ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ತ್ರಿಕೋನ ಸರಣಿ: ಮ್ಯಾಕ್ಸ್ ವೆಲ್ ಆರ್ಭಟ, ಆಸೀಸ್ ಗೆ ಕಪ್

By Mahesh

ಪರ್ತ್, ಫೆ.1: ತ್ರಿಕೋನ ಸರಣಿ ಟೀಂ ಇಂಡಿಯಾವನ್ನು ಮನೆಗೆ ಕಳಿಸಿದ್ದ ಇಂಗ್ಲೆಂಡ್ ತಂಡ ಭಾನುವಾರ ನಡೆದ ಕಾರ್ಲಟನ್ ಮಿಡ್ ಸೀರಿಸ್ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಸುಣ್ಣವಾಗಿದೆ. ಗ್ಲೆನ್ ಮ್ಯಾಕ್ಸ್ ವೆಲ್ ಆಲ್ ರೌಂಡರ್ ಆಟ ಪ್ರದರ್ಶಿಸಿ ಇಂಗ್ಲೆಂಡ್ ಕನಸು ನುಚ್ಚು ನೂರು ಮಾಡಿದರು.

ವಾಕಾ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕಾಂಗರೂಗಳು 112 ರನ್ನುಗಳಿಂದ ಭರ್ಜರಿ ಜಯಭೇರಿ ದಾಖಲಿಸಿ ಕಪ್ ಎತ್ತಿ ಕುಣಿದಾಡಿದರು.

ಫೈನಲ್ ಪಂದ್ಯ ಗೆಲ್ಲಲು ಬೇಕಿದ್ದ 279 ರನ್ ಗಳಿಸುವ ಗುರಿ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 66 ರನ್ನಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಮಿಂಚಿ 4 ವಿಕೆಟ್ ಕಿತ್ತರು.

Australia beat England by 112 runs to clinch tri-series title

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದರೂ 50 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 278 ರನ್ ಪೇರಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಮಿಚೆಲ್ ಮಾರ್ಷ್ , ಜೇಮ್ಸ್ ಫಾಲ್ಕ್ ನರ್ ಭರ್ಜರಿ ಅರ್ಧಶತಕ ಗಳಿಸಿ ತಂಡಕ್ಕೆ ಅಸರೆಯಾದರು.

ಸಂಕ್ಷಿಪ್ತ ಸ್ಕೋರ್:
ಆಸ್ಟ್ರೇಲಿಯಾ 50 ಓವರ್ 278/8
(ಗ್ಲೆನ್ ಮ್ಯಾಕ್ಸ್ ವೆಲ್ 95, ಮಿಷೆಲ್ ಮಾರ್ಷಲ್ 60, ಜೇಮ್ಸ್ ಫಾಲ್ಕನರ್ ಅಜೇಯ 50, ಸ್ಟೀವನ್ ಸ್ಮಿತ್ 40 ರನ್,- ಸ್ಟುವರ್ಟ್ ಬ್ರಾಡ್ 55/3, ಜೇಮ್ಸ್ ಆಂಡರ್ಸನ್ 38/2)

ಇಂಗ್ಲೆಂಡ್ 39.1 ಓವರ್ 166 ರನ್ ಆಲೌಟ್
(ರವಿ ಬೊಪಾರಾ 33, ಮೊಯೀನ್ ಅಲಿ 26, ಜೋ ರೂಟ್ 25, ಸ್ಟುವರ್ಟ್ ಬ್ರಾಡ್ 24 ರನ್,- ಗ್ಲೆನ್ ಮ್ಯಾಕ್ಸ್ ವೆಲ್ 46/4, ಮಿಷೆಲ್ ಜಾನ್ಸನ್ 27/3, ಜೋಸ್ ಹೇಜಲ್ ವುಡ್ 13/2)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X