ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಾಕ್ಸರ್ ಸರಿತಾ ದೇವಿಗೆ ಒಂದು ವರ್ಷ ನಿಷೇಧ

By Mahesh

ನವದೆಹಲಿ, ಡಿ.17: ದಕ್ಷಿಣ ಕೊರಿಯಾದ ಇಂಚಿಯನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ವಿವಾದ ಹುಟ್ಟಿಹಾಕಿದ್ದ ಭಾರತದ ಬಾಕ್ಸರ್ ಸರಿತಾ ದೇವಿ ಅವರಿಗೆ ಒಂದು ವರ್ಷಗಳ ಕಾಲ ಬಾಕ್ಸಿಂಗ್ ಟೂರ್ನಿಗಳಿಂದ ನಿಷೇಧಿಸಲಾಗಿದೆ.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಮಿತಿ ಬಾಕ್ಸರ್ ಸರಿತಾ ಅವರನ್ನು ಈ ಮುಂಚೆ ಅಮಾನತು ಮಾಡಿತ್ತು. ಸರಿತಾ ಪರ ವಕಾಲತ್ತು ವಹಿಸಿದ್ದ ಭಾರತದ ವಿದೇಶಿ ಕೋಚ್ ಬಿಐ ಫರ್ನಾಂಡೀಸ್ ಅವರಿಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಮಿತಿ(AIBA) 2 ವರ್ಷಗಳ ನಿಷೇಧ ಹೇರಲಾಗಿದೆ ಎಂದು ಬಾಕ್ಸಿಂಗ್ ಇಂಡಿಯಾ (BI) ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.

AIBA bans Indian boxer Sarita Devi for 1 year

ಸರಿತಾ ಅವರು ಅಕ್ಟೋಬರ್ 1, 2014 ರಿಂದ ಅನ್ವಯವಾಗುವಂತೆ 2015ರ ತನಕ ನಿಷೇಧ ಜಾರಿಯಲ್ಲಿರುತ್ತದೆ. ಜೊತೆಗೆ 1000 ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಲಾಗಿದೆ. ಕೋಚ್ ಫರ್ನಾಂಡೀಸ್ ಅವರಿಗೆ 2000 ಸ್ವಿಸ್ ಫ್ರಾಂಕ್ಸ್ ದಂಡ ಹಾಕಲಾಗಿದೆ. ನಿಷೇಧದ ಅವಧಿಯನ್ನು ಲೆಕ್ಕ ಹಾಕಿದರೆ 29 ವರ್ಷ ವಯಸ್ಸಿನ ಮಣಿಪುರಿ ಬಾಕ್ಸರ್ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಆಸೆ ಇಟ್ಟುಕೊಳ್ಳಬಹುದು.

ಕಳೆದ ಅಕ್ಟೋಬರ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ 2014ರ 60ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದ ವೇಳೆ ರೆಫ್ರಿ ನಿರ್ಣಯವನ್ನು ಸರಿತಾ ಪ್ರಶ್ನಿಸಿದ್ದರು. ಅವರು ಪ್ರಶಸ್ತಿ ಪ್ರದಾನ ಸಮಯದಲ್ಲಿ ಪ್ರಶಸ್ತಿ ಪದಕ ಸ್ವೀಕರಿಸಲು ನಿರಾಕರಿಸಿದ್ದರು. ಅಲ್ಲದೆ, ತಮಗೆ ಸಿಕ್ಕ ಕಂಚಿನ ಪದಕವನ್ನು ದಕ್ಷಿಣ ಕೊರಿಯಾದ ಬಾಕ್ಸಿಂಗ್ ಪಟು ಜಿ ನಾ ಪಾರ್ಕ್ ಕೊರಳಿಗೆ ಹಾಕಿದ್ದರು. [ಬಾಕ್ಸರ್ ಸರಿತಾ ದೇವಿಗೆ ಅಮಾನತು ಶಿಕ್ಷೆ]

ಆದರೆ, ನಂತರ ಸರಿತಾ ದೇವಿ ಅವರು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ(OCA) ಮುಂದೆ ಕ್ಷಮೆಯಾಚಿಸಿದ್ದರು. ಎಐಬಿಎಗೂ ಕ್ಷಮೆಯಾಚಿಸಿ ಪತ್ರ ಬರೆದಿದ್ದರು. ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಸರಿತಾ ಪರ ಬ್ಯಾಟಿಂಗ್ ಮಾಡಿ ಆಕೆಯನ್ನು ಕ್ಷಮಿಸುವಂತೆ ಕೋರಿದ್ದರು. ಅದರೆ, ಆಕೆ ಕೃತ್ಯ ಪೂರ್ವ ನಿಯೋಜಿತವಾಗಿತ್ತು ಪರಿಗಣಿಸಿರುವ ಬಾಕ್ಸಿಂಗ್ ಸಂಸ್ಥೆ ಶಿಕ್ಷೆ ವಿಧಿಸಿದೆ.(ಪಿಟಿಐ)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X