ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದುಬೈನಲ್ಲಿ ಸಾಗರತಳದಲ್ಲಿ ಅದ್ಭುತ ಟೆನಿಸ್ ಕೋರ್ಟ್!

By Mahesh

ದುಬೈ, ಮೇ.19: ವಿಶ್ವದ ಮೊಟ್ಟ ಮೊದಲ ಬಾರಿಗೆ ಸಾಗರತಳದಲ್ಲಿ ಟೆನಿಸ್ ಕೋರ್ಟ್ ನಿರ್ಮಾಣಗೊಳ್ಳುತ್ತಿದೆ. ವಿಶ್ವದ ಅತಿ ಎತ್ತರದ ಟೆನಿಸ್ ಕೋರ್ಟ್ ಹೊಂದಿರುವ ದುಬೈ ಈಗ ಸಮುದ್ರದೊಳಗೆ ಟೆನಿಸ್ ಆಡುವ ಅವಕಾಶವನ್ನು ಕಲ್ಪಿಸಲಿದೆ.

ಇಂಥದ್ದೊಂದು ವಿಶಿಷ್ಟ ಕೋರ್ಟ್ ನಿರ್ಮಾಣ, ವಿನ್ಯಾಸದ ಹೊಣೆಯನ್ನು 30 ವರ್ಷದ ಪೋಲ್ಯಾಂಡಿನ ವಿನ್ಯಾಸಗಾರ ಕ್ರಿಜಿಸ್ಜ್ಟೊಫ್ ಕೊಟಾಲಾ ವಹಿಸಿಕೊಂಡಿದ್ದಾರೆ. ಈ ಮಹತ್ವದ ಯೋಜನೆ ಪೂರ್ಣಗೊಳಿಸಲು ಅಗತ್ಯ ಆರ್ಥಿಕ ನೆರವು ಕೋರಿದ್ದಾರೆ.

Amazing Pics: World's first underwater tennis court; another landmark for Dubai

ದುಬೈನ ಬುರ್ಜ್ ಅಲ್ ಅರಬ್ ಕಟ್ಟಡದ ಕೆಳಗೆ ಈ ಟೆನಿಸ್ ಕೋರ್ಟ್ ನಿರ್ಮಾಣವಾಗುವ ಸಾಧ್ಯತೆಗಳಿವೆ. ಈ ಮೂಲಕ ವಿಶ್ವದ ಅತಿ ಎತ್ತರದ ಹಾಗೂ ಬಹುಶಃ ಅತ್ಯಂತ ಕೆಳ ಭಾಗದಲ್ಲಿರುವ ಟೆನಿಸ್ ಕೋರ್ಟ್ ಹೊಂದಿರುವ ಹಿರಿಮೆ ದುಬೈಗೆ ಸಲ್ಲಲಿದೆ.


ಬಂಡವಾಳ ಹೂಡಿಕೆ ಸಮಸ್ಯೆಯಿಂದ ಯೋಜನೆ ಕುಂಠಿತವಾಗಿದೆ. ದುಬೈನಲ್ಲಿ ಟೆನಿಸ್ ಪ್ರಿಯರು ಹೆಚ್ಚಾಗಿದ್ದಾರೆ. ಅಲ್ಲದೆ, ವಾಸ್ತು ವಿಜ್ಞಾನ, ವಿನ್ಯಾಸವುಳ್ಳ ಕಟ್ಟಡಗಳ ನಿರ್ಮಾಣಕ್ಕೂ ದುಬೈ ಹೇಳಿ ಮಾಡಿಸಿದ ತಾಣವಾಗಿದೆ. ಹೀಗಾಗಿ ಗಲ್ಫ್ ನಗರವನ್ನು ಆಯ್ಕೆ ಮಾಡಿಕೊಂಡೆ.

ಟೆನಿಸ್ ಕೋರ್ಟಿನ ಮೊದಲ ಹಂತದ ನೀಲಿನಕ್ಷೆ ತಯಾರಿಸಲಾಗಿದೆ. ಹೂಡಿಕೆದಾರರು ಸಿಕ್ಕ ನಂತರ ಈ ವಿಶಿಷ್ಟ ಕೋರ್ಟ್ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ತಂತ್ರಜ್ಞಾನ, ಕ್ರೀಡೆ ಜೊತೆಗೆ ಪರಿಸರ ಬಗ್ಗೆ ಕಾಳಜಿ ತೋರುವ ಯೋಜನೆ ಇದಾಗಿದೆ ಎಂದು ಕೊಟಾರಾ ಹೇಳಿದ್ದಾರೆ. ಕನಸಿನಲ್ಲಿ ಕಾಣಬಹುದಾದಂಥ ಕೋರ್ಟ್ ನಿರ್ಮಾಣ ಯಾವಾಗ ಆಗುವುದೋ ಗೊತ್ತಿಲ್ಲ. ಸದ್ಯಕ್ಕಂತೂ ಟ್ವಿಟ್ಟರ್ ನಲ್ಲಿ ವಿನ್ಯಾಸದ ಸ್ಕೆಚ್ ಸಿಕ್ಕಿದೆ ನೋಡಿ...

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X