ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ವಿಶ್ವಕಪ್ 2015: ಟಾಪ್ 10 ಬದಲಾವಣೆ

By Mahesh

ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರಿಕೆಟ್ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಿಸಲು, ಆಟವನ್ನು ಇನ್ನಷ್ಟು ಪ್ರೇಕ್ಷಕರಿಗೆ ಹತ್ತಿರವಾಗಿಸಲು ಐಸಿಸಿ ಯತ್ನಿಸುತ್ತಲೇ ಇರುತ್ತದೆ. 11 ವಿಶ್ವಕಪ್ ಟೂರ್ನಿಯಲ್ಲೂ ಕೂಡಾ ಐಸಿಸಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು ಆಟಗಾರರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆಯುವ ನಿರೀಕ್ಷೆಯಲ್ಲಿದೆ.

2011ರ ವಿಶ್ವಕಪ್ ಗೆ ಹೋಲಿಸಿದರೆ ಈ ಬಾರಿ ಸಾಕಷ್ಟು ನಿಯಮಗಳನ್ನು ಬದಲಾಯಿಸಲಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಈ ಕ್ರಿಕೆಟ್ ಹಣಾಹಣಿ ಫೆ.14ರಿಂದ ಅಭಿಮಾನಿಗಳ ಕಣ್ತುಂಬಿಸಲಿದೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಾಣಬಹುದಾದ ಟಾಪ್ 10 ಬದಲಾವಣೆಗಳು ಹೀಗಿವೆ:

10 major changes at ICC Cricket World Cup 2015


1. ವಿಶ್ವಕಪ್ ನಲ್ಲಿ ಹೊಸ ಫೀಲ್ಡಿಂಗ್ ನಿರ್ಬಂಧ (ಪವರ್ ಪ್ಲೇ ಓವರ್ಸ್ ಗಳಲ್ಲದ ಸಮಯದಲ್ಲಿ 4 ಫೀಲ್ಡರ್ಸ್ 30 ಯಾರ್ಡ್ ಸರ್ಕಲ್ ನಲ್ಲಿರಬಹುದು)

2. ಪ್ರತಿ ಇನ್ನಿಂಗ್ ಕೊನೆಗೆ ಹೊಸ ಚೆಂಡು ಬಳಸಲಾಗುತ್ತದೆ.

3. ಬ್ಯಾಟ್ಸ್ ಮನ್ ಗಳಿಗೆ ರನ್ನರ್ ಆಯ್ಕೆ ನಿಷೇಧ. [ಶತಕ ವೀರರ ಪೈಕಿ ಸಚಿನ್ ಇಸ್ ಬೆಸ್ಟ್]

4. ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಅರ್ಹತಾ ಸುತ್ತ್ತಿನಲ್ಲಿ ಜಯಗಳಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದೆ.

5. ಪಂದ್ಯ ಟೈ ಅದ ಸಂದರ್ಭದಲ್ಲಿ ಸೂಪರ್ ಓವರ್ ಗಳನ್ನು ಬಳಸಿ ಪಂದ್ಯದ ಫಲಿತಾಂಶ ನಿರ್ಧರಿಸಲಾಗುತ್ತದೆ.

6. ಡಿಸಿಷನ್ ರಿವ್ಯೂ ಸಿಸ್ಟಮ್(ಡಿಆರ್ಎಸ್) ಸೂಪರ್ ಓವರ್ ಗಳಲ್ಲೂ ಬಳಸಬಹುದಾಗಿದೆ.

7. ಥರ್ಡ್ ಅಂಪೈರ್ ಗೆ ನೆರವಾಗಲು ಹಾಟ್ ಸ್ಪಾಟ್, ರಿಯಲ್ ಟೈಮ್ ಸ್ನಿಕೋಮೀಟರ್ಸ್ ಬಳಸಲಾಗುತ್ತದೆ.

8. ಈ ಮುಂಚೆ ಮೂರು ಪವರ್ ಪ್ಲೇ ಅವಧಿ ಇತ್ತು. ಈಗ ಎರಡನೇ ಪವರ್ ಪ್ಲೇ ಇರುತ್ತದೆ. 1-10 ಓವರ್ ಕಡ್ಡಾಯ ಪವರ್ ಪ್ಲೇ ಹಾಗೂ 40ನೇ ಓವರ್
ನೊಳಗೆ 5 ಓವರ್ ಗಳ ಪವರ್ ಪ್ಲೇ ಬಳಸಬೇಕಾಗುತ್ತದೆ.

9. ಬಹುಮಾನದ ಮೊತ್ತ 8 ಮಿಲಿಯನ್ ಯುಎಸ್ ಡಾಲರ್ ನಿಂದ 40 ಮಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.

10. ರನೌಟ್ ನಿಯಮ ಬದಲಾವಣೆ: ಫೀಲ್ಡರ್ ವಿಕೆಟ್ ಗೆ ಎಸೆಯುವ ಥ್ರೋಗೆ ಉದ್ದೇಶಪೂರ್ವಕವಾಗಿ ಬ್ಯಾಟ್ಸ್ ಮನ್ ಅಡ್ಡ ಬರುವುದು ಕಂಡರೆ ಬ್ಯಾಟ್ಸ್ ಮನ್ ಔಟ್ ಎಂದು ಪರಿಗಣಿಸಲಾಗುತ್ತದೆ.

ಒನ್ ಒಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X