ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೋಲಿನಲ್ಲೂ ದಾಖಲೆ ಬರೆದ ಟೀಂ ಇಂಡಿಯಾ

By Mahesh

ಪರ್ತ್, ಜ.30: ಪರ್ತ್ ನಲ್ಲಿ ಅರ್ಥ್ ವಿಲ್ಲದ ಆಟವಾಡಿದ ಧೋನಿ ಹುಡುಗರು ಸೋತ ಮುಖ ಹೊತ್ತು ಪೆವಿಲಿಯನ್ ಸೇರಿದ್ದಾರೆ.ಇಂಗ್ಲೆಂಡ್ ವಿರುದ್ಧ ಮೂರು ವಿಕೆಟ್ ಗಳ ಅಂತರದ ಸೋಲು ಕಂಡು ತ್ರಿಕೋನ ಏಕದಿನ ಸರಣಿಯಿಂದ ಟೀಂ ಇಂಡಿಯಾ ಹೊರಬಿದ್ದಿದೆ. ಆದರೆ, ಸೋಲಿನಲ್ಲೂ ಭಾರತ ದಾಖಲೆ ಬರೆದಿದೆ.

ಆಸ್ಟ್ರೇಲಿಯಾ ವಿರುದ್ಧ ಫೈನಲ್ ಆಡಲು ಇಂಗ್ಲೆಂಡ್ ವಿರುದ್ಧ ಪಂದ್ಯ ಗೆಲ್ಲಲೇಬೇಕಿತ್ತು. ಅದರೆ, ಟೀಂ ಇಂಡಿಯಾ ಅಲ್ಪಸ್ವಲ್ಪ ಹೋರಾಟ ತೋರಿದರೂ ಸೋಲಿನ ಕಹಿ ಉಂಡಿದೆ. ಈ ಮೂಲಕ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಂದೇ ಒಂದು ಗೆಲುವಿಲ್ಲದೆ ಅತ್ಯಂತ ಕಳಪೆ ರೀತಿಯಲ್ಲಿ ವಿದೇಶಿ ಪ್ರವಾಸವನ್ನು ಟೀಂ ಇಂಡಿಯಾ ಮುಗಿಸಿದೆ.

Another low: India end Australia tour winless, first time in 47 years

ಸಂಕ್ಷಿಪ್ತ ಸ್ಕೋರ್
ಮೈದಾನ: ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್, ಪರ್ಥ್, ಆಸ್ಟ್ರೇಲಿಯಾ
ಇಂಗ್ಲೆಂಡ್: 201/7, 46.5 ಓವರ್ಸ್
ಟೇಲರ್ 82, ಬಟ್ಲರ್ 67, ಸ್ಟುವರ್ಟ್ ಬಿನ್ನಿ 8 ಓವರ್ ಗಳಲ್ಲಿ 33ಕ್ಕೆ 3, ಮೋಹಿತ್ ಶರ್ಮ 36ಕ್ಕೆ 2

ಭಾರತ: 200 (48.1 ಓವರ್ಸ್)
ಅಜಿಂಕ್ಯ ರಹಾನೆ 73. ಧವನ್ 38, ಶಮಿ 25, ಫಿನ್ 36ಕ್ಕೆ 3.

ಕಳಪೆ ಪ್ರದರ್ಶನ: 1967-68 ರಿಂದ ಇಲ್ಲಿ ತನಕ ಇದೇ ಮೊದಲ ಬಾರಿಗೆ ಅಭ್ಯಾಸ ಪಂದ್ಯ, ಟೆಸ್ಟ್ ಹಾಗೂ ಏಕದಿನ ಸರಣಿ ಮೂರರಲ್ಲೂ ಗೆಲುವಿನ ರುಚಿ ಕಾಣದೆ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿ ದಾಖಲೆ ಬರೆದಿದೆ.

1967-68ರಲ್ಲಿ ಆಸೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಮಾಡಿಸಿಕೊಂಡಿದ್ದ ಭಾರತ ಈಗ ಮತ್ತೊಮ್ಮೆ ಒಂದು ಪಂದ್ಯವನ್ನು ಗೆಲ್ಲದೇ ಟೂರ್ ಮುಗಿಸಿದೆ. ಟೆಸ್ಟ್ ಸರಣಿಯಲ್ಲಿ ಡ್ರಾ ಸಾಧಿಸಿದ್ದೆ ದೊಡ್ಡ ವಿಷಯವಾಗಿತ್ತು.

ವಿವಾದಗಳ ಸರಣಿ: ಗಾಯದ ಸಮಸ್ಯೆಯಿಂದ ಟೆಸ್ಟ್ ಸರಣಿಗೆ ಮೊದಲ ಪಂದ್ಯಕ್ಕೆ ಆಗಮಿಸಿದ ಧೋನಿ ಅವರು ಟೆಸ್ಟ್ ಸರಣಿ ಮುಗಿಯುವುದೊರಳಗೆ ನಿವೃತ್ತಿ ಘೋಷಿಸಿದರು. ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಸೋಲು ಕಂಡಿತು.ತ್ರಿಕೋನ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಪಂದ್ಯದಲ್ಲಿ ಸೋಲು, ಆಸ್ಟ್ರೇಲಿಯಾ ವಿರುದ್ಧ ಒಂದು ಸೋಲು, ಒಂದು ಪಂದ್ಯ ರದ್ದಾಯಿತು.

ಅಸೀಸ್ ಸರಣಿ 2014-15
ನವೆಂಬರ್ 2014
2 ಪ್ರವಾಸ ಪಂದ್ಯ- ಎರಡೂ ಡ್ರಾ (vs ಕ್ರಿಕೆಟ್ ಆಸ್ಟ್ರೇಲಿಯಾ ಅಹ್ವಾನಿತ XI ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ XI)

ಡಿಸೆಂಬರ್ 2014 ಹಾಗೂ ಜನವರಿ 2015
4 ಟೆಸ್ಟ್- ಸೋಲು 0-2 (2 ಡ್ರಾ)

ಜನವರಿ- ತ್ರಿಕೋನ ಸರಣಿ
4 ಪಂದ್ಯಗಳು (ಸೋಲು 3, 1 ಫಲಿತಾಂಶ ಇಲ್ಲ)

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X