂರ್ಖ ಕೃತ್ಯ ನಿಜ ಆದರೆ, ನಾನು ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ. ನಾನು ನನ್ನ ಕ್ಲಬ್ ಮೆಂಬರ್ಸ್ ಹಾಗೂ ನನ್ನ ಪತ್ನಿ ಬೆಕಿ ಕ್ಷಮೆಯಾಚಿಸುತ್ತೇನೆ. ನನ್ನಿಂದ ಎಲ್ಲರಿಗೂ ಮುಜುಗರವಾಗಿದೆ. ಕಾನೂನಿನ ಪ್ರಕಾರ ನೀಡಿರುವ ದಂಡ ಪಾವತಿಸುತ್ತೇನೆ ಈ ಘಟನೆ ನನ್ನ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಹಾಳುಗೆಡವಿದೆ ಎಂದು ಬರ್ಡ್ ಹೇಳಿಕೊಂಡಿದ್ದಾನೆ.

ಬರ್ಡ್ಸ್ ಮಾಡಿರುವ ಕೃತ್ಯವನ್ನು ಉಲ್ಲೇಖಿಸಿರುವ ಟೈಟನ್ಸ್ ಸಿಇಒ ಗ್ರಾಹಂ ಅನೆಸ್ಲೆ ಮಾತನಾಡಿ, ಇದು ಮಿಕ್ಕೆಲ್ಲಾ ಆಟಗಾರರಿಗೂ ಎಚ್ಚರಿಕೆ ಗಂಟೆಯಾಗಬೇಕಿದೆ. ವೈಯಕ್ತಿಕ ಕೃತ್ಯದಿಂದ ಕ್ಲಬ್ ನ ಮರ್ಯಾದೆ ಕಳೆಯುವುದು ಸರಿಯಲ್ಲ, ರಾಷ್ಟ್ರೀಯ ತಂಡಕ್ಕೂ ಇದು ಅಪಮಾನಕರ ಸಂಗತಿ, ಬರ್ಡ್ ನೀಡಿರುವ ಬಹಿರಂಗ ಕ್ಷಮೆಯಾಚನೆ ಸ್ವೀಕರಿಸಲಾಗಿದೆ. ಅಮಾನತು ವಾಪಸ್ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X