ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

WWE ದಿಗ್ಗಜ ಅಮೆರಿಕದ ನೂತನ ಅಧ್ಯಕ್ಷ ಟ್ರಂಪ್

ಕುಸ್ತಿ ಅಂಗಳಕ್ಕೂ ಟ್ರಂಪ್ ಗೂ ಅವಿನಾಭಾವ ಸಂಬಂಧ. 2013ರಲ್ಲಿ WWE ಹಾಲ್ ಆಫ್ ಫೇಮ್ ಸೇರಿದ್ದ ಟ್ರಂಪ್ ಅವರ ಕುಸ್ತಿ ವೃತ್ತಿ ಉದ್ಯಮದತ್ತ ಒಂದು ನೋಟ ಇಲ್ಲಿದೆ

By Mahesh

ಬೆಂಗಳೂರು, ನವೆಂಬರ್ 11: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ WWE ಸಕತ್ ಖುಷಿ ಪಟ್ಟಿದೆ. ಕುಸ್ತಿ ಅಂಗಳಕ್ಕೂ ಟ್ರಂಪ್ ಗೂ ಅವಿನಾಭಾವ ಸಂಬಂಧ. 2013ರಲ್ಲಿ WWE ಹಾಲ್ ಆಫ್ ಫೇಮ್ ಸೇರಿದ್ದ ಟ್ರಂಪ್ ಅವರ ಕುಸ್ತಿ ವೃತ್ತಿ ಉದ್ಯಮದತ್ತ ಒಂದು ನೋಟ ಇಲ್ಲಿದೆ. [ಡೊನಾಲ್ಡ್ ಟ್ರಂಪ್ ವ್ಯಕ್ತಿಚಿತ್ರ]

ಉದ್ಯಮಿ ಟ್ರಂಪ್ ಅವರು ಅತ್ಯಂತ ಜನಪ್ರಿಯ ಕ್ರೀಡೆ ವರ್ಲ್ಡ್ ರೆಸ್ಲಿಂಗ್ (WWE) ನಲ್ಲೂ ಹೂಡಿಕೆ ಮಾಡಿ, ಕುಸ್ತಿ ಪಟುಗಳನ್ನು ಹುರಿ ದುಂಬಿಸಿ ರಿಂಗ್ ಬಳಿ ನಿಂತು ಚೀರಾಡಿದ್ದರು. ಈಗ ಡೊಮೊಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ರನ್ನು ಸೋಲಿಸಿ ರಿಪಬ್ಲಿಕನ್ ಗೆ ಗೆಲುವು ತಂದು ಕೊಟ್ಟಿದ್ದಾರೆ. [ಡೊನಾಲ್ಡ್ ಟ್ರಂಪ್ ನಮ್ಮ ಪಾಲಿನ ಗೋಡ್ಸೆ]

WWE ಇತಿಹಾಸದಲ್ಲಿ ಲೆಜೆಂಡ್ ಎನಿಸಿಕೊಂಡಿರುವ ಟ್ರಂಪ್ ಅವರು ಪ್ರಮುಖ ಪಂದ್ಯ, ಸರಣಿಯನ್ನು ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ರೆಸ್ಲರ್ ಮೇನಿಯಾ ಪಂದ್ಯದ ವೇಳೆ ಹಳೆ ಗೆಳೆಯ ವಿನ್ಸ್ ಮೆಕ್ ಮೊಹಾನ್ ರ ತಲೆ ಕೂದಲು ಬೋಳಿಸಿದ್ದ ಟ್ರಂಪ್ ರನ್ನು ಯಾರು ಮರೆತ್ತಿಲ್ಲ. [ WWE ದಿವಾ ಪೇಜ್ ಮತ್ತೆ ರಿಂಗ್ ಗೆ ಬರ್ತಾಳಂತೆ!]

