ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ರಾಮಯ್ಯನವರಿಂದ ಬ್ಯಾಂಕ್ ಗಳ ದಿವಾಳಿ: ಓದುಗರ ಪ್ರತಿಕ್ರಿಯೆ

|
Google Oneindia Kannada News

ಸಹಕಾರ ಸಂಘಗಳಲ್ಲಿ ಇರುವ ಕೃಷಿ ಸಾಲದ ಪೈಕಿ ಐವತ್ತು ಸಾವಿರ ಮನ್ನಾ ಮಾಡುವ ನಿರ್ಧಾರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಘೋಷಣೆ ಮಾಡಿದರು.

ಆ ನಂತರ ಒನ್ಇಂಡಿಯಾ ಕನ್ನಡದಲ್ಲಿ ಮುಖ್ಯಮಂತ್ರಿಗಳ ಇತ್ತೀಚಿನ ಘೋಷಣೆಗಳ ಬಗ್ಗೆ ಮತ್ತು ಅವುಗಳು ಹೇಗೆ ಬಿಜೆಪಿಗೆ ಸವಾಲು ಎಂಬಂತಿವೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಆ ಹಿನ್ನೆಲೆಯಲ್ಲಿ ಎಂಥ ನಿರ್ಧಾರಗಳನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಕೂಡ ತಿಳಿಸಲಾಗಿತ್ತು.

ರೈತರ ಸಾಲಮನ್ನಾದ ಸುತ್ತ ರಾಜ್ಯ ಕಾಂಗ್ರೆಸ್ ನಲ್ಲಿ ಏನೇನೋ ಸುದ್ದಿ!ರೈತರ ಸಾಲಮನ್ನಾದ ಸುತ್ತ ರಾಜ್ಯ ಕಾಂಗ್ರೆಸ್ ನಲ್ಲಿ ಏನೇನೋ ಸುದ್ದಿ!

ಈ ಬಗ್ಗೆ ಒನ್ಇಂಡಿಯಾ ಕನ್ನಡದ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಅವುಗಳನ್ನು ಇಲ್ಲಿ ಕೊಡಲಾಗಿದೆ.

Oneindia Kannada readers response to Karnataka government's farmer loan waive off

ರಘು ಕೆವಿ
ಇವೆಲ್ಲ ಕೆಲಸಕ್ಕೆ ಬರೋಲ್ಲ. ಯಾರದ್ದೋ ದುಡ್ಡು , ರೈತರಿಗೆ ಸಾಲ ಮನ್ನಾ ಮಾಡಿಸಿ ಬ್ಯಾಂಕ್ ಗಳನ್ನು ದಿವಾಳಿ ಮಾಡುತ್ತಿದ್ದಾರೆ. ಅದು ನಿಮಗೆ ಕಾಣಿಸುತ್ತಿಲ್ಲವೇ ? ಸರ್ಕಾರ ಯಾವ ಹೊರೆಯೂ ಹೊರಲ್ಲ ಸ್ವಾಮಿ. ಅದು ತಿಂಗಳ ಸಂಬಳಕ್ಕೆ ದುಡಿಯುವ ಜನ ಸಾಮಾನ್ಯರ ಮೇಲೆ ಬೀಳುತ್ತವೆ .

ನಿಮಗೆ ಅದು ಕಾಣಿಸುತ್ತಿಲ್ಲವೇ? ಅಥವಾ ಅದನ್ನು ಮರೆ ಮಾಚುತ್ತಿದ್ದೀರೇ ? ಶ್ರೀನಿವಾಸ ಅವರೆ , ನೀವು ಕಾಂಗ್ರೆಸ್ ಚಮಚ ಅನ್ಸತ್ತೆ. ಸುಮ್ಮನೆ ಸಿದ್ದರಾಮಯ್ಯ ಅವರಿಗೆ ಬಕೆಟ್ ಹಿಡಿಯಬೇಡಿ.

ಮಧುಸೂದನ್
ಏನೇ ಆಗಲಿ, ಹೇಗೇ ಆಗಲಿ ಕಾಂಗ್ರೆಸ್ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲ್ಲ.

ಮಲ್ಲಿಕಾರ್ಜುನ್
ಕರ್ನಾಟಕದಲ್ಲೇ ಅನರ್ಹವಾದ ವ್ಯಕ್ತಿಯನ್ನು ನೀವು ಹೊಗಳಿದ್ದೀರಾ. ದುಡ್ಡು ತೆಗೆದುಕೊಂಡು ಬರೆದ ಸುದ್ದಿ ಇದ್ದ ಹಾಗಿದೆ. ನಮಗೂ ಗೊತ್ತು ರೀ ಇದು ಎಲೆಕ್ಷನ್ ಗಿಮಿಕ್ ಅಂತ.

ರಾಹುಲ್ ಗಾಂಧಿಯ ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿದ ಕರ್ನಾಟಕ ಬಿಜೆಪಿರಾಹುಲ್ ಗಾಂಧಿಯ ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿದ ಕರ್ನಾಟಕ ಬಿಜೆಪಿ

ಅನ್ನು
ಏನೇ ಆಗಿರಲಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಅರ್ಹರಲ್ಲ. ಕರ್ನಾಟಕದ ಐದು ವರ್ಷ ವ್ಯರ್ಥವಾಯಿತು. ತೆರಿಗೆ ಪಾವತಿಸುವವರಿಗೆ ಯಾವ ಭಾಗ್ಯವೂ ಇಲ್ಲ.

