ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಅಫ್ಘಾನಿಸ್ತಾನ ವಿಶ್ವಕಪ್ ಗೆಲ್ಲಲಿದೆ'-ರೋಬೋ ಭವಿಷ್ಯ

By Mahesh

ಕ್ರೈಸ್ಟ್ ಚರ್ಚ್(ನ್ಯೂಜಿಲೆಂಡ್), ಫೆ.10: ವಿಶ್ವಕಪ್ 2015 ಟೂರ್ನಿ ಆರಂಭಕ್ಕೂ ಮುನ್ನ ಬುಕ್ಕಿಗಳು ಫುಲ್ ಬ್ಯುಸಿ ಯಾವ ತಂಡಕ್ಕೆ ಎಷ್ಟು ಬೆಟ್ ಕಟ್ಟಬೇಕು. ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಇದೇ ಲೆಕ್ಕಾಚಾರ.ಆದರೆ, ಪಂಟರ್ ಗಳ ಎದೆಗೆ ನಡುಕ ಹುಟ್ಟಿಸಬಲ್ಲ, ಅಭಿಮಾನಿಗಳು ಪಕಪಕನೆ ನಗಬಲ್ಲ ಸುದ್ದಿಯನ್ನು ಇಲ್ಲಿನ ಯಂತ್ರಮಾನವ ಕೊಟ್ಟಿದೆ.

ಬೆಟ್ಟಿಂಗ್ ಲೋಕದಲ್ಲಿ ಅಫ್ಘಾನಿಸ್ತಾನಕ್ಕೆ 1000-1 ನಂತೆ ಮೌಲ್ಯ ಓಡಾಡುತ್ತಿದೆ. ಕ್ರಿಕೆಟ್ ಲೋಕದ ಶಿಶುಗಳಾಗಿರುವ ಅಫ್ಘಾನಿಸ್ತಾನಕ್ಕೆ ಈ ಸುದ್ದಿ ಕೇಳಿ ಏನಾಗಿದೆಯೋ ಗೊತ್ತಿಲ್ಲ. ಟೀಂ ಇಂಡಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸೋಲು ಕಂಡು ಸುಧಾರಿಸಿಕೊಳ್ಳುವ ವೇಳೆಗೆ ರೋಬೋಟ್ ಈ ರೀತಿ ಭವಿಷ್ಯ ನುಡಿದಿದೆ.

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ಇರುವ ಎ ಗುಂಪಿನಲ್ಲಿ ಅಫ್ಘಾನಿಸ್ತಾನ ಇದೆ. ಕ್ಯಾಂಟರ್ ಬರಿಯ ವಿಶ್ವವಿದ್ಯಾಲಯದ 'ಇಕ್ರಾಮ್' ಎಂಬ ಹೆಸರಿನ ರೋಬೋಟ್ ಈ ರೀತಿ ಭವಿಷ್ಯ ನುಡಿದಿದೆ. ರೋಬೋಟ್ ಎಂದಾದರು ಅಫ್ಘಾನಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ನೋಡಿದೆಯೋ ಇಲ್ಲವೋ ಗೊತ್ತಿಲ್ಲ.14 ದೇಶಗಳ ಬಾವುಟವನ್ನು ವೀಕ್ಷಿಸಿ ಈ ಭವಿಷ್ಯ ನುಡಿದಿದೆ.

ಭಾರತ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್ ಹಾಗೂ ನ್ಯೂಜಿಲೆಂಡ್ ಬಾವುಟ ನೋಡಿದ ರೋಬೋ ಇಕ್ರಾಮ್ ಕೊನೆಗೆ ಅಫ್ಘಾನಿಸ್ತಾನದ ಫ್ಯಾಗ್ ಹಿಡಿದಿದೆ.

'Afghanistan will win World Cup 2015'

ಹೀಗೂ ಉಂಟೆ: ಬಹುಶಃ ರೋಬೋ ಎಲ್ಲೋ ಟೂರ್ನಿಯಿಂದ ಮೊದಲು ಹೊರ ಬೀಳುವ ತಂಡವನ್ನು ಆಯ್ಕೆ ಮಾಡುವ ಮೂಡ್ ನಲ್ಲಿತ್ತು ಎಂದು ಕಾಣುತ್ತದೆ. ರೋಬೋ ನಿರ್ಮಿಸಿದವರು ಬೇಜಾನ್ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಕನ್ ಫ್ಯೂಸ್ ಆಗಿ ಈ ರೀತಿ ನಡೆದುಕೊಂಡಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಕ್ಯಾಂಟರ್ ಬರಿ ವಿಶ್ವವಿದ್ಯಾಲಯದ HITಲ್ಯಾಬ್ ನ ಪಿಎಚ್ ಡಿ ವಿದ್ಯಾರ್ಥಿ ಎಡ್ವಾರ್ಡೋ ಸ್ಯಾಂಡೋವಲ್ ವಿನ್ಯಾಸಗೊಳಿಸಿರುವ ಈ ರೋಬೋ ಭವಿಷ್ಯ ನುಡಿಯುವ ಸಾಫ್ಟ್ ವೇರ್ ಹೊಂದಿದೆ. ನನಗೂ ಇದು ಅಚ್ಚರಿ ತಂದಿದೆ. ಅದರೆ, ಕ್ರಿಕೆಟ್ ಎಂದರೆ ಹಲವು ಅಚ್ಚರಿಗಳ ಅಟ ಅಲ್ಲವೇ ಎಂದು nzherald.co.nz ಗೆ ನೀಡಿರುವ ಸಂದರ್ಶನದಲಿ ಎಡ್ವಾರ್ಡೋ ಹೇಳಿದ್ದಾರೆ.

ಮೆಕ್ಸಿಕನ್ -ಸಿರಿಯನ್ ತತ್ತ್ವಜ್ಞಾನಿ ಇಕ್ರಾಮ್ ಅಂಟಾಕಿ ಅವರ ಹೆಸರನ್ನು ಈ ರೋಬೋಗೆ ಇಡಲಾಗಿದೆ. ಅಫ್ ಕೋರ್ಸ್ ವಿಶ್ವಕಪ್ ಫುಟ್ಬಾಲ್ ವೇಳೆ ಭವಿಷ್ಯ ನುಡಿದು ಜನಪ್ರಿಯಗೊಂಡಿದ್ದ ಪಾಲ್ ಆಕ್ಟೋಪಸ್ ನಿಂಡ ಪ್ರೇರಣೆ ಪಡೆದು ಈ ರೀತಿ ರೋಬೋ ನಿರ್ಮಿಸಿದೆ ಎಂದು ಎಡ್ವಾರ್ಡೋ ಹೇಳಿದ್ದಾನೆ.

ಶನಿವಾರ ಕ್ರೈಸ್ಟ್ ಚರ್ಚ್ ನ ಹಾಗ್ಲೆ ಓವಲ್ ನಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡವನ್ನು ಶ್ರೀಲಂಕಾ ತಂಡ ಎದುರಿಸಲಿದ್ದು, ವಿಶ್ವಕಪ್ ಟೂರ್ನಿಗೆ ಚಾಲನೆ ದೊರೆಯಲಿದೆ. (ಐಎಎನ್ಎಸ್)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X