ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮಗಳೇ ಹೀಗೆ ಮಾಡಿದ್ರೆ? ಸ್ವಲ್ಪ ಯೋಚಿಸಿ ಸ್ವಾಮಿ!

By ರಾಜನ್
|
Google Oneindia Kannada News

ದಯವಿಟ್ಟು ಇಂತಹ ಮೂರ್ಖತನದ (ಸಚ್ಚಿದಾನಂದ ಹೆಗಡೆ) ಹೇಳಿಕೆಯನ್ನು ನಿಮ್ಮ ಸುದ್ದಿ ಜಾಲತಾಣದಲ್ಲಿ ಪ್ರಾಶಸ್ತ್ಯ ಕೊಟ್ಟು ಹಾಕಬೇಡಿ. ಹಿಂದೂ ಸಮಾಜದ ವಿಷಯವನ್ನು ಸ್ವಲ್ಪ ಪಕ್ಕಕ್ಕೆ ಇಡಿ. ಪ್ರಸ್ತುತ ವಿಚಾರಕ್ಕೆ ಬನ್ನಿ, ಶ್ರೀ ರಾಘವೇಶ್ವರರು ಹೇಗೆ ಇರುತ್ತಾರೆ, ಅವರ ವಕ್ತಿತ್ವ ಹಾಗು ಅವರ ಪರಿಚಯ ತಿಳಿಯದೆ ಅನ್ಯಥಾ ಬರೆಯುವುದೇ ಸಿಂಧು ಅಲ್ಲ.

ಒಂದೇ ಒಂದು ಮಾತಿನಲ್ಲಿ ಹೇಳಬೇಕಾದರೆ ನಾವು ಡಾ.ಕಲಾಂ ಅವರನ್ನು ಹೇಗೆ ಜನಮನದ ರಾಷ್ಟ್ರಪತಿಗಳು ಅಂತ ಹೇಳುತ್ತೀವೋ, ಹಾಗೆಯೆ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ತಮ್ಮ ಸರಳತೆ, ಪರಿಶುದ್ದ ಜೀವನ, ಮಗುವಿನಂತಹ ಮನಸ್ಸು ಹಾಗು ಜನಾನುರಾಗದಿಂದಾಗಿ "ದೀನ-ಬಡವರ ಹಾಗು ಜನಸಾಮಾನ್ಯರ ಸ್ವಾಮಿಗಳು" ಅಂತ ಲಕ್ಷ-ಲಕ್ಷ ಸಂಖ್ಯೆಯ ಸದ್ ಭಕ್ತರು ಅವರನ್ನು ಗೌರವದಿಂದ ನಮ್ಮ ಸ್ವಾಮಿಗಳು ಅಂತ ಕಾಣುತ್ತಿದ್ದಾರೆ. [ರಾಮಚಂದ್ರಾಪುರ ಮಠದ ಮೊಬೈಲ್ App ಬಿಡುಗಡೆ]

ಹಾಗು ಆ ಎಲ್ಲ ಭಕ್ತ-ಕೋಟಿಗಳ ಮನಸ್ಸು-ಭಾವನೆಗೆ ಧಕ್ಕೆ ತರುವ ಸಂಗತಿಯನ್ನು ಮೀಡಿಯಾ/ಮದ್ಯಮಗಳಲ್ಲಿ ಪ್ರಕಟಿಸುವುದು ನೋಡಿದರೆ ಭಾರತೀಯ ಮಾಧ್ಯಮಗಳ ಘನತೆ-ಗೌರವಕ್ಕೆ ಕುಂದಾಗುವುದಿಲ್ಲವೆ? ಯಾವುದೋ ಪಾಶ್ಚಾತ್ಯ ಮಾಧ್ಯಮಗಳು ಮಾಧ್ಯಮ-ಸ್ವಾತಂತ್ರ್ಯ ಅಂತ ತಮ್ಮ ಇಷ್ಟಕ್ಕೆ, ಸ್ವ-ಹಿತಕ್ಕೆ ಮುದ್ರಿಸಿ/ಛಾಪಿಸಿ ಮಾರುತ್ತವೆ. ಆದರೆ, ನಮ್ಮ ಮಾಧ್ಯಮಗಳೇ ಹೀಗೆ ಮಾಡಿದ್ರೆ? ಸ್ವಲ್ಪ ಯೋಚಿಸಿ ಸ್ವಾಮಿ...