ಕುಮಾರ್
ಎಲೆಕ್ಷನ್ ಆದ ಮೇಲೆ ಗೊತ್ತಾಗುತ್ತದೆ ಯಾರು ಪತರಗುಟ್ಟುತ್ತಾರೆ? ಬಿಜೆಪಿ ಆಗಲೇ ಹೇಳಿಯಾಗಿದೆ, ಸಾಲ ಮನ್ನಾ ಮಾಡಿದ್ದು ಅವರ ಒತ್ತಾಯದಿಂದ ಅಂತ.

ರಘು
ಸ್ವಾಮಿ ನಾವಿರೋದು 2017ರಲ್ಲಿ. ಜಾತಿ ರಾಜಕಾರಣ ಹತ್ತು ವರ್ಷಗಳ ಹಿಂದಿನ ವಿಷಯ. ಏನು ಮಾಡಿದರೂ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.

ಸಿದ್ದು ಕೊಟ್ಟ ಏಟಿಗೆ ಪತರಗುಟ್ಟುತ್ತಿರುವ ಕರ್ನಾಟಕ ಬಿಜೆಪಿ!ಸಿದ್ದು ಕೊಟ್ಟ ಏಟಿಗೆ ಪತರಗುಟ್ಟುತ್ತಿರುವ ಕರ್ನಾಟಕ ಬಿಜೆಪಿ!

ಜೆಪಿ
ಸುಳ್ಳು ಸುದ್ದಿ ಕೊಡಬೇಡಿ.

ಕುಮಾರ್
ಯಡಿಯೂರಪ್ಪ ಅವರ ಹೋರಾಟಕ್ಕೆ ಸಿಕ್ಕ ಜಯ.

ರವಿ
ಯಡಿಯೂರಪ್ಪ ಅವರ ಹೋರಾಟಕ್ಕೆ ಸಿಕ್ಕ ಜಯ? ಹಹಹಹ...ಮೊದಲು ಕೇಂದ್ರ ಸರಕಾರದಿಂದ ಸಾಲ ಮನ್ನಾ ಮಾಡಿಸೋಕೆ ಹೇಳಿ. ಆಮೇಲೆ ಯಡಿಯೂರಪ್ಪನವರ ಹೋರಾಟಕ್ಕೆ ಸಿಕ್ಕ ಜಯ ಅಂತ.

ಎಸ್ ಪಿ
ಸರಿಯಾಗಿ ಆಳೋಕೆ ಬಾರದವರು ಏನು ಮಾಡಿದರೂ ಹಾಳು ಮಾಡುತ್ತಾರೆ. ಮನಮೋಹನ್ ಸಿಂಗ್ ಸರಕಾರ ಆಹಾರ ಸುರಕ್ಷತೆ ಬಿಲ್ ಪಾಸ್ ಮಾಡಿ ಮತ್ತೆ ಅಧಿಕಾರದ ಕನಸು ಕಾಣುತ್ತಿತ್ತು. ಆದರೆ ದೊರಕಲಿಲ್ಲ.

ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ

ರವಿ
ನಲವತ್ತು ವರುಷದ ಹಿಂದೆ ಬಾಂಗ್ಲಾದೇಶದಿಂದ ವಲಸೆ ಬಂದು ರಾಯಚೂರು ಕ್ಯಾಂಪ್ ನಲ್ಲಿ ನೆಲೆಸಿರುವ ಆಕ್ರಮ ವಲಸೆಗಾರರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದು ಅವರು ಎಸ್ ಸಿ ಭಾಗ್ಯವನ್ನು ನೀಡಲು ಸಂಪುಟದಲ್ಲಿ ಅನುಮೋದನೆ ಮಾಡಿ, ಕೇಂದ್ರಕ್ಕೆ ಒಪ್ಪಿಗೆಗೆ ಕಳಿಸಿದ್ದಾರೆ.

ಹೇಗಿದೆ ನೋಡಿ. ಪಾಕಿಗಳಿಗೆ ಆಧಾರ್ ಕಾರ್ಡ್ ಕೊಟ್ಟರು. ಈಗ ಬಾಂಗ್ಲಾ ವೋಟ್ ಬ್ಯಾಂಕ್ ಗೆ ಅವರಿಗೆ ಎಸ್ ಸಿ, ಎಸ್ ಟಿ ಸ್ಥಾನಮಾನ ನೀಡಲು ಹೊರಟಿದ್ದಾರೆ . ಹೇಗಿದೆ ನೋಡಿ, ನಮ್ಮನ್ನು ಆಳುವವರ ಹೊಲಸು ರಾಜಕೀಯ! ದಯವಿಟ್ಟು ಈ ಸಲ ಬಿಜೆಪಿ /ಕಾಂಗ್ರೆಸ್ ಯಾರಿಗೂ ವೋಟ್ ಮಾಡಬೇಡಿ. ಜೆಡಿಎಸ್ ಗೆ ಕನ್ನಡಿಗರು ಸಪೋರ್ಟ್ ಮಾಡಬೇಕು.

English summary
Karnataka CM Siddaramaiah announces farmers loan waive off on Wednesday. Here is the response of Oneindia Kannada readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X