ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಮೊದಲ ಗೆಲುವಿನ ಹುಡುಕಾಟ

By Mahesh

ಮೆಲ್ಬೋರ್ನ್, ಫೆ.18: ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಗೆಲುವಿಗಾಗಿ ಟೀಂ ಇಂಡಿಯಾ ಕಾತುರದಿಂದ ಕಾದಿದೆ. ಪಾಕಿಸ್ತಾನ ಹೇಗೆ ಭಾರತ ವಿರುದ್ಧ ಗೆದ್ದಿಲ್ಲವೋ ಅದೇ ರೀತಿ ಭಾರತ ಕೂಡಾ ದಕ್ಷಿಣ ಆಫ್ರಿಕಾ ವಿರುದ್ಧ ಜಯದ ನಗೆ ಬೀರಿಲ್ಲ.

ಫೆ.22ರಂದು ಹರಿಣಗಳನ್ನು ಭಾರತ ಹುಲಿಗಳು ಬೇಟೆಯಾಡುವುದೇ? ಜಾಹೀರಾತಿನಲ್ಲಿ ತೋರಿಸಿದಂತೆ ಪಟಾಕಿ ಹಚ್ಚಬಹುದೇ? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

10 facts about India-South Africa World Cup match at MCG

ಕಳೆದ ಭಾನುವಾರ(ಫೆ.15) ಬದ್ಧವೈರಿಗಳಾದ ಪಾಕಿಸ್ತಾನ ವಿರುದ್ಧ 76 ರನ್ ಗಳ ಜಯ ದಾಖಲಿಸಿ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ 6-0 ಅಂತರವನ್ನು ಟೀಂ ಇಂಡಿಯಾ ಕಾಯ್ದುಕೊಂಡಿದೆ.[ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ ]

ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ</a> | <a class=ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" title="ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ" />ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | 2015: ಟಾಪ್ 10 ಬದಲಾವಣೆ

ಫೆ.22ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿ ಹಾಕಲು ಎಂಎಸ್ ಧೋನಿ ನಾಯಕತ್ವದ ಭಾರತ ತಂಡ ಸಜ್ಜಾಗಿದೆ. ಪಂದ್ಯ 9.00IST ಗೆ ಶುರುವಾಗುತ್ತದೆ. ಪರಸ್ಪರ ಕಾದಾಟದ ಕುತೂಹಲಕಾರಿ ಅಂಕಿ ಅಂಶ ಮುಂದಿದೆ:

1. 1992 ರಿಂದ ಇಲ್ಲಿ ತನಕ ವಿಶ್ವಕಪ್ ಟೂರ್ನಿಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಒಮ್ಮೆ ಕೂಡಾ ಗೆದ್ದಿಲ್ಲ. 1992,1999 ಹಾಗೂ 2011 ಮೂರು ಬಾರಿ ಸೋಲು ಕಂಡಿದೆ.

2. ಮೊಟ್ಟ ಮೊದಲ ಬಾರಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಲ್ಲದೆ ದಕ್ಷಿಣ ಆಫ್ರಿಕಾವನ್ನು ಟೀಂ ಇಂಡಿಯಾ ಎದುರಿಸುತ್ತಿದೆ. ಕಳೆದ ಮೂರು ಪಂದ್ಯದಲ್ಲೂ ಸಚಿನ್ ಆಡಿದ್ದರು.

3. 2011ರಲ್ಲಿ ಸಚಿನ್ ಅವರು 111 ರನ್ ಬಾರಿಸಿ ಶತಕ ಗಳಿಸಿದ ಏಕೈಕ ಆಟಗಾರ ಎನಿಸಿದ್ದಾರೆ.

4. ದಕ್ಷಿಣ ಆಫ್ರಿಕಾ ವಿರುದ್ಧ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ ಕೂಡಾ ಸಚಿನ್ ಹೆಸರಿನಲ್ಲಿದೆ. 153 ರನ್ ಮೂರು ಇನ್ನಿಂಗ್ಸ್ ನಲ್ಲಿ ಹೊಡೆದಿದ್ದಾರೆ.

5. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಬೌಲಿಂಗ್ ಹರ್ಭಜನ್ ಸಿಂಗ್ ಹೆಸರಿನಲ್ಲಿದೆ. 2011ರಲ್ಲಿ ಹರ್ಭಜನ್ 3/53 ಕಿತ್ತಿದ್ದರು.

6. ದಕ್ಷಿಣ ಆಫ್ರಿಕಾ ಪರ ಜಾಕ್ ಕಾಲೀಸ್ ಉತ್ತಮ ಪ್ರದರ್ಶನ ನೀಡಿದ್ದು, ಭಾರತ ವಿರುದ್ಧ 165ರನ್ ಗಳಿಸಿದ್ದಾರೆ.

7. ಭಾರತ ವಿರುದ್ಧ ಕಳೆದ ಮೂರು ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಶತಕ ಗಳಿಸಿಲ್ಲ. 1999ರಲ್ಲಿ ಕಾಲಿಸ್ ಗಳಿಸಿದ 96ರನ್ ಗರಿಷ್ಠ
ವೈಯಕ್ತಿಕ ಮೊತ್ತ.

8. ಒಂದೇ ಪಂದ್ಯದಲ್ಲಿ 5 ವಿಕೆಟ್ ಕಿತ್ತ ದಾಖಲೆ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಹೆಸರಿನಲ್ಲಿದೆ. 2011ರಲ್ಲಿ ಸ್ಟೇನ್ 5/50 ಕಿತ್ತಿದ್ದರು.

9. 2011ರಲ್ಲಿ ಧೋನಿ ನೇತೃತ್ವದ ತಂಡ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದ ಗುರು ಗ್ಯಾರಿ ಈಗ ದಕ್ಷಿಣ ಆಫ್ರಿಕಾ ತಂಡದ ಸಲಹೆಗಾರರಾಗಿದ್ದಾರೆ.

10. ದಕ್ಷಿಣ ಆಫ್ರಿಕಾ ವಿರುದ್ಧ ಕಪಿಲ್ ದೇವ್ ಅತಿ ಹೆಚ್ಚಿನ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 1992 ವಿಶ್ವಕಪ್ ನಲ್ಲಿ ಕಪಿಲ್ 29 ಎಸೆತದಲ್ಲಿ 42 ರನ್(3x4,1x6) ಗಳಿಸಿದ್ದರು. 144.82 ಸ್ಟ್ರೈಕ್ ರೇಟ್.

ಕಳೆದ ಮೂರು ಪಂದ್ಯಗಳ ಫಲಿತಾಂಶ ಹಾಗೂ ಸ್ಕೋರ್ ಕಾರ್ಡ್
* 1992: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ ಜಯ []
* 1999: ದಕ್ಷಿಣ ಆಫ್ರಿಕಾಕ್ಕೆ 4 ವಿಕೆಟ್ ಜಯ []
* 2011: ದಕ್ಷಿಣ ಆಫ್ರಿಕಾಕ್ಕೆ 3 ವಿಕೆಟ್ ಜಯ []
ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X