ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಂಬ್ಳೆಯಿಂದ ಹುಟ್ಟುಹಬ್ಬದ ದಿನ ಹೊಸ ಸ್ಪೆಲ್ ಶುರು

By Mahesh

ಬೆಂಗಳೂರು, ಅ.17: ಕ್ರಿಕೆಟ್ ಲೋಕ ಕಂಡ ಅದ್ಭುತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರಿಗೆ ಶುಕ್ರವಾರ(ಅ.17) ಜನ್ಮದಿನದ ಸಂಭ್ರಮ. ಇದೇ ಶುಭ ಸಂದರ್ಭದಲ್ಲಿ ಹೊಸ ಸ್ಪೆಲ್ ಶುರು ಮಾಡಿದ್ದಾರೆ. ಅನಿಲ್ ಕುಂಬ್ಳೆ ಅವರು ತಮ್ಮ 44ನೇ ಹುಟ್ಟುಹಬ್ಬದ ದಿನದಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಲೋಕಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ಜಂಬೋ ಎಂದು ಕರೆಸಿಕೊಳ್ಳುವ ಅನಿಲ್ ಕುಂಬ್ಳೆ ಅವರ ಟ್ವಿಟ್ಟರ್ ಪ್ರವೇಶವನ್ನು ಅಭಿಮಾನಿಗಳು, ಗಣ್ಯರು, ಸೆಲೆಬ್ರಿಟಿಗಳು ಸ್ವಾಗತಿಸಿದ್ದಾರೆ. ಗಂಡುಗಲಿ ಆಫ್ ಗೂಗ್ಲಿಗೆ ಸ್ವಾಗತ ಎಂದಿದ್ದಾರೆ.

Anil Kumble turns 44, joins Twitter on his birthday

ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಮೇಲೆ ಮೊದಲು ಟ್ವೀಟ್ ಮಾಡಿದ್ದು ಹೀಗೆ...



ಕರ್ನಾಟಕ ಅನಿಲ್ ಕುಂಬ್ಳೆ ಅವರು ಭಾರತ ಪರ ಲೆಗ್ ಸ್ಪಿನ್ನರ್ ಆಗಿ ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಅತ್ಯಧಿಕ ವಿಕೆಟ್ ಪಡೆದಿರುವ ಬೌಲರ್ ಆಗಿದ್ದಾರೆ. ಫೆಬ್ರವರಿ 7, 1999ರಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 26.3-9-74-10 ಅದ್ಭುತ ಸ್ಪೆಲ್ ಮಾಡಿ ಭಾರತಕ್ಕೆ 212ರನ್ ಗಳ ಬೃಹತ್ ಜಯ ತಂದಿತ್ತಿದ್ದರು. ಈ ನೆನಪಿನಲ್ಲಿ ತಮ್ಮ ಟ್ವಿಟ್ಟರ್ ಐಡಿಯನ್ನು @anilkumble1074 ಎಂದು ಆಯ್ಕೆ ಮಾಡಿಕೊಂಡಿದ್ದಾರೆ. [ಕನ್ನಡದ ಕಲಿ ಅನಿಲ್ ಕುಂಬ್ಳೆ ಚಿತ್ರ ಗ್ಯಾಲರಿ]


ಕುಂಬ್ಳೆ ಅವರು ಹುಟ್ಟಿದ ದಿನ ಅಕ್ಟೋಬರ್ 17, 1970. ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕುಂಬ್ಳೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ 25, 1990ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಅನಿಲ್ ಕುಂಬ್ಳೆ, 619 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರುಗಳ ಪೈಕಿ ಮೂರನೆಯವರು.

1996ರಲ್ಲಿ ವಿಸ್ಡನ್ ವರ್ಷದ ಶ್ರೇಷ್ಠ ಕ್ರಿಕೆಟ್ಟಿಗ ಎಂಬ ಗೌರವ ಪಡೆದುದರ ಜೊತೆಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ಕರ್ನಾಟಕ ರಾಜ್ಯದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕುಂಬ್ಳೆ ಪಡೆದಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವವನ್ನೂ ಸ್ವೀಕರಿಸಿದ್ದಾರೆ.

ಛಾಯಾಗ್ರಹಣ, ಶಿಕ್ಷಣ ಮತ್ತು ವನ್ಯಜೀವಿ ಸಂರಕ್ಷಣೆ ಮುಂತಾದ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನಿಲ್ ಕುಂಬ್ಳೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನು ನಡೆಸುವ ಜವಾಬ್ದಾರಿ, ಐಸಿಸಿ ಕ್ರಿಕೆಟ್ ಕಮಿಟಿ ಕ್ರಿಕೆಟ್ ಸಮಿತಿಯ ಚೇರ್ಮನ್ ಆಗಿ ಸಮರ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X