ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಪತ್ರ: ಸಂಸದ ರಾಜೀವ್ ಚಂದ್ರಶೇಖರ್ ಗೆ ಓದುಗನ ಅಭಿನಂದನೆ

ರೆರಾ ನಿಯಮಗಳ ಲೋಪಗಳ ಬಗ್ಗೆ ರಾಜೀವ್ ಚಂದ್ರಶೇಖರ್ ಪತ್ರ. ಈ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಅಜಿತ್ ನಾಯಕ್.

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್ ನಿಯಮಾವಳಿಗಳಲ್ಲಿರುವ (ರೆರಾ) ಲೋಪ ದೋಷಗಳ ಬಗ್ಗೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಎಂ. ಕೃಷ್ಣಪ್ಪ ಅವರಿಗೆ ಗುರುವಾರ ಪತ್ರ ಬರೆದು ಮನವರಿಕೆ ಮಾಡಲೆತ್ನಿಸಿದ್ದರು. ಆ ಸುದ್ದಿಯು ಒನ್ ಇಂಡಿಯಾದಲ್ಲಿ ಪ್ರಕಟವಾಗಿತ್ತು.

RERA ಕಾಯ್ದೆ ಲೋಪಗಳ ಬಗ್ಗೆ ಸಿಎಂಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ RERA ಕಾಯ್ದೆ ಲೋಪಗಳ ಬಗ್ಗೆ ಸಿಎಂಗೆ ಸಂಸದ ರಾಜೀವ್ ಚಂದ್ರಶೇಖರ್ ಪತ್ರ

ಈ ಸುದ್ದಿಗೆ ಅಜಿತ್ ನಾಯಕ್ ಎಂಬ ಓದುಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ರಾಜೀವ್ ಚಂದ್ರಶೇಖರ್ ಅವರ ನಡೆಯನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ರೆರಾ ಕಾಯ್ದೆಯನ್ನು ಅಭ್ಯಸಿಸಲೆಂದೇ ನೇಮಿಸಲಾಗಿದ್ದ ಸಮಿತಿಯಲ್ಲಿ ತಾವೂ (ರಾಜೀವ್ ಚಂದ್ರಶೇಖರ್) ಸದಸ್ಯರಾಗಿ ಸರ್ಕಾರಕ್ಕೆ ಉತ್ತಮ ಸಲಹೆಗಳನ್ನು ಕೊಟ್ಟಿದ್ದನ್ನು ಸ್ಮರಿಸಿದ್ದಾರೆ ಅವರು. ಅವರು ನೀಡಿರುವ ಪ್ರತಿಕ್ರಿಯೆಯ ಯಥಾವತ್ ಸ್ವರೂಪ ಇಲ್ಲಿದೆ.

One India Kannada reader thanks MP Rajiv Chandrasekhar's remarks about RERA dilution

ಮಾನ್ಯ ರಾಜ್ಯಸಭಾ ಸದಸ್ಯರಾದ ಶ್ರೀ ರಾಜೀವ್ ಚಂದ್ರಶೇಖರ್ ಇವರಿಗೆ ಧನ್ಯವಾದಗಳು. ಮನೆ / ಫ್ಲಾಟು/ ಅಪಾರ್ಟ್ಮೆಂಟು ಖರೀದಿಸುತ್ತಿರುವವರ ಹಿತರಕ್ಷಣೆ ಮಾಡಲು ತಾವು ನಿರಂತರವಾಗಿ ಗ್ರಾಹಕರ ಸರಿಯಾದ ಹಕ್ಕುಗಳಿಗಾಗಿ ತಮ್ಮ ಪ್ರಯತ್ನವನ್ನು ಮಾಡುತ್ತ ಬಂದಿರುವಿರಿ.

ವಿಜಯ ದಿವಸ್ ಅಂಗವಾಗಿ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ ವಿಜಯ ದಿವಸ್ ಅಂಗವಾಗಿ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ

ರಾಜ್ಯಸಭೆಯು ರೇರಾ ಕಾಯಿದೆಯನ್ನು ಅಂಗೀಕರಿಸುವ ಪೂರ್ವದಲ್ಲಿ ರೇರಾ ಮಸೂದೆಯನ್ನು ಅಭ್ಯಯಿಸಲು ನಿರ್ಮಿಸಿದ ಸಿಲೆಕ್ಟ್ ಕಮ್ಮಿಟಿಯ ಸದಸ್ಯರಾಗಿದ್ದ ತಾವು ಗ್ರಾಹಕರಿಗೆ ಅನುಕೂಲಕರವಾದ ಕಾಯಿದೆ ತರುವಲ್ಲಿ ಆ ಕಮ್ಮಿಟಿಗೆ ಯೋಗ್ಯಸಲಹೆಗಳನ್ನು ಕೊಟ್ಟು ನಿರ್ವಹಿಸಿದ ಪಾತ್ರವು ಗಮನಾರ್ಹವಾಗಿದ್ದು, ತದ್ನಂತರವೂ ತಾವು ಕಾಯಿದೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕ ಸರ್ಕಾರವನ್ನು ಮೇಲಿಂದ ಮೇಲೆ ಎಚ್ಚರಿಸುತ್ತಾ ಬಂದಿರುವಿರಿ.