Letter to editor : Be careful while writing against Raghaveshwara Swamiji

ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಶ್ರೀ ರಾಮಚಂದ್ರಾಪುರ ಮಠದ ಸ್ವಾಮಿಗಳೇ ಹೊರತು, ಮಠದ ಸ್ಥಿರಾಸ್ತಿ-ಚರಾಸ್ತಿಯ ಮಾಲಿಕರಲ್ಲ! ಯಾವುದೇ ಹಿಂದೂ/ಶಂಕರ ಮಠಗಳ ಸ್ವಾಮಿಗಳು ಹೇಗೋ ಅವರು ಹಾಗೇ. ಶ್ರೀ ಮಠದ ಸ್ವಾಮಿಗಳಾದ ಅವರು ಮಠದ ಉತ್ತರಾಧಿಕಾರವನ್ನು ಅವರ ಹಿಂದಿನ (ಹಿರಿಯ) ಸ್ವಾಮಿಗಳಿಂದ ಪಡೆದರೇ ಹೊರತು ಬೇರೆ ಜನಗಳಿಂದ ಅಲ್ಲ.

ಕ್ಷಮಿಸಿ ನನಗೆ ಈ ಹೆಗಡೆ ಅನ್ನೋರು ಯಾರು, ಯಾವ ಹಿಂದೂ ಸಂಘಟನೆಯ ನಾಯಕರು ಅಂತ ಗೊತ್ತಿಲ್ಲ. ಆದ್ರೆ, ಈ ಯಾರು ಕೂಡ ಶ್ರೀ ರಾಮಚಂದ್ರಾಪುರ ಮಠದ ಮಾಲಿಕರಲ್ಲ. ಯಾರು ಕೂಡ ಸ್ವಾಮಿಗಳಿಗೆ ಆಜ್ಞಾಪಿಸುವ, ಬೇರೆ ಸ್ವಾಮಿ ತಂದು ಕೂರಿಸುವ ಅಥವಾ ಮಠ ಬಿಟ್ಟು ಹೋಗಿ ಎನ್ನುವ ಅಧಿಕಾರ ಹೊಂದಿಲ್ಲ ಅಂತ ತಿಳಿದಿರುತ್ತೇನೆ.

ಸತ್ಯಕ್ಕೆ ಸಾವಿಲ್ಲ- ಸುಳ್ಳಿಗೆ ಸುಖವಿಲ್ಲ ಅಂತ ನಾನು ಕನ್ನಡ-ಶಾಲೆಯಲ್ಲಿ ಓದಿದ್ದು ನೆನಪಿದೆ. ಸತ್ಯವನ್ನು ಸುಳ್ಳು ಮಾಡಲು ಹೊರಟರೆ ಅದಕ್ಕೆ ಉದಾಹರಣೆ "ಗ್ಲಾಸ್ ನ ಮೇಲೆ ಧೂಳು ಕುಳಿತಾಗ ಆಕೃತಿ ಮಸಾಲಾಗಿ ಕಾಣುತ್ತದೆ, ಅದೇ ಧೋಳನ್ನು ಒರೆಸಿದರೆ ಪುನಃ ಗ್ಲಾಸ್ ಕ್ಲೀನ್ ಆಗಿ ಕಾಣಿಸುತ್ತೆ". ಸತ್ಯವು ಹಾಗೇ...ಅದು ಶಾಶ್ವತ.

ಹಿಂದೂ ಸಮಾಜಕ್ಕೆ ಶ್ರೀ ರಾಘವೇಶ್ವರ ಸ್ವಾಮಿಗಳು ಅಪಚಾರ ಮಾಡಿಲ್ಲ, ಹಿಂದೂ ಸಮಾಜದ ಉದ್ಧಾರ ಮಾಡಲು ವಿಎಚ್‌ಪಿ ಇದೆ, ಹಿಂದೂ ಸಂಘ ಹಾಗು ಸಂಘಟನೆಗಳು ಇವೆ. ಹಿಂದೂ ಸಮಾಜದ ಉದ್ದಾರ ಮಾಡಲು ಪಾಪ ಇವರ ಇಷ್ಟೊಂದು ಕಷ್ಟ ಪಡುವ ಅವಶ್ಯಕತೆ ಇಲ್ಲ ಅಂತ ಕಾಣುತ್ತೆ. ಇದರಲ್ಲಿ ಸ್ವ-ಹಿತ ಅಡಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ನಮ್ಮೆಲ್ಲರಿಗೂ ಕಾಡತೊಡಗಿದೆ. ಏನೆ ಇರಲಿ, ಮಾತನ್ನು ಆಡುವಾಗ ನಾವು ಸಮಾಜದ ಮುಂದೆ ಇದ್ದೇವೆ ಅಂತ ಸ್ವಲ್ಪ ಯೋಚಿಸಿ ನುಡಿಯುವುದು-ನಡೆಯುವುದು ವ್ಯಕ್ತಿಗೆ ಘನತೆ-ಗೌರವ ತಂದುಕೊಡುತ್ತದೆ.

ಇಂತಿ ನಿಮ್ಮ ಓದುಗ, ರಾಜನ್

English summary
Letter to the editor : A reader has urged media not to publish any story which is derogatory and mars the image of Raghaveshwara Swamiji of Ramachandrapur math, Hosanagar, Shivamogga. He says swamiji is respected by many devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X