ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್: ಭಾರತ ಬ್ಯಾಟಿಂಗ್, ವಿಜಯ್ ಆಕರ್ಷಕ ಶತಕ

By Mahesh

ಬ್ರಿಸ್ಬೇನ್, ಡಿ.17: ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ದಿನದ ಅಂತ್ಯಕ್ಕೆ ಉತ್ತಮ ಮೊತ್ತ ಕಲೆ ಹಾಕುವ ಕುರುಹು ತೋರಿದೆ. ಮುರಳಿ ವಿಜಯ್ ಶತಕ ಬಾರಿಸಿದರೆ, ರಹಾನೆ ಅರ್ಧ ಶತಕಗಳಿಸಿದರು.

ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡರೂ ಮುರಳಿ ವಿಜಯ್ ಶತಕ(144 ರನ್)ದಿಂದ ಭಾರತ ದಿನದ ಅಂತ್ಯಕ್ಕೆ 311/4 ಸ್ಕೋರ್ ಮಾಡಿದೆ. ಅಡಿಲೇಡ್ ಟೆಸ್ಟ್ ನಲ್ಲಿ ಒಂದು ರನ್ನಿನಿಂದ ಶತಕ ವಂಚಿತರಾಗಿದ್ದ 30 ವರ್ಷ ವಯಸ್ಸಿನ ವಿಜಯ್ ಬ್ರಿಸ್ಬೇನ್ ನಲ್ಲಿ ಬಿರುಸಿನ ಆಟ ಪ್ರದರ್ಶಿಸಿದರು. 36 ರನ್ ಮಾಡಿದ್ದಾಗ ಹಾಗೂ 102ರನ್ ಗಳಿಸಿದ್ದಾಗ ಮಿಚೆಲ್ ಜಾನ್ಸನ್ ಬೌಲಿಂಗ್ ನಲ್ಲಿ ಕ್ಯಾಚ್ ಕೊಟ್ಟಿದ್ದನ್ನು ಶಾನ್ ಮಾರ್ಷ ಕೈಚೆಲ್ಲಿದ್ದು ಆಸೀಸ್ ಪಾಲಿಗೆ ಮುಳುವಾಯಿತು.

Indian batsmen dominate

ಭಾರತದ ಸ್ಕೋರ್ 40 ಓವರ್ ಗಳಲ್ಲಿ 124/2 ಆಗಿದ್ದಾಗ ಮುರಳಿ ವಿಜಯ್ 62 ರನ್(117, 7 ಬೌಂಡರಿ),ವಿರಾಟ್ ಕೊಹ್ಲಿ 16 ರನ್ ಗಳಿಸಿ ಆಡುತ್ತಿದ್ದರು. ಆದರೆ, ವಿರಾಟ್ ಕೊಹ್ಲಿ 17 ರನ್ ಗಳಿಸಿ ಹೇಜಲ್ ವುಡ್ ಗೆ ವಿಕೆಟ್ ಒಪ್ಪಿಸಿದರು.

ಮುರಳಿ ವಿಜಯ್ ತಮ್ಮ ಟೆಸ್ಟ್ ವೃತ್ತಿಯ 5ನೇ ಶತಕ ದಾಖಲಿಸುವ ಮೂಲಕ ಭಾರತದ ಇನ್ನಿಂಗ್ಸ್ ಕಾಯ್ದುಕೊಂಡಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ಮುರಳಿ ವಿಜಯ್ 102 ರನ್(178ಎ, 7 14 ಬೌಂಡರಿ) ಗಳಿಸಿ ಆಡುತ್ತಿದ್ದರು. ರಹಾನೆ 15 ರನ್ ಗಳಿಸಿ ಆಡುತ್ತಿದ್ದಾರೆ. ಭಾರತದ ಸ್ಕೋರ್ 57 ಓವರ್ ಗಳಲ್ಲಿ 186/3 ಆಗಿದೆ.

Murali Vijay

ಇದಕ್ಕೂ ಮುನ್ನ ಇನ್ನಿಂಗ್ ಆರಂಭಿಸಿದ ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರಾ ಜೋಡಿ ತಂಡದ ಮೊತ್ತ 56ರನ್ ಆಗುವ ತನಕ ಉತ್ತಮ ಆಟವಾಡಿತ್ತು. ಅದರೆ, ಮಾರ್ಷ್ ಗೆ ಮೊದಲ ವಿಕೆಟ್ ಒಪ್ಪಿಸಿ ಧವನ್(24) ಪೆವಿಲಿಯನ್ ಗೆ ತೆರಳಿದರು. ನಂತರ ಬಂದ ಚೇತೇಶ್ವರ್ ಪೂಜಾರಾ ಕೇವಲ 18 ರನ್ ಗಳಿಸಿ ಮೊದಲ ಟೆಸ್ಟ್ ಆಡುತ್ತಿರುವ ಹೇಜಲ್ ವುಡ್ ಗೆ ವಿಕೆಟ್ ನೀಡಿದರು.

ಆಸ್ಟ್ರೇಲಿಯಾ: ಕ್ರಿಸ್ ರೋಜರ್ಸ್, ಡೇವಿಡ್ ವಾರ್ನರ್, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್ (ನಾಯಕ), ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಬ್ರಾಡ್ ಹಡ್ಡೀನ್(ವಿಕೆಟ್ ಕೀಪರ್, ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ನಾಥನ್ ಲಯಾನ್, ಜೋಶ್ ಹಜೇಲ್ ವುಡ್.

ಭಾರತ: ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಮಹೇಂದ್ರ ಸಿಂಗ್ ಧೋನಿ(ನಾಯಕ, ವಿಕೆಟ್ ಕೀಪರ್),ಆರ್ ಅಶ್ವಿನ್, ಇಶಾಂತ್ ಶರ್ಮ, ವರುಣ್ ಅರೋನ್, ಉಮೇಶ್ ಯಾದವ್

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X