ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಆಯವ್ಯಯಕ್ಕೆ ಓದುಗರ ಚಾಟಿಏಟು

By Prasad
|
Google Oneindia Kannada News

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಮಂಡಿಸಿರುವ ಚೊಚ್ಚಲ ಬಜೆಟ್ಟಿಗೆ ವಿರೋಧಪಕ್ಷದ ನಾಯಕರು ಸಹಜವಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹಿಂದುಳಿದ ವರ್ಗವದವರನ್ನು ಓಲೈಸುವ ಉದ್ದೇಶದಿಂದ ಮತ್ತು ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಯವ್ಯಯ ಮಂಡಿಸಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿವೆ. ಹಾಗೆಯೆ, ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ಟಿಗೆ ಶಭಾಸಗಿರಿ ನೀಡಿರುವ ಓದುಗರೂ ಕಡಿಮೆಯೆ.

ಸೋನಿಯಾ ಗಾಂಧಿಯವರನ್ನು ಮೆಚ್ಚಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಕೋಟಿಗಟ್ಟಲೆ ಅನುದಾನ ನೀಡಿ, ಮಠಮಾನ್ಯಗಳನ್ನು ಕಡೆಗಣಿಸಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ. ಅಲ್ಲದೆ, ವಿಚ್ಛೇದಿತ ಮಹಿಳೆಯರಿಗೆ, ಅವಿವಾಹಿತ ಮಹಿಳೆಯರಿಗೆ ಮಾಶಾಸನ ನೀಡಿ ಏನನ್ನು ಸಾಧಿಸಲು ಸಿದ್ದರಾಮಯ್ಯ ಹೊರಟಿದ್ದಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಓದುಗರು ಮಂಡಿಸಿರುವ ಕೆಲ ಅಭಿಪ್ರಾಯಗಳು ಇಲ್ಲಿವೆ.

Karnataka budget 2013 : Letter to the editor

32.50 ಲಕ್ಷ ಯುವತಿಯರಿಗೆ ಋತುಚಕ್ರ ಸಂಬಂಧ ಶುಚಿತ್ವಕ್ಕಾಗಿ 10 ನ್ಯಾಪ್‌ ಕಿನ್ ಪ್ಯಾಡ್‌ ಉಚಿತ ವಿತರಣೆ! ಅತಿ ಎಕಾನಾಮಿಕಲ್ ಬಜೆಟ್ಟಾಯ್ತು ಇದು. ಅಂದ ಹಾಗೆ, ರಾಜ್ಯಾದ್ಯಂತ ಇರೋ ಗುಡಿಗಳಿಗೆ / ಮಠಗಳಿಗೆ ಒಟ್ಟಾರೆಯಾಗಿ ವಾರ್ಷಿಕ 10 ಕೋಟಿ ರು. ಬಿಡುಗಡೆ ಮಾಡಿದ್ದರೂ ಎಷ್ಟೋ ದೇವರುಗಳು ಮುಖ ತೊಳೆದುಕೊಳ್ತಾ ಇದ್ರು. ಗುಡಿಗಳು ಬೆಳಕು ಕಾಣುತ್ತಿದ್ದವು. ಈ ಸಿದ್ಧರಾಜರಿಗೆ ಈ ಯಾವ ದೇವರುಗಳ ಮುಖ ಯಾವುವೂ ಬೇಡ!

ಆದರೆ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದಾಗ ನಗಣ್ಯ ಎನಿಸುವಷ್ಟಿರುವ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ! ಇದರಿಂದ ದಿಲ್ಲೆಮ್ಮ ದೇವತೆಯ ಕೃಪೆಯಾಗುವುದಲ್ಲ! ಅದು ಸಾಕು. ಒಬ್ಬೊಬ್ಬರಿಗೆ ಎಷ್ಟೆಷ್ಟು ಬರುತ್ತೋ ಲೆಕ್ಕ ಹಾಕಿ. ಇದರ ಬದಲು ನೂರು ಕೋಟಿ ಕನ್ನಡ ಶಾಲೆಗಳ ಬಿಲ್ಡಿಂಗು ಕಟ್ಟಿಸಬಹುದಿತ್ತಲ್ಲವಾ? ಹೊಡಕೋರಿ ನಿಮ್ ನಿಮ್ ಮಾರಿಗೆ ನೀವs. ವೋಟ್ ಹಾಕಿ ಕೂಡಸೀರಿ ಇಂಥಾ ಮಂದೀನ. ಏನರ ಮಾಡಿ ಗುಜರಾತಕ್ಕ ಹೋಗಿ ಸೆಟ್ಲ್ ಆಗಬೇಕಾಗೇದ.

