ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಮಲದ ಕರ್ನಾಟಕ ಭವನ, ಗೋವಿಂದಾ ಕಾಪಾಡು!

By ಶಂಭು
|
Google Oneindia Kannada News

ತಿರುಮಲದಲ್ಲಿರುವ ಕರ್ನಾಟಕ ಭವನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವುದು ಎಲ್ಲ ಕನ್ನಡಿಗರಿಗೆ ಗೊತ್ತಿರುವ ವಿಷಯವೇ. ಹೀಗಾಗಿ ಗದ್ದಲಗಳ ಸಮಯದಲ್ಲಿ ನಮ್ಮ ಕನ್ನಡಿಗರು, ಕರ್ನಾಟಕ ಭವನದಲ್ಲಿ ಜಾಗ ಸಿಗದೇ ರಸ್ತೆ ಪಕ್ಕಾನೋ ಅಲ್ಲೋ ಇಲ್ಲೋ ಕುಟುಂಬ ಸಮೇತ ಮಲಗಿ, ಕನಿಷ್ಟ ತಿಮ್ಮಪ್ಪನ ದರ್ಶನವಾದರೂ ಸರಾಗವಾಗಿ ಆಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಊರಿಗೆ ಬರುತ್ತಾರೆ.

ಕರ್ನಾಟಕ ಭವನವಂತೂ ಕೆಲವೇ ಕೆಲವು ಜನರಿಗ ಮಾತ್ರ ಎಂಬಂತಾಗಿದೆ. ಕೇವಲ ತೆಲುಗು ಮಾತನಾಡಿದರೆ ಮಾತ್ರ ಅಲ್ಲಿ ರೂಮುಗಳು ಲಭ್ಯ ಎನ್ನುವ ಸ್ಥಿತಿ ಅಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಭಾಗದ ಜನರಂತೂ ಸಹಜವಾಗಿ ತೆಲುಗು ಮಾತನಾಡುತ್ತಾರೆ. ಹೀಗಾಗಿ, ಅವರಿಗೆ ಕಚೇರಿ ಸಿಬ್ಬಂದಿಯೊಂದಿಗೆ ಸಂವಹನ ಅವರ ಭಾಷೆಯಲ್ಲಿಯೇ ಆಗುವುದರಿಂದ ಅವರಿಗೆ ಸುಲಭವಾಗಿ ರೂಮು ಸಿಗುತ್ತದೆ.

ಇನ್ನು ಉತ್ತರ ಕರ್ನಾಟಕ ಭಾಷೆ ಮಾತನಾಡುವ ಭಕ್ತರನ್ನು ಕರ್ನಾಟಕ ಭವನದ ಸಿಬ್ಬಂದಿ ಪರಕೀಯರಂತೆ ನೋಡುತ್ತಾರೆ. ರೂಮು ಕೊಡುವುದಿರಲಿ ಕನಿಷ್ಟ ಬ್ಯಾಗ್ ಇಟ್ಟುಕೊಳ್ಳಲು ಕೂಡ ವ್ಯವಸ್ಥೆ ಮಾಡುವುದಿಲ್ಲ. ಅಲ್ಲಿಯೇ ಇರುವ ಒಂದು ರೂಮನ್ನು ಬ್ಯಾಗ್ ಇಟ್ಟುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ. ಬ್ಯಾಗ್ ಇಟ್ಟುಕೊಳ್ಳುವವರು ಹೇಳಿದ್ದೇ ರೇಟ್ ಅಲ್ಲಿ. ಬೆಲೆಬಾಳುವ ವಸ್ತುಗಳನ್ನು ತಂದವರಂತೂ ಯಾಕಾದರೂ ಕರ್ನಾಟಕ ಭವನಕ್ಕೆ ಬಂದೆನಪ್ಪಾ ಎಂದು ಕರ್ನಾಟಕ ಸರಕಾರಕ್ಕೆ ಶಾಪ ಹಾಕುತ್ತಾರೆ.

Karnataka Bhavan Accommodation Tirumala lacks hospitality

ಇನ್ನು ಕರ್ನಾಟಕ ಭವನದಲ್ಲಿ ಮಾಜಿ ಸಚಿವರೊಬ್ಬರು ದಿನನಿತ್ಯ ಅನ್ನದಾಸೋಹ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಒಂದು ಮಜವಾದ ವಿಷಯವೆಂದರೆ ಅವರು ತಮ್ಮ ಪತ್ರವನ್ನು ಸಾಕಷ್ಟು ಜನರಿಗೆ ನೀಡಿ ಭಕ್ತ ಸಮೂಹ ಕಳಿಸುವುದರಿಂದ ಕರ್ನಾಟಕ ಭವನದಲ್ಲಿ ಆ ಮಾಜಿ ಸಚಿವರ ಜನರೇ ತುಂಬಿ ತುಳುಕುತ್ತಿರುತ್ತಾರೆ. ಕರ್ನಾಟಕವೆಂದರೆ ಅವರೊಬ್ಬರೇ ಎಂಬಂತಾಗಿದೆ ಅಲ್ಲಿ. ಆ ಗೋವಿಂದನೇ ಕರ್ನಾಟಕ ಭವನಕ್ಕೆ ಹೋಗುವ ಭಕ್ತರನ್ನು ಕಾಪಾಡಬೇಕು.

