ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವೆ ಕನ್ನಡದಲ್ಲಿದ್ರೆ ಮಾತ್ರ 'ಎಂ ಆಡಳಿತ' ಸ್ವಾಗತಾರ್ಹ

By ಆನಂದ್ ಜಿ, ಬನವಾಸಿ ಬಳಗ
|
Google Oneindia Kannada News

ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಮುಂದಾಳ್ತನದ ರಾಜ್ಯ ಸರ್ಕಾರ ನಾಡಿನ ಆಡಳಿತದಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದೆ. ನಾಗರೀಕ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆದುಕೊಳ್ಳಲು ಅನುವಾಗುವ "ಕರ್ನಾಟಕ ಮೊಬೈಲ್ - ಒನ್" ಸೇವೆಯನ್ನು ಶುರು ಮಾಡಿದೆ.

ಮೊದಲಿಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಪ್ರಾಯೋಗಿಕವಾಗಿ ಶುರುವಾಗಿದ್ದ ಈ ಸೇವೆಯು, ಇದೀಗ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಂಡಿದ್ದು, ಇದು ಜನರಿಗೆ ಬಹಳ ಉಪಕಾರಿಯಾಗಬಲ್ಲುದಾಗಿದೆ. ಇದರಿಂದಾಗಿ ಮೊಬೈಲ್ ಮೂಲಕವೇ ಸರ್ಕಾರದ ನಾಲ್ಕುನೂರಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ.

ಸರ್ಕಾರದ 37 ಇಲಾಖೆಗಳ 637 ಸೇವೆಗಳು (G2C) ಮೊಬೈಲ್‌ ಮೂಲಕ ಸಿಗಲಿದೆ. ಜೊತೆಗೆ ಉದ್ಯಮಿಗಳಿಂದ ಗ್ರಾಹಕರನ್ನು ತಲುಪಲು B2C ವಿಭಾಗದಲ್ಲಿಸುಮಾರು 3,644 ಸೇವೆಗಳನ್ನು ಒದಗಿಸಲಾಗುತ್ತಿದೆ. [ಕರ್ನಾಟಕ ಮೊಬೈಲ್ ಒನ್ ರಾಜ್ಯದ ಜನರಿಗೆ ಅರ್ಪಣೆ ]

ಕನ್ನಡದಲ್ಲಿ ಈ ಸೇವೆ ಇದ್ದೂ ಇಲ್ಲಾ!

ಈ ಸೇವೆಗಳು ಮೂರು ರೂಪದಲ್ಲಿ ಸಿಗುತ್ತದೆ. ಒಂದು ಐವಿಆರ್ ಸೇವೆ. ಇದರ ಮೂಲಕ ಯಾವುದೇ ದೂರವಾಣಿ ಬಳಸುವವರು ಸೇವೆ ಪಡೆಯಬಹುದು. ಇದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಆಯ್ಕೆಗಳಿವೆ.ಎರಡನೆಯದು ಅಂತರ್ಜಾಲ ತಾಣದ ಡೆಸ್ಕ್ ಟಾಪ್ ಸೇವೆ. ಇದರಲ್ಲೂ ಇಂಗ್ಲಿಷ್ ಮತ್ತು ಕನ್ನಡದ ಆಯ್ಕೆಯಿದ್ದು ಎರಡೂ ಕೆಲಸ ಮಾಡುತ್ತಿದೆ.

Why Karnataka Mobile One Service not available in Kannada

ಮೂರನೆಯದು ಅಂದರೆ ಮೊಬೈಲ್ ಸೇವೆಯನ್ನು ನೀಡುವ ಅಪ್ಲಿಕೇಶನ್ (ಆಪ್) ಗೂಗಲ್ ಪ್ಲೇಸ್ಟೋರ್ ಮತ್ತು ಐಓಎಸ್ ಗಳಲ್ಲಿ ಸಿಗುತ್ತಿದ್ದು ಇದರಲ್ಲಿ ಕನ್ನಡದ ಆಯ್ಕೆ ಇದ್ದೂ ಇಲ್ಲಾ. ಇಲ್ಲಿ ಕನ್ನಡದ ಆಯ್ಕೆಯಿದ್ದರೂ ಬಳಕೆ ಬರಿಯ ನೋಂದಾವಣಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಕನ್ನಡವನ್ನು ಆರಿಸಿಕೊಳ್ಳುವುದೆಂದರೆ ಏಳು ಕಡಲು ಈಜಿದಷ್ಟೇ ತೊಡಕಿನ ಕೆಲಸ. [ಮೊಬೈಲ್ ಒನ್' ಸೇವೆ ಪಡೆಯುವುದು ಹೇಗೆ?]

ಅಂದರೆ ಇಡೀ ಯೋಜನೆಯ ಹಿರಿಮೆ ಇರುವುದೇ ಮೊಬೈಲ್ ಬಳಸಿ ಸೇವೆ ಪಡೆದುಕೊಳ್ಳಿ ಎಂಬುದರಲ್ಲಿ. ಆದರೆ ಈ ಉದ್ದೇಶವೇ ಈಡೇರುತ್ತಿಲ್ಲ. ಏಕೆಂದರೆ ಮೊಬೈಲಿನಲ್ಲಿ ಈ ಸೇವೆ ಕನ್ನಡದಲ್ಲಿ ಸುಲಭವಾಗಿ ಸಿಗುತ್ತಿಲ್ಲ.

ಈ ಕೊರತೆಯ ಕಾರಣದಿಂದಾಗಿ ಕರ್ನಾಟಕದ ಬಹುದೊಡ್ಡ ಪ್ರಮಾಣದ ಜನರನ್ನು ಈ ಯೋಜನೆ ಮುಟ್ಟೀತೆ ಎಂಬ ಅನುಮಾನ ಮೂಡುತ್ತದೆ. ಕರ್ನಾಟಕ ಸರ್ಕಾರ ತಾನು ಇಟ್ಟಿರುವ ಈ ಜನಪರ ಹೆಜ್ಜೆಯ ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಾದಲ್ಲಿ ಆದಷ್ಟು ಬೇಗ ಈ ಸೇವೆಗಳಲ್ಲಿ ಕನ್ನಡ ಸಿಗುವಂತೆ ಮಾಡಲಿ.

ಇಲ್ಲದಿದ್ದರೆ ಈ ಸೌಂದರ್ಯವೆಲ್ಲಾ ಶಿವನಿಲ್ಲದ ಸೌಂದರ್ಯದಂತೆಯೂ, ಶವ ಮುಖದ ಕಣ್ಣಿನಂತೆಯೂ ಆಗುತ್ತದೆ....ಮೊಬೈಲ್ ಆಡಳಿತ ಸಾರ್ಥಕವಾಗಲು ಕನ್ನಡ ಬೇಕು!

English summary
Karnataka Mobile One brings together services of multiple state and central government departments as well as private service providers. But, services, information are not available in Kannada language reports citizen journalist Anand G, Banavasi Balaga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X