ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ದಾಖಲೆ ಸಮಕ್ಕೆ ನಿಂತ ದೀಪಿಕಾಗೆ ಸಚಿನ್ ರಿಂದ ಬಹುಪರಾಕ್!

By Mahesh

ಶಾಂಘೈ, ಏಪ್ರಿಲ್ 28: ಭಾರತದ ಹೆಮ್ಮೆಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಬುಧವಾರ ಇಲ್ಲಿ ನಡೆದ ಮಹಿಳೆಯ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.ದೀಪಿಕಾ ಅವರ ಸಾಧನೆಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಬಹುಪರಾಕ್ ಹೇಳಿದ್ದಾರೆ.

21ರ ಹರೆಯದ ದೀಪಿಕಾ ಅವರು ಶಾಂಘೈನಲ್ಲಿ ಮಹಿಳಾ ವಿಶ್ವಕಪ್​ನ ಅರ್ಹತಾ ಸುತ್ತಿನಲ್ಲಿ ಸದ್ಯ ಇರುವ ದಾಖಲೆ 686/720 ಅಂಕಗಳಿಗೆ ಸಮವಾದ ಅಂಕಗಳಿಸಿದ್ದಾರೆ. [ಒಲಿಂಪಿಕ್ಸ್ 2012 : ಭಾರತ ಕ್ರೀಡಾಕಲಿಗಳ ಸಂಪೂರ್ಣ ಪಟ್ಟಿ]

Deepika Kumari


ಕಳೆದ ವರ್ಷ ಕೊಪೆನ್​ಹೇಗನ್​ನಲ್ಲಿ ನಡೆದ ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿ ರಿಯೋ ಒಲಿಂಪಿಕ್ಸ್​ಗೂ ದೀಪಿಕಾ ಅರ್ಹತೆ ಪಡೆದುಕೊಂಡಿದ್ದಾರೆ. ವಿಶ್ವದ ಮಾಜಿ ನಂ.1 ಆಟಗಾರ್ತಿ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 686 ಅಂಕ ಗಳಿಸಿ ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಕೊರಿಯಾದ ಕಿ ಬೊ ಬೊಯಿ ಸಾಧನೆಯನ್ನು ಸಮಗಟ್ಟಿದರು. [ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ ಜಿಮ್ನಾಸ್ಟ್ ದೀಪಾ]

ಪದ್ಮಶ್ರೀ ಪುರಸ್ಕೃತ ಆಟಗಾರ್ತಿ ದೀಪಿಕಾ ಅವರು ಈ ಹಿಂದೆ 2011, 12, 13ನೇ ವಿಶ್ವಕಪ್​ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಬೆಳ್ಳಿಪದಕ ಗಳಿಸಿದ್ದರು. ನವೀನ್ ಜಿಂದಾಲ್ :



ಮಾಜಿ ಕ್ರಿಕೆಟರ್ ಮಹಮ್ಮದ್ ಕೈಫ್:

ಸಚಿನ್ ತೆಂಡೂಲ್ಕರ್ ರಿಂದ ಹೊಗಳಿಕೆ:


ಎಂಟರ ಘಟ್ಟದಲ್ಲಿ ದೀಪಿಕಾ ಅವರು 12ನೇ ಶ್ರೇಯಾಂಕದ ಅತನು ದಾಸ್ (671 ಅಂಕಗಳು) ಜತೆಗೂಡಿ ಟರ್ಕಿಯ ಮಿಶ್ರ ಡಬಲ್ಸ್ ಜೋಡಿಯನ್ನು 5-3 ಅಂತರದಿಂದ ಸೋಲಿಸಿದರು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X