ಇದೆಲ್ಲ ಮೋಜಿನ ಆಟದ ಒಂದು ಭಾಗವಾಗಿತ್ತು

ಇದೆಲ್ಲ ಮೋಜಿನ ಆಟದ ಒಂದು ಭಾಗವಾಗಿತ್ತು

ಆದರೆ, ಇದೆಲ್ಲ ಮೋಜಿನ ಆಟದ ಒಂದು ಭಾಗವಾಗಿತ್ತು. ವಿನ್ಸ್ ಹಾಗೂ ಅವರ ಪತ್ನಿ ಲಿಂಡಾ ಅವರು 2007ದಿಂದ ಡೊನಾಲ್ಡ್ ಟ್ರಂಪ್ ಚಾರಿಟಿ ಫೌಂಡೇಶನ್ ಗೆ 5 ಮಿಲಿಯನ್ ಡಾಲರ್ ದಾನ ಮಾಡುತ್ತಾ ಬಂದಿದ್ದಾರೆ. ಚಿತ್ರದಲ್ಲಿ ರೆಸ್ಲಲ್ ಮೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಅವರು ವಿನ್ಸ್ ಅವರ ತಲೆ ಬೋಳಿಸುತ್ತಿರುವುದು Image courtesy: Youtube

ಬಿಲಿಯನೇರ್ vs ಬಿಲಿಯನೇರ್ ಸರಣಿ

ಬಿಲಿಯನೇರ್ vs ಬಿಲಿಯನೇರ್ ಸರಣಿಯಲ್ಲಿ ಸೋತ ತಂಡದ ಮ್ಯಾನೇಜರ್ ತಲೆ ಬೋಳಿಸುವ ಶಿಕ್ಷೆ ಕಾದಿತ್ತು. ಒಂದು ವೇಳೆ ಟ್ರಂಪ್ ತಂಡ ಸೋತಿದ್ದರೆ, ಟ್ರಂಪ್ ಈ ಶಿಕ್ಷೆ ಅನುಭವಿಸಬೇಕಿತ್ತು. ಆದರೆ, ಟ್ರಂಪ್ ತಂಡದ ಬಾಬಿ ಲಾಶ್ಲೆ ಅವರು ವಿನ್ಸ್ ತಂಡದ ಉಮಗಾರನ್ನು ಸೋಲಿಸಿದರು. ನಂತರ ವಿನ್ಸ್ ಅವರ ತಲೆಯನ್ನು ಡೊನಾಲ್ಡ್ ಟ್ರಂಪ್ ಹಾಗೂ ಸ್ಟೋನ್ ಕೋಲ್ಡ್ ಅವರು ಕ್ಲೀನ್ ಶೇವ್ ಮಾಡಿಬಿಟ್ಟರು.

2013ರಲ್ಲಿ ಹಾಲ್ ಆಫ್ ಫೇಮ್ ಸೇರಿದ್ದ ಟ್ರಂಪ್

ಡೊನಾಲ್ಡ್ ಅವರ ಸ್ತ್ರೀಲೋಲತನ ಅವರಿಗೆ ಮುಳುವಾಯಿತು. ರಿಂಗ್ ಬಳಿ ಗಳಿಸಿದ್ದ ಜನಪ್ರಿಯತೆ ಲಾಕರ್ ರೂಮಿನಲ್ಲಿ ಕಳೆದುಹೋಯಿತು. ಮಹಿಳಾ ಸ್ಪರ್ಧಿಗಳಿಂದ ದೂರುಗಳು ಕೇಳಿ ಬಂದವು. WWE ದಿವಾಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು ಎಂದು ಮರಿಯಾ ಅವರು ದೂರು ನೀಡಿದ್ದರು.

ಮೆಕ್ ಮಹೊನ್ ಹಾಗೂ ಟ್ರಂಪ್ ಜಟಾಪಟಿ

ಚುನಾವಣೆ ವೇಳೆಯಲ್ಲಿ Raw ಪ್ರಧಾನ ಮ್ಯಾನೇಜರ್ ಮಿಕ್ ಫೊಲೆ ಅವರು ಟ್ರಂಪ್ ಪರ ಮತ ಹಾಕುವಂತೆ ಕೋರಿಕೊಂಡರು. ಮೆಕ್ ಮಹೊನ್ ಹಾಗೂ ಟ್ರಂಪ್ ಜಟಾಪಟಿ WWE ಅಂಗಳಕ್ಕೆ ಮಾತ್ರ ಸೀಮಿತವಾಯಿತು. WWE ನಿಂದ ಟ್ರಂಪ್ ಗೆ ಭಾರಿ ಬೆಂಬಲ ಸಿಕ್ಕಿದ್ದು ಟ್ರಂಪ್ ಗೆ ವರದಾನವಾಯಿತು.

Story first published: Wednesday, January 3, 2018, 10:16 [IST]
Other articles published on Jan 3, 2018
Read in English: Donald Trump's WWE career
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X