ಪಾಕ್ ವಿರುದ್ಧದ ಮಸೂದೆಗೆ ಸಂಸದರ ಬೆಂಬಲ ಕೋರಿದ ರಾಜೀವ್ ಚಂದ್ರಶೇಖರ್ ಪಾಕ್ ವಿರುದ್ಧದ ಮಸೂದೆಗೆ ಸಂಸದರ ಬೆಂಬಲ ಕೋರಿದ ರಾಜೀವ್ ಚಂದ್ರಶೇಖರ್

ತಮ್ಮಂತೆಯೇ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷರಾಗುವ ಈಹಿಂದೆ 10 ವರ್ಷಗಳಷ್ಟು ದೀರ್ಘಕಾಲ ಅಮೆರಿಕೆಯಲ್ಲಿ ಸಾಫ್ಟವೇರ ಎಂಜೀನೀರ್ ಆಗಿ ಕೆಲಸಮಾಡಿ ಈಗ ಸಾಜಿಕ ಕಾರ್ಯಕರ್ತನಾಗಿ ಸೇವೆಸಲ್ಲಿಸುತ್ತಿರುವ ಶ್ರೀ ರವಿ ಕೃಷ್ಣ ರೆಡ್ಡಿ ಅವರೂ ಕೂಡ ಈ ಕಾಯಿದೆಯ ಮೇಲೆ ನಿಯಮಗಳನ್ನು ಮಾಡಲು ಸೇರಿದ ಮಂತ್ರಿಮಂಡಲದ ಸಭೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವ ಕೆಬಿನೆಟ್ ದರ್ಜೆಯ ಮಂತ್ರಿಗಳು ನೈತಿಕವಾಗಿ ಪಾಲುಗೊಳ್ಳಬಾರದಿತ್ತೆಂದು ಒಂದು ಮನವಿಯನ್ನು ರಾಜ್ಯಪಾಲರಿಗೆ ಕೊಟ್ಟಿರುವರು.

ಸುಮಾರು 325 ರಷ್ಟು ಚುನಾಯಿತ ಎಂಎಲ್ಏ, ಎಂಎಲ್ಸಿ ಮತ್ತು ಎಂಪಿ ಗಳು ಕರ್ನಾಟಕದಲ್ಲಿ ಇದ್ದರೂ ಈವರೆಗೆ ತಮ್ಮನ್ನು ಬಿಟ್ಟು ಯಾವೊಬ್ಬನೂ ಸ್ವಯಂಪ್ರೇರಿತರಾಗಿ ಈ ರೇರಾ ಕಾಯಿದೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವುದೇ ರೀತಿಯ ಒತ್ತಡ ಮತ್ತು ಪ್ರತಿಕ್ರಿಯೆಯನ್ನು ಕರ್ನಾಟಕ ಸರ್ಕಾರದ ಮೇಲೆ ಮಾಡದಿರುವುದು ಈ ಎಲ್ಲ ರಾಜಕಾರಣಿಗಳು ಒಂದಿಲ್ಲೊಂದು ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿರಬೇಕೆಂದು ಭಾವನೆಯಾಗುವದು.

ಕಾಯಿದೆಯನ್ನು ತಿಳಿದುಕೊಂಡು ಸರ್ಕಾರವು ಅಸಂವಿಧಾನಿಕ ರೀತಿಯಲ್ಲಿ ಈ ಕಾಯಿದೆಯನ್ನು ಅನುಷ್ಠಾನಮಾಡುತ್ತಿರುವ ದನ್ನು ಅರಿಯುವ ಬುದ್ಧಿಶಕ್ತಿ ಅವರಿಗಿಲ್ಲ ಎಂದು ಅನಿಸುವದು. ಈ ಕಾಯಿದೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ತಾವು ಮಾಡುತ್ತಿರುವ ಪ್ರಯತ್ನಕ್ಕೆ ಒಬ್ಬ ಕಾರ್ಯಕರ್ತನಾಗಿ ನಾನು ಚಿರಋಣಿಯಾಗಿರುವೆ.

- ಅಜಿತ್ ನಾಯಕ್

English summary
One of the reader of One India Kannada has thanked MP Rajiv Chandrasekhar for writing a letter to Chief Minister Siddaramaiah and Housing Minister M. Krishnappa about the dilution in RERA act implemented by Karnataka Government recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X