ಇಷ್ಟಕ್ಕೂ, ಇದೇನೂ ನಮ್ಮ ಕರ್ನಾಟಕದ ಅಧಿಕಾರಿಗಳಿಗೆ, ಸಚಿವರಿಗೆ ಗೊತ್ತಿಲ್ಲ ಎಂದೇನಿಲ್ಲ. ಅವರಿಗೂ ಗೊತ್ತಿದೆ. ಎಲ್ಲಾ ತಿಮ್ಮಪ್ಪನ ಆಟ ಎಂದು ಸುಮ್ಮನಿದ್ದಾರೆ. ಕರ್ನಾಟಕ ಸರಕಾರದಿಂದ ಸಂಬಳ ಪಡೆಯುತ್ತಿರುವ ಕರ್ನಾಟಕ ಭವನದ ಸಿಬ್ಬಂದಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿರುವುದನ್ನು ನೋಡಿ ನೊಂದ ಕನ್ನಡಿಗರು ಆ ತಿಮ್ಮಪ್ಪನಾದರೂ ಯಾಕೆ ಸುಮ್ಮನಿದ್ದಾನೋ ಗೊತ್ತಾಗುತ್ತಿಲ್ಲ ಎಂದು ಹಿಡಿ ಶಾಪ ಹಾಕುತ್ತಾರೆ.

ಇಷ್ಟಕ್ಕೂ, ತಿರುಮಲಕ್ಕೆ ಹೋಗುವ ಭಕ್ತರು ಒಮ್ಮೆ ಕರ್ನಾಟಕ ಭವನದಲ್ಲಿ ಕಾಲಿಟ್ಟು ಬಂದರೆ ಗೊತ್ತಾಗುತ್ತದೆ. ನಮ್ಮ ಕರ್ನಾಟಕದ ಮರ್ಯಾದೆ ಹೇಗೆ ಹರಾಜುಗುತ್ತದೆ ಅಲ್ಲಿ ಎಂಬುದು.

ಕರ್ನಾಟಕ ಭವನದಲ್ಲಿನ ಸಿಬ್ಬಂದಿಗೆ ಏನಾದರೂ ಕೇಳಲು ಹೋದರೆ ಅಪ್ಪಟ ತೆಲುಗು ಭಾಷೆಯಲ್ಲಿ ಮಾತನಾಡಲಾರಂಭಿಸುತ್ತಾರೆ. ತೆಲುಗು ಬಾರದೇ ಹೆಂಡತಿ ಮಕ್ಕಳೊಂದಿಗೆ ಬಂದ ಭಕ್ತರು ಪೆಚ್ಚು ಮೋರೆ ಹಾಕಿಕೊಂಡು ಹೋಗುವ ದೃಶ್ಯ ಇಲ್ಲಿ ನಿತ್ಯ ಕಾಣಬಹುದು.

ಇದನ್ನು ಕಣ್ಣಾರೆ ನೋಡುವ "ಇದ್ದವರು" ವೆಂಕಟರಮಣ ಗೋವಿಂದಾ ಗೋವಿಂದಾ ಎನ್ನುತ್ತಾ ಕಣ್ಣು ಕಾಣದಂತೆ ಏನೂ "ಇಲ್ಲದವರಂತೆ" ತಮ್ಮ ಪರಮಭಕ್ತಿಯನ್ನು ಪ್ರದರ್ಶಿಸುತ್ತಾರೆ. ಮಾನವೀಯತೆಗೆ ಬೆಲೆ ನೀಡದವರು ವೆಂಕಪ್ಪನ ಗುಡ್ಡದ ಮೇಲೆಯೇ ಇದ್ದಾರೆ ಎಂಬುದು ಮಾತ್ರ ಅಚ್ಚರಿಯ ಸಂಗತಿ.

English summary
One of the primary objectives of Tirumala Tirupati Devsthanams (TTD) is to ensure that all the devotees get proper accommodation. But Karnataka Bhavan which is exclusive guest house for devotees from Karnataka is not getting proper hospitatlity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X