ರಘುನಂದ ಶರ್ಮಾ

***
ಅಬ್ಬ ಇವರು ಒಳ್ಳೆಯದು ಮಾಡೋಲ್ಲ, ಮಾಡುವವರಿಗೂ ಬಿಡೋಲ್ಲ. ಬಜೆಟ್ ಚೆನ್ನಾಗಿದೆ. ಗ್ರೇಟ್ ಸಿದ್ದು, ವೀ ಲವ್ ಯು. ಕೀಪ್ ಡೆವಲಪಿಂಗ್, ಡೋಂಟ್ ಬಾದರ್ ಅಬೌಟ್ ದಿ ಒಪ್ಪೊನಿಯನ್ಸ್ ಕಾಮೆಂಟ್ಸ್.

ಶ್ರೀಕಾಂತ

***
ನಿಮ್ಮ ಬಜೆಟ್ ಅಷ್ಟೊಂದು ಸಮರ್ಪಕವಾಗಿಲ್ಲ. ಮೊದಲು ಎಲ್ಲ ಗೌರ್ಮೆಂಟ್ ಆಫೀಸ್ ಗಳಿಗೆ ಅಂದ್ರೆ ಪೊಲೀಸ್ ಸ್ಟೇಷನ್, ಖಜಾನೆ, ಕೋರ್ಟ್, ಡಿಸಿ ಆಫೀಸ್, ತಾಲೂಕ್ ಆಫೀಸ್, ಟ್ರಾಫಿಕ್ ಪೊಲೀಸ್ ಮುಂತಾದ ಯಾವುದೇ ಸರಕಾರಿ ಡಿಪಾರ್ಟ್ಮೆಂಟ್‌ಗು ಸಹ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರೆ ಮತ್ತು ಆ ಎಲ್ಲ ಇಲಾಖೆಗಳಲ್ಲಿಯೂ ಸಹ ಒಬ್ಬೊಬ್ಬರಂತೆ ಗುಪ್ತಚಾರರನ್ನು ನೇಮಕ ಮಾಡಿದರೆ ಲಂಚ ತೆಗೆದುಕೊಳ್ಳುವುದು ಕಡಿಮೆ ಆಗುತ್ತದೆ. ಅದರಿಂದ ಎಲ್ಲಾ ಬಡವರಿಗೂ ಒಳ್ಳೆಯದಾಗುತ್ತದೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ.

ಭಾರತೀಯ

***

ದೇವರು, ಮಠಗಳಿಗೆ ಅನುದಾನ ಇಲ್ಲ. ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ 100 ಕೋಟಿ ಅನುದಾನ. ಯಾವ ಪಂಗಡದ ಮತ ಬೇಕು ಸ್ವಾಮಿ ನಿಮಗೆ? ದೇವರು, ಮಠಗಳಿಗೆ ಅನುದಾನ ಇಲ್ಲವೆಂದಾದರೆ ಮಸೀದಿ, ಹಜ್, ಯಾತ್ರಿಕರಿಗೂ ಯಾವುದೇ ಹಣಕಾಸಿನ ಅನುದಾನ ಕೊಡಬಾರದು. ನಿಮ್ಮ ಹತ್ರ ಆಗುತ್ತಾ ಸ್ವಾಮಿ ಈ ನಿರ್ಧಾರ ತೆಗೆದುಕೊಳ್ಳೋಕೆ?

ರಾಮು

***
40 ವರ್ಷ ದಾಟಿದ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ 500 ರೂ. ಮಾಸಾಶನ - Problem with such schemes are, those people neither see TV nor do they read News papers. So they will not come to know about the policy only. So some middleman (most of the time postmen and local leaders) eat up their money. So Govt needs to take some measures on how to make sure that the money reaches the real people who need it.

ತೊಟ್ಟೇಗೌಡ

***
but what he is given back to middle class people and tax payers? medical benefits? educational benefits? any road tax exemption? at lest good roads! any security to women and girl? any Govt planning to use wind/solar energy so that they can give quality electricity for formers? any irrigation projects based on all rivers to utilize best for drinking and irrigation water in all districts?

Ans : nothing, just all the govt bluff

all parties just wasting money in unproductive works, in many colleges there is no lecturers to teach to students for PUC/Degree. there is no proper ENGG/Medical colleges for students to get proper free eduction. Govt hospitals not having any doctors and no felicities.

many such things we can list....

ಎಲ್ಲಾ ಸರ್ಕಾರಗಳು ಅಂಗೈಯಲ್ಲಿ ಅರಮನೆ ತೋರಿಸುತವ್ವೆ

ಕನ್ನಡಿಗ

English summary
Karnataka budget 2013 : Letter to the editor. Opposition leaders and readers of Oneindia have given thumbs down to budget presented by Chief Minister Siddaramaiah. Grant to Christians, stipend to divorced women have irked the